ಕಿರಿಕಿರಿ-ತುಳು ಕಬಿತೆ

ಜಳ್ಳೊ ಪದೊಂದು ಬೇಗ ಬೇಗ
ಒಡನೊರ ಒಚ್ಚಿದೆ
ಸುದೆ ಬರಿತ ಇಮೈಟ್ ತೂಲ
ಮಾದಿಮಾಲೆ ಆನ್ ಉಂದುದೆ|
ನೆತ್ತಿ ಮಿಲ್ತ್ ಬತ್ತೆ ಸೂರ್ಯೆ
ದೊಂಡೆದ ಪಸೆನೆ ಆಜೋಂದುಂಡು
ನೀರಪನಿದ ನಲಿಕೆಗ್ ನಿನ್ನ ಮೋರೆ
ಪೊಸ ಬಣ್ಣೊಡು ಮಿನ್ಕೊಂದುಂಡು|
ತೆಲಿಕೆದ ಮೋನೆಡ್
ಬದ್‍ಕ್ ದ ಭಾಗ್ಯೋನೆ ತೋಜುಂಡು
ತೂಪಿನ ಕಣ್ಣ ಬೊಂಬೆಡ್ ತಾದಿ
ಪೊಸ ಬದ್‍ರ್‍ದ ಪಜ್ಜೆನೇ ಶುರುವಾಂಡ್|
DSC00166 ದೂರ ಆಯಿನ ಸಮ್ಮಂದೊ
ಒ೦ಜಾದ್ ಬನ್ನಗ ಉದಿತಂಡ್ ಮೋಕೆ ಪುಣ್ಣಮೆ
ಬತ್ತಿ ಸಾದಿಗ್ ಪಿರ ತಿರ್ಗ್‍ದ್ ತೂವಂದೆ
ಅಸರೆದ ಬದ್‍ಕ್‍ದಂಚಿಗೆ ಮೋನೆ|
ಜಳ್ಳೊ ಬೊಳ್ಳದ ಲಡಯಿದ ಲೆಕ್ಕ
ಬದ್‍ಕ್‍ಡ್ ದಾಯೆ ನಿತ್ಯಲ ಕಿರಿಕಿರಿ
ವಿಶ್ವಾಸೊದ ಪಾತೆರೊದೊಟ್ಟಿಗೆ ಬರಡ್
ಒ0ಜೆ ಸಾದಿಡೇ ನಡಪುಗ…..|

Advertisements

ಇಲ್ಲದ ಬೇಲೆ

ಬಾಲೆ ದಪ್ಪೆ ಬೇಲೆ ಕಂಡು
ಗಾದೆನೊಂಜಿ ಕೇನ್ದನ
ದಾನೆ ಕಾರ್ ನೀರ್ದ್ ಕುಲ್ಲುದ
ಎಂಕ್ ಒರ ಪನ್ಪನಾ?||
ಬಾಲೆದಪ್ಪೆಗ್ ಬೇಲೆ ತಪ್ಪಂದ್
ಗಾದೆ ಏಪೋಲ ಸತ್ಯೊನೇ
ಬಾಲೆದ ಚಾಕ್ರಿದೊಟ್ಟುಗೆ ಬೇಲೆ
ಇಲ್ಲ ಬೇಲೆನೇ ಯಾನೆ ಮಲ್ಪುನೆ||
ಅಲಯ ಬಾಲೆ ಬುಲಿಪು ಉಂತಾವುಜೆ
ಇ೦ಚಿಗೊರ ಬೇಗ ಬರ್ಪನ
ಅರ್ಟಿದ ಕೋಣೆಗೇನ್ ನೂರ್ಪೆ
ದಾದ ಮಲ್ಪೊಡುಂದು ಪನ್ಪನ||
DSC00272 ಬಾಲೆ ಬುಳ್ಪಂದೆನೇ
ಅಪ್ಪೆ ಮಿರೆನೆ ಕೊರಯಲ್
ಬಾಲೆದ ಬಂಜಿ ದಿಂಜಂತೆ
ಗಂಜಿ ತೆಲಿನೆ ಪರಯಲ್||
ತಾಟಿ ಬೊಟ್ಟೊಡಾಂಡ ರೆಡ್ಡ್ ಕೈ ಸೇರೊಡು
ಒರ್ಯನೊರಿ ತೆರಿಯೊಂದು
ಇಲ್ಲದ ಬೇಲೆ ಮಲ್ಪೊಡು
ತೆರಿಲೆ ಜನೊಕುಲೆ ಪೂರ
ಬಾಲೆದಪ್ಪೆಗ್ ಇರ್ಲ್ ಪಗೆಲ್ ಒಂಜೇನೆ
ಇಲ್ಲದುಳಯುದ ದೇವೆರಾರ್ ನಂಕ್
ಅರೆ ನಮನ್ ಪೆದ್ದಿನ ಅಪ್ಪೆನೆ||

– ವಿ.ಕೆ. ಕಡಬ
ಕಾರ್ಯಕ್ರಮ ನಿರೂಪಕರು
ರೇಡಿಯೋ ಸಾರಂಗ್ 107-8 ಎಫ್.ಎಂ.

ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಡಬ ಶ್ರೀನಿವಾಸ ರೈ

ರೇಡಿಯೊ ಸಾರಂಗ್ ನ “ಬಿನ್ನೆರೆ ಪಾತೆರ ಕತೆ ಯಲ್ಲಿ ಈ ವಾರ ನನ್ನೊ೦ದಿಗೆ ಅತಿಥಿಯಾಗಿ. ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಡಬ ಶ್ರೀನಿವಾಸ ರೈ .ಕರ್ನಾಟಕ ಮೇಳದಲ್ಲಿ5 ವರ್ಷ , ಪುತ್ತೂರು ಮೇಳದಲ್ಲಿ 2 ವರ್ಷ, ಕದ್ರಿಮೇಳದಲ್ಲಿ 2 ವರ್ಷ,ಮಂಗಳದೇವಿ ಮೇಳದಲ್ಲಿ 7 ವರ್ಷ ಇದೀಗ ಬಪ್ಪನಾಡು ಮೇಳದಲ್ಲಿ ಇವರ ಸೇವೆ. ಕಾಡ ಮಲ್ಲಿಗೆ,ಎಲ್ಲೂರ್ದ ಮಲ್ಲಿ ,ಕಚ್ಚೂರ ಮಲ್ದಿ ಇವರಿಗೆ ಹೆಸರು ತ೦ದುಕೊಟ್ಟ ಯಕ್ಷಗಾನಗಳು

ಕಡಬ ಶ್ರೀನಿವಾಸ ರೈ ಜೊತೆ ವಿ ಕೆ ಕಡಬ

ಕಡಬ ಶ್ರೀನಿವಾಸ ರೈ ಜೊತೆ ಕಡಬ ಸುನೀಲ್

DSC00313
http://news.suddimahithi.com/puttur/index.php?epaper_dates_epaper_news1Page=2

ಉದಯ ರಾಗ

ಇರುಳ ತೆರೆಯ ಸರಿಸುತ
ಹೊಸ ಬೆಳಕಿನ ಕಿರಣಧಾರೆ
ಚೈತನ್ಯದ ಸೊಬಗಿನಲಿ
ನೆಗೆದು ಬರುವ ಬಿಸಿಲು ಕುದರೆ ||
ಸ್ವಚ್ಚಂದದ ಹಾಡು, ಹಕ್ಕಿ ಕಲರವ
ಇಂಪುದನಿಯ ಇಂಚರ
ಉದಯರಾಗ ಬರುತಲಿ
ಭೂಮಿ ಸಂಕುಲ ಎಚ್ಚರ||
ಸೂರ್ಯ ನಿನ್ನ ಮರೆಯಲಾರೆನು
ಈ ನವಸ್ಫೂರ್ತಿ ತುಂಬಿದ ಜನ್ಮದಲಿ
ಕಾಲೋದಯದ ಹೊಸ್ತಿಲಲಿ
ಹೇಗೆ ನಿನ್ನ ಸ್ವಾಗತಿಸಲಿ?||
DSC00165ಭೂಮಿಯ ಚೆಲುವ ಕಂಡು
ಹೊಸ ಸಂವೇದನೆಯಲಿ ನಿನ್ನ ಪಯಣ
ಯಾವ ಒಲವು ತೋರಿ ಬರುವೆ
ಭುವಿಯ ಪದರದ ಸನಿಹಕೆ? ಯಾಕೆ ಮಾನ?||
ಕಾಲಗರ್ಭದ ಜನನಿ ನೀನು
ಸಂಜೆಯಾಗುತಲಿ ಮತ್ತೆ ಪಯಣ
ಇರುಳ ಕಡೆಗೆ
ದಿನದ ಹರುಷದ ಹೊನಲಿನಲಿ
ಈ ಜಗವೂ ನೋವ ಮರೆವ ಗಳಿಗೆ||
ನೀನು ಮೌನಿ ಬೆಳದಿಂಗಳ ತಬ್ಬಿ
ಉದಯಕಾಲಕೆ ಮರಳಿ ಬರಲಾರೆಯ
ಹೊಸ ಹರುಷವ ಹಬ್ಬಿ||

ನೆಂಪು — (ತುಳು ಕಬಿತೆ)

ಬರೆತೆ ನಿನ್ನ ಪುದರ್‍ನ್
ಗಡಾಯಿ ಕಲ್ಲ್ ದ ಮಿತ್ತ್ ಡ್
ಕಮ್ಮೆನದ ಗಾಳಿ ಇಯೆ
ಸೂರ್ಯೆ ಮುರ್ಕುನ ಪೊರ್ತುಡು || 1 ||
ಅರಮನೆ ದುಳಯಿ ಕುಲ್ಲಿನ ಪೊರ್ತು
ಆ ರಾತ್ರೆದ ಕನೊಟು
ನೆಂಪೊಂಜೆ ತೆಲಿತ್ ನಲಿತ್‍ನವು
ಪೊರ್ಲುದ ಮೂಜಿ ದಿನೊಟು || 2|| DSC00033
ಪಚ್ಚೆ ಪಜಿರ್‍ದ ಉಂತಿನ ಪನಿನೀರ್
ನಿನ್ನ ಪಜ್ಜೆಗ್ ಮುತ್ತಾಂಡ್
ನಿನ್ನ ಪೊರ್ಲುದ ತೆಲಿಕೆಗ್
ಎನ್ನುಡಲ್ ಶಾಂತಿದ ಕಡಲಾಂಡ್ || 3 ||
ನಿನ್ನ ಕಣ್ಣ ದೃಷ್ಠಿ
ಸಾದಿಗ್ ಬೊಪ್ಪಾದ್ ತೊಜುಂಡು
ಬಾನದಂಚಿ ತರೆದೇರ್ ತೂಲ
ನಿನ್ನ ಪೊರ್ಲುಗು ಬೊಳ್ಳಿಲ್ ಮಿನುಕು೦ಡು|| 4||
ಒರಿತೊನುವೆ ತುಳುವ ಮಣ್ಣ್ ದ ಸಾರ
ನಿನ್ನ ಮೋಕೆ ಎನ್ನುಡಲ ಬಲೊಕು
ಹಿರಿಯಕ್ಲು ಪಂಡಿ ಪಾತೆರೊಡು
ಪುದರ್ ಕೊನಲ ಪುಟ್ಟಿ ಕುಲೊಕು || 5 ||
ಮೂಡಯಿ ಪಡ್ಡಾಯಿ, ತೆನ್ಕಾಯಿ ಬಡ್ಕಾಯಿಡ್
ನಿನ್ನ ಪುದರೇ ಒರಿಯೊಡು
ಉಡಲ್ ದಿಂಜಿಂದ್ ಇತ್ತೆ
ತಾಟಿ ಬೊಟ್ಟುದು ನಲಿಪೊಡು || 6 ||

ತುಳು ಸ೦ಸ್ಕೃತಿ– ತುಳು ಕಬಿತೆ

ಬಾರೆದ ಬಲ್ಲ್‍ಡ್ ಪೂವುನು ಕಟ್ಟೊಂದು
ಪೂಮಾಲೆನ್ ಕೈಟ್ ಪತ್ತೊಂದು
ಓಡೆಗ್ ಪಿದಡ್‍ದ ಬಾಲೆ… 

ಸಾದಿ ಬರಿಯೆ ಪೂವುಂಡು
ಊರೊರ್ಮೆ ಐನ ಕಮ್ಮೆನುಂಡು
ಉಡಲೆನ್ನ ನಲಿಪುಂಡು
ಪೊರ್ಲ ಸಿಂಗಾರೊನೆ ತೊಜುಂಡು
ವೊಡೆಗ್ ಪಿದಡಿಯ ಬಾಲೆ…||
ಮದೆಪುದ ಇಲ್ಲುಂಡು
ತಟ್ಟಿದ ಬಾಕಿಲ್‍ಂಡು
ಇಲ್ಲ ಜಾಗ್‍ಡ್ ಜನಕುಲೆ ಸಾಲ್‍ಂಡು
ಓಡೆಗ್ ಪಿದಡಿಯಾ ಬಾಲೆ…

HEMANTH

ಅಡಪಿಂಜಿ ಏರು ತೋಜುಂಡು
ಎರು ದೇರುನ ಸೊರಕೇನುಂಡು
ನುಂಗೆಲ್ ಬಜವುದ ಮೊಟ್ಟಿಡ್
ಪೊಂಜೊವುಲ್ ಬೆನ್ಪುನ ತೋಜುಂಡು
ಓಡೆಗ್ ಪಿದಡಿಯಾ ಬಾಲೆ…
ಪುಣ್ಣಮೆ ಕರಿದಾಂಡ್
ಅಮವಾಸೆ ಬರೊಂದುಂಡು
ಸುಗ್ಗನೇ ಕರಿದಾಂಡ್
ಪಗ್ಗುನೇ ಬರ್ತ್‍ದಾಂಡ್
ಜಾತ್ರೆದ ಗರ್ದ್‍ಂಡು
ಉರೊಮ್ಮೆ ಗೌಜಿ ಉಂಡು
ನಿನ್ನ ಸಾದಿ ಒಂಜಿಗ್ ಬಾಲೆ…?

ಒಂಟಿ ಪಯಣದ ಸುತ್ತ

ಇದು2010 ರಲ್ಲಿ ಬರೆದ ನನ್ನ ಮೊದಲ ಕಥೆ ಓದಿ ಅಭಿಪ್ರಾಯ ತಿಳಿಸಿ………

ಅದು ಮುಂಜಾನೆಯ ಸಮಯ ರಾಜೀವ್ ಕಡಲ ತೀರದ ಸುಂದರ ಸೊಬಗನ್ನು ಸವಿಯುತ್ತಾ ಕುಳಿತಿದ್ದಾನೆ. ಕಡಲ ತಡಿಗೆ ಅಪ್ಪಳಿಸುವ ಅಲೆಗಳ ನರ್ತನ ನೋಡಿ ರಾಜೀವನ ಮನಸಿನಲ್ಲೂ ಹೊಸ ಭಾವದ ಅಂಕುರ. ಎಲ್ಲೋ ದೂರದಿಂದ “ಸಂಜೆಯ ರಾಗಕೆ ಬಾನು ಕೆಂಪೇರಿದೆ” ಎಂಬ ಭಾವಗೀತೆಯೊಂದು ಇಂಪಾಗಿ ಗಾಳಿಯ ನಡುವೆ ಆತನ ಕಿವಿಯನ್ನು ಹೊಕ್ಕಿತು. ರಾಜೀವ್ ಕುಳಿತಲ್ಲಿಯೆ ಯಾವುದೊ ವಿಚಾರದತ್ತ ಚಿಂತಿಸತೊಡಗಿದ. ಹೌದು ಪ್ರಕೃತಿಗೂ ಮಾನವನಿಗೂ ನಿಕಟವಾದ ಸಂಬಂಧವಿದೆ. ಅದು ಎಲ್ಲಾ ವಿಚಾರದಲ್ಲೂ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಪ್ರಕೃತಿಯ ಸಹಜ ಸ್ಪಂದನಕ್ಕಾಗಿ ಮನಸು ಕಾಯುತ್ತಿದೆ. ಪ್ರಕೃತಿಯ ಗುಣ ಮನುಷ್ಯನನ್ನು ಸಂತೋಷಪಡಿಸುತ್ತದೆ; ದುಃಖ ಪಡಿಸುತ್ತದೆ ಅಷ್ಟಲ್ಲದೆ ಆತ್ಮೀಯ ಸ್ನೇಹಿತನೂ ಈ ಪ್ರಕೃತಿಯೇ. ಹುಟ್ಟು ಸಾವಿನ ನಡುವೆ ಒಂದಿಷ್ಟು ಸಂತೋಷವನ್ನು ಅನುಭವಿಸಲು ಎಲ್ಲರಿಗೂ ಸಾಧ್ಯವಾಗದು. ರಾಜೀವನ ಮನಸಿನ ಯೋಚನೆ ಯಾಕೋ ವಿಶಾಲ ವಿಷಯದೊಳಗೆ ಹೋಗಿತ್ತು. ತನ್ನ ಕಲ್ಪನೆಯ ಲೋಕದಿಂದ ಒಮ್ಮೆ ಹೊರ ಬಂದ ರಾಜೀವ್‍ಗೆ ಹೃದಯದಲ್ಲಿ ನಡುಕ ಉಂಟಾಯಿತು. ಸುತ್ತಲು ಕತ್ತಲು ಆವರಿಸಿರುವ ಸನ್ನಿವೇಶ. ಒಂದೆಡೆ ಚಂದಿರನ ಆಗಮನ ಅತಿಯ ಅಬ್ಬರದಂತೆ ತನ್ನ ಮನಸಿನಲ್ಲೂ ಒಂದು ರೀತಿಯ ಏರಿಳಿತ ಹತ್ತಿರದಲ್ಲೇ ರಾಶಿ ಹಾಕಿದ್ದ ಮರಳಿನಿಂದ ಎದ್ದು ನಿಂತನು. ಅಷ್ಟರಲ್ಲಿ ತನ್ನ ಹಿಂದೆ ಯಾರೊ ನಿಂತಂತೆ ಕಾಣಿಸಿತು. ಬೆಳದಿಂಗಳಿನಲ್ಲೂ ಒಮ್ಮೆ ಆತಂಕಗೊಂಡು, ಇಲ್ಲಿ ಯಾರು ಇಲ್ಲವಲ್ಲ ಎನ್ನುತ್ತಾ ಮನೆಯ ದಾರಿಯತ್ತ ಹೆಜ್ಜೆ ಹಾಕಿದ ರಾಜೀವ್.
ಹೌದು ಇದು ನನ್ನ ಒಂಟಿ ಪಯಣ. ನನ್ನೊಂದಿಗೆ ಯಾರು ಇಲ್ಲ ಎಂದು ಒಂದು ಕ್ಷಣ ಆಲೋಚಿಸಿದರೆ, ಮರುಕ್ಷಣದಲ್ಲಿ ನನ್ನೊಂದಿಗೆ ಜೀವ ಜಗತ್ತೆ ಇರುವಾಗ ಯಾಕೆ ಭಯ ಎನ್ನುವ ಮತ್ತೊಂದು ಆಲೋಚನೆ ಮಾಡುತ್ತಾ ಮನಸಿನ ಮಾತುಗಳಿಗೆ ಬಣ್ಣ ಹಚ್ಚುತ್ತ ತನ್ನ ಮನೆಯ ಕಾಡು ದಾರಿಯತ್ತ ರಾಜೀವ್ ನಡೆದ. ಯಾರೋ ಹಿಂದೆ ಕಪ್ಪಗೆ ಕಾಣಿಸಿದಂತೆ ಆಯಿತು! ಒಂದು ಕ್ಷಣ ನಿಂತು ನಿಟ್ಟುಸಿರು ಬಿಡುತ್ತಾ ಸುತ್ತಲೂ ನೋಡಿದ… ನಿಶಬ್ದ… ಮತ್ತೆ ಒಂದೆಜ್ಜೆ ಮುಂದೆ ಇಟ್ಟಾಗ ಆಗಲೂ ಒಂದು ರೀತಿಯ ನಡುಗೆಯ ಸದ್ದು! ಹಿಂದೆ ಪೂರ್ತಿ ತಿರುಗದೆ ಸ್ವಲ್ಪ ತಿರುಗಿ ನೋಡಿದ… ಯಾವುದೋ ಪ್ರತಿಬಿಂಬ ಕಂಡಿತು. ಕಾಲಿಗೆ ಹಾಕಿ ಕೊಂಡ ಚಪ್ಪಳನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಹೆಜ್ಜೆ ಹಾಕಿದ. ಪ್ರತಿ ಹೆಜ್ಜೆಗೂ ಎದೆಯಲ್ಲಿ ಏನೋ ನಡುಕ. ಅಂದೊಮ್ಮೆ ರಾತ್ರಿ ವೇಳೆ ಮುತ್ತಜ್ಜಿ ಹೇಳಿದ ಭೂತ ಮತ್ತು ದೆವ್ವದ ಕತೆ ಹಾಗೆ ಒಮ್ಮೆ ಕಣ್ಣ ಮುಂದೆ ತೇಲಿ ಬಂದವು. ಈಗ ಸದ್ದು ಇಲ್ಲವೇ ಇಲ್ಲ.. ತನ್ನ ಕಾಲಿನ ಚಪ್ಪಲಿಯ ಶಬ್ದವೇ ನನ್ನನ್ನು ಬೆರಗುಗೊಳಿಸಿದೆ ಎಂದು ಮನದೊಳಗೆ ಗುನುಗುಡುತ್ತಾ ತನ್ನ ಮೂರ್ಖತನ ಅರಿವಾಗಿ ತನ್ನೊಳಗೆ ತಾನೇ ನಕ್ಕು ಬಿಟ್ಟ. ಮತ್ತೆ ದಾರಿಯುದ್ದಕ್ಕೂ ಎನೋ ಯೋಚನ ಲಹರಿ. ಹೌದು ಈ ಒಚಿಟಿ ಪಯಣ ಎಷ್ಟು ಬೇಸರ ಯಾರು ಅಷ್ಟೆ ಒಂಟಿಯಾಗಿ ಬದುಕಲು ಇಷ್ಟಪಡುವುದಿಲ್ಲ. ಮನುಷ್ಯ ಪ್ರತಿಯೊಂದು ಕಾರ್ಯಕ್ಕೊ ಯಾವುದನ್ನಾದರೂ ಅವಲಂಬಿಸಿಯೇ ಇರುತ್ತಾನೆ. ರಾಜೀವನ ಒಂಟಿ ಪಯಣ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ಏನೇನೊ ವಿಷಯಗಳು ಬಂದವು. ಬಂದಿರುವ ದಾರಿಯನು ಲೆಕ್ಕ ಹಾಕುತ್ತ ತನ್ನ ಪಯಣ ಮುಂದುವರಿಸಿದ.
ಬಾನ ಚಂದಿರ ಮೋಡದಾಚೆಗೆ ಒಮ್ಮೆ ಮುಳುಗಿ ಮತ್ತೆ ನಗುತ್ತಿದ್ದಾನೆ. ಆದರೆ ರಾಜೀವ್‍ನ ಮುಖದಲ್ಲಿ ಮಂದಹಾಸದ ನಗೆಯೇ ಇಲ್ಲ. ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎನ್ನುವ ಅನುಮಾನ ಅವನನ್ನು ಬಿಡಲೇ ಇಲ್ಲ.
ಮನುಷ್ಯ ಪ್ರಕೃತಿಯ ಒಂದು ಭಾಗವಷ್ಟೆ ಹುಟ್ಟುವಾಗ ಆತ ಏನನ್ನು ತೆಗೆದುಕೊಂಡು ಬರುವುದಿಲ್ಲ ಹೋಗುವಾಗಲೂ ಏನನ್ನು ಕೊಂಡು ಹೋಗುವುದಿಲ್ಲ ಆದರೂ ತನ್ನ ಸ್ಥಿರ ಇರುವಿಕೆಯಲ್ಲಿ ಹಣ, ಆಸ್ತಿ ಸಂಪತ್ತಿಗಾಗಿ ಹಂಬಲಿಸುತ್ತಾ ಇರುತ್ತಾನೆ. ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ದಿನ ಮಣ್ಣಿನ ಕಣವಾಗುತ್ತಾನೆ. ಒಂದು ದಿನ ಹೆಚ್ಚು ಕಡಿಮೆಯಷ್ಟೆ ಹಾಗಂತ ಆತ್ಮಹತ್ಯೆಗೆ ಈ ಜೀವಂತ ಅವಧಿಯಲ್ಲಿ ಪ್ರಯತ್ನಿಸುವುದು ಬುದ್ಧಿಜೀವಿ ಎಂದು ಕರೆದುಕೊಳ್ಳುವ ನಮಗೆ ಅರ್ಹವಲ್ಲ. ಈ ರಾಜೀವನ ಯೋಚನೆ ಎಲ್ಲಿಂದಲೋ ಶುರುವಾಗಿ ಗುರಿ ಇಲ್ಲದೆ ಇನ್ನೊಂದು ಕಡೆಗೆ ಬಂತು. ತನ್ನ ಒಂಟಿ ಪಯಣದಲಿ ಹುಟ್ಟು ಸಾವು – ಬದುಕು – ಸಾವು ಎಲ್ಲವೂ ತನ್ನ ಸ್ಮøತಿ ಪಟಲಕ್ಕೆ ಹೇಗೆ ಬಂದು ಎಂಬುದು ಪ್ರಶ್ನೆಯೇ ಸರಿ.
edward  lobo photo
ರಾಜೀವನಿಗೆ ನಡೆದು, ನಡೆದು ಸುಸ್ತೊ ಸುಸ್ತು… ಒಮ್ಮೆ ವಿಶ್ರಾಂತಿ ಪಡೆಯಬೇಕೆಂದು ದಾರಿ ಮದ್ಯೆಯಿಂದ ಬಂಡೆ ಕಲ್ಲಿನ ಮೇಲೆ ಮೆಲ್ಲನೆ ಕುಳಿತ.

ಕುಳಿತುಕೊಂಡ ರಾಜೀವ್‍ಗೆ ಮತ್ತೆ ತನ್ನ ಹಿಂದೆ ಯಾರೊ ಇದ್ದಂತೆ ಭಾಸವಾಯಿತು! ಬಹುಶಃ ನಾನು ಮೌನ ಇದ್ದದಕ್ಕೆ ನನ್ನ ಹಿಂದೆ ಏನೋ ಕಾಣದ ಅಶರೀರವಾಣಿ ಬರುತ್ತದೆ ಎಂದು ಯೋಜಿಸಿ ರೋಷಗೊಂಡು ಕೇಳಿಯೇ ಬಿಟ್ಟ “ಯಾರು ನೀನು? ನನ್ನ ಹಿಂದೆ ಸುತ್ತುವ ಅಗತ್ಯ ನಿನಗೇಕೆ? ಧೈರ್ಯವಿದ್ದರೆ ನನ್ನ ಮಾತಿಗೆ ಉತ್ತರ ಕೊಡು…” ರಾಜೀವನ ಪ್ರಶ್ನೆ ಪ್ರಶ್ನೆಯಾಗಿ ಉಳಿಯಿತು. ಮೌನ ವಾತಾವರಣ ಛೇ ಬಂಡೆಕಲ್ಲು ಜೀವಂತ ಇರುತ್ತಿದ್ದರೆ ಅದಾದರೂ ಉತ್ತರಿಸುತ್ತಿತ್ತು!

ರಾಜೀವ್ ಮತ್ತೆ ತನ್ನ ಯಾಣವನು ಮುಂದುವರೆಸಿದ. ಒಂಟಿಯಾಗಿ ಹೆಜ್ಜೆ ಹಾಕುವಾಗ ಪ್ರತಿ ಸಂದರ್ಭದಲ್ಲೂ ಏನೋ ವಿಭಿನ್ನ ವಿಷಯಗಳತ್ತ ಯೋಚನೆ. ಈ ಜೀವನ ಎಂಬುದು ಎಷ್ಟು ವಿಶಾಲ ಏನು ಬೇಕು ಅದೆಲ್ಲವನ್ನು ಪಡೆಯಬಹುದು. ನಮ್ಮೊಳಗಿನ ಬ್ರಹ್ಮಂಡದೊಳಗೆ ಯಾರು ಸಣ್ಣವರಲ್ಲ ಯಾರು ದೊಡ್ಡವರಲ್ಲ. ಜಾತಿ – ಭೇದ ಏನಿದ್ದರೂ ಜೀವಂತ ಅವಧಿಗೆ ಸೀಮಿತ. ಸತ್ತ ಮೇಲೆ ಆದರ್ಶ ಗುಣಗಳು ಮಾತ್ರ ಉಳಿದು ಬಿಡುತ್ತವೆ. ರಾಜೀವ್‍ನ ಒಂಟಿ ಪಯಣವಾದರೂ ಆತನ ಯೋಚನೆಗೆ ಏನು ಕೊರತೆ ಇರಲಿಲ್ಲ. ತನ್ನನ್ನೂ ತಾನು ಮರೆತು ದಾರಿಯುದ್ದ ನಡೆಯುತ್ತಿದ್ದಾನೆ.

ಬರು ಬರುತ್ತಾ ಕಾಡು ದಾರಿ ದೂರವಾಯಿತು. ಈಗ ಬಾನ ಚಂದಿರ ನಡು ನೆತ್ತಿಯ ಮೇಲಿದ್ದಾನೆ. ಒಂದು ಕ್ಷಣ ನಿಂತು ಮತ್ತೆ ಹಿಂದೆ ತಿರುಗಿ ನೋಡಿದ. ತನ್ನ ಹಿಂದೆ ಕಾಣುತ್ತಿದ್ದ ಯಾವುದೊ ಪ್ರತಿಬಿಂಬ ಈಗ ರಾಜೀವನ ಎಡಗಡೆಯಿಂದ ಬರುತ್ತಿರುವುದು ಕಾಣತೊಡಗಿತು. ಒಮ್ಮೆ ಓರೆಗಣ್ಣಿನಿಂದ ನೋಡಿ ಪಿಶಾಚಿ ಎಂದು ಭಾವಿಸಿ ಮನೆಯತ್ತ ವೇಗವಾಗಿ ಓಡುತ್ತಾ ಬಂದ.

ಹೋಗಿ ಹೋಗಿ ನಾನೇ ಸಿಗಬೇಕೆ ಬೇರೆ ಯಾರು ಈ ದಾರಿಯಲ್ಲಿ ಸಿಗಲಿಲ್ಲವೆ… ಪುಣ್ಯಕ್ಕೆ ನನ್ನ ಜೀವ ಹೋಗದಿದ್ದ ಸಾಕು ಎನ್ನುತ್ತಾ ಮನೆ ಸಮೀಪದ ಮರದಡಿಯಲ್ಲಿ ಬಂದು ಕುಳಿತ. ಹಿಂಬಾಲಿಸುಕೊಂಡು ಬರುತ್ತಿದ್ದ ಪ್ರತಿಬಿಂಬ ಈಗ ಮಾಯ…!

ಸುಂದರ ಬೆಳದಿಂಗಳಿಗೆ ಮರದ ನೆರಳು ಅಲಕೃತವಾಗಿ ಚಿತ್ತಾರ ಬಿಡಿಸಿದಂತೆ ಕಾಣುತ್ತಿತ್ತು. ರಾಜೀವ್ ಮತ್ತೆ ಅಲ್ಲೇ ಕೂತು ಯಾವುದೋ ವಿಚಾರದತ್ತ ಚಿಂತಿಸತೊಡಗಿದ ಮನುಷ್ಯ ನಂಬಿಕೆಯಿಂದ ಬಾಳುತ್ತಾನೆ. ಸುಳ್ಳು ಮೋಸ ವಂಚನೆ ಎಲ್ಲವೂ ಮಾಮೂಲಿ. ಒಂದೆಡೆ ಭೂತ, ಪ್ರೇತ, ಪಿಶಾಚಿ ಹಿರಿಯರು ಮಾಡಿದ ಕಟ್ಟುಕಟ್ಟಳೆ ಎಂದು ಭಾವಿಸಲೆ? ಅಥವಾ ಇದು ಪ್ರಕೃತಿಯ ಸಹಜವಾದ ಕಾಲ್ಪನಿಕ ಮಾಯೆ ಎನ್ನಬೇಕೆ? ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎನ್ನುವಷ್ಟರಲ್ಲಿ ಆತನ ತಲೆಯ ಮೇಲೆ ಹಣ್ಣು ಎಲೆಯೊಂದು ಬಿತ್ತು. ಆ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬನೇ ಮಾತಿಗೆ ಆರಂಭಿಸಿದ. ಪಾಪ ಈ ಹಣ್ಣು ಎಲೆ ಚಿಗುರಿದ ಸಮಯದಲ್ಲಿ ಇಬ್ಬನಿಯನು ತಬ್ಬಿ ಎಷ್ಟೊಂದು ಸುಖ ಅನುಭವಿಸಿರಬಹುದು.
ಮನುಷ್ಯನೂ ಅಷ್ಟೆ ಎನ್ನುತ್ತಾ ಎದ್ದು ಮತ್ತೆ ತನ್ನ ಮನೆದಾರಿಯನ್ನು ಹಿಡಿದ. ಮತ್ತೆ ವಿಚಿತ್ರ ಯೋಚನೆ… ಮನುಷ್ಯನ ಹುಟ್ಟು ನಿಗೂಢ ಸಾವು ಕೂಡ ಹಾಗೆಯೇ. ಸಾವಿನ ಸುಳಿಯೊಳಗೆ ಬಿದ್ದಾಗ ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ಈ ಒಂಟಿ ಜೀವನದಲ್ಲಿ ಯಾವ ವಿಷಯವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.

ತನ್ನ ಮನೆಯ ಅಂಗಳಕ್ಕೆ ಕಾಲಿಟ್ಟ. ಒಂದು ಕ್ಷಣ ಗಾಢವಾಗಿ ಯೋಚಿಸಿದ. ನನ್ನ ಜೀವನದ ಈ ಅವಧಿಯಲ್ಲಿ ಇದೊಂದು ಹೊಸ ಅನುಭವ ಎಂದು ಮನದಲ್ಲೆ ಮಾತಾಡುತ್ತಾ ನನ್ನ ಕಡಲ ತೀರದಿಂದ ನನ್ನ ಮನೆ ತನಕ ಬಂದಿರುವ ಆ ಕಾಣದ ವ್ಯಕ್ತಿ ಯಾರು ಎಂಬುದನ್ನು ಈಗ ಸ್ಪಷ್ಟಪಡಿಸಿಕೊಂಡ….!
ಈ ಮುಖದಲ್ಲಿ ಸ್ವಲ್ಪ ನಗು… ಇದುವರೆಗೆ ನನ್ನೊಂದಿಗೆ ಬಂದದ್ದು ಭೂತ, ಪ್ರೇತ, ಪಿಶಾಚಿ ಯಾವುದು ಅಲ್ಲ ನನ್ನ ಬೆನ್ನ ಹಿಂದಿನ ನೆರಳು…! ಹೌದು ರಾಜೀವ್ ಈವರೆಗೆ ಒಂಟಿ ಎಂದು ನಂಬಿದ್ದ. ಮನುಷ್ಯ ಯಾರು ಕೂಡ ಒಂಟಿ ಅಲ್ಲವೇ ಅಲ್ಲ. ನಮ್ಮ ಪ್ರತಿ ಸಂದರ್ಭದಲ್ಲೂ ನೆರಳು ನಮ್ಮೊಂದಿಗೆ ಸದಾ ಇರುತ್ತದೆ. ನೆರಳು ನಮ್ಮ ಪ್ರತಿಬಿಂಬವಾದರೂ ಅದು ನಮ್ಮನ್ನು ಕೈ ಬಿಡುವುದಿಲ್ಲ. ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಹೊಸ ದಾರಿಯನ್ನು ತೋರಿಸುತ್ತದೆ. ನೆರಳು ನಮ್ಮನ್ನು ಪ್ರೀತಿಸುತ್ತದೆ. ನೆರಳೇ ನಮ್ಮನ್ನು ಅನೈತಿಕತೆಗೂ ಒಮ್ಮೆಮ್ಮೆ ಕೊಂಡೊಯ್ಯುತ್ತದೆ. ನಮ್ಮ ಜೀವನದ ದಾರಿಯನ್ನು ತೋರಿಸುವುದು ನಮ್ಮ ನೆರಳು ಹೊರತು ಬೇರೆ ಯಾವುದು ಅಲ್ಲ ಮನುಷ್ಯನ ರೂಪ ಬೆಳ್ಳಗೆ ಇದ್ದರೂ ನೆರಳು ಮಾತ್ರ ಕಪ್ಪು….! ಮರದ ನೆರಳು ಅಒಂಟಿ ಪಯಣದ ಸುತ್ತ

ಅದು ಮುಂಜಾನೆಯ ಸಮಯ ರಾಜೀವ್ ಕಡಲ ತೀರದ ಸುಂದರ ಸೊಬಗನ್ನು ಸವಿಯುತ್ತಾ ಕುಳಿತಿದ್ದಾನೆ. ಕಡಲ ತಡಿಗೆ ಅಪ್ಪಳಿಸುವ ಅಲೆಗಳ ನರ್ತನ ನೋಡಿ ರಾಜೀವನ ಮನಸಿನಲ್ಲೂ ಹೊಸ ಭಾವದ ಅಂಕುರ. ಎಲ್ಲೋ ದೂರದಿಂದ “ಸಂಜೆಯ ರಾಗಕೆ ಬಾನು ಕೆಂಪೇರಿದೆ” ಎಂಬ ಭಾವಗೀತೆಯೊಂದು ಇಂಪಾಗಿ ಗಾಳಿಯ ನಡುವೆ ಆತನ ಕಿವಿಯನ್ನು ಹೊಕ್ಕಿತು. ರಾಜೀವ್ ಕುಳಿತಲ್ಲಿಯೆ ಯಾವುದೊ ವಿಚಾರದತ್ತ ಚಿಂತಿಸತೊಡಗಿದ. ಹೌದು ಪ್ರಕೃತಿಗೂ ಮಾನವನಿಗೂ ನಿಕಟವಾದ ಸಂಬಂಧವಿದೆ. ಅದು ಎಲ್ಲಾ ವಿಚಾರದಲ್ಲೂ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಪ್ರಕೃತಿಯ ಸಹಜ ಸ್ಪಂದನಕ್ಕಾಗಿ ಮನಸು ಕಾಯುತ್ತಿದೆ. ಪ್ರಕೃತಿಯ ಗುಣ ಮನುಷ್ಯನನ್ನು ಸಂತೋಷಪಡಿಸುತ್ತದೆ; ದುಃಖ ಪಡಿಸುತ್ತದೆ ಅಷ್ಟಲ್ಲದೆ ಆತ್ಮೀಯ ಸ್ನೇಹಿತನೂ ಈ ಪ್ರಕೃತಿಯೇ. ಹುಟ್ಟು ಸಾವಿನ ನಡುವೆ ಒಂದಿಷ್ಟು ಸಂತೋಷವನ್ನು ಅನುಭವಿಸಲು ಎಲ್ಲರಿಗೂ ಸಾಧ್ಯವಾಗದು. ರಾಜೀವನ ಮನಸಿನ ಯೋಚನೆ ಯಾಕೋ ವಿಶಾಲ ವಿಷಯದೊಳಗೆ ಹೋಗಿತ್ತು. ತನ್ನ ಕಲ್ಪನೆಯ ಲೋಕದಿಂದ ಒಮ್ಮೆ ಹೊರ ಬಂದ ರಾಜೀವ್‍ಗೆ ಹೃದಯದಲ್ಲಿ ನಡುಕ ಉಂಟಾಯಿತು. ಸುತ್ತಲು ಕತ್ತಲು ಆವರಿಸಿರುವ ಸನ್ನಿವೇಶ. ಒಂದೆಡೆ ಚಂದಿರನ ಆಗಮನ ಅತಿಯ ಅಬ್ಬರದಂತೆ ತನ್ನ ಮನಸಿನಲ್ಲೂ ಒಂದು ರೀತಿಯ ಏರಿಳಿತ ಹತ್ತಿರದಲ್ಲೇ ರಾಶಿ ಹಾಕಿದ್ದ ಮರಳಿನಿಂದ ಎದ್ದು ನಿಂತನು. ಅಷ್ಟರಲ್ಲಿ ತನ್ನ ಹಿಂದೆ ಯಾರೊ ನಿಂತಂತೆ ಕಾಣಿಸಿತು. ಬೆಳದಿಂಗಳಿನಲ್ಲೂ ಒಮ್ಮೆ ಆತಂಕಗೊಂಡು, ಇಲ್ಲಿ ಯಾರು ಇಲ್ಲವಲ್ಲ ಎನ್ನುತ್ತಾ ಮನೆಯ ದಾರಿಯತ್ತ ಹೆಜ್ಜೆ ಹಾಕಿದ ರಾಜೀವ್.
ಹೌದು ಇದು ನನ್ನ ಒಂಟಿ ಪಯಣ. ನನ್ನೊಂದಿಗೆ ಯಾರು ಇಲ್ಲ ಎಂದು ಒಂದು ಕ್ಷಣ ಆಲೋಚಿಸಿದರೆ, ಮರುಕ್ಷಣದಲ್ಲಿ ನನ್ನೊಂದಿಗೆ ಜೀವ ಜಗತ್ತೆ ಇರುವಾಗ ಯಾಕೆ ಭಯ ಎನ್ನುವ ಮತ್ತೊಂದು ಆಲೋಚನೆ ಮಾಡುತ್ತಾ ಮನಸಿನ ಮಾತುಗಳಿಗೆ ಬಣ್ಣ ಹಚ್ಚುತ್ತ ತನ್ನ ಮನೆಯ ಕಾಡು ದಾರಿಯತ್ತ ರಾಜೀವ್ ನಡೆದ. ಯಾರೋ ಹಿಂದೆ ಕಪ್ಪಗೆ ಕಾಣಿಸಿದಂತೆ ಆಯಿತು! ಒಂದು ಕ್ಷಣ ನಿಂತು ನಿಟ್ಟುಸಿರು ಬಿಡುತ್ತಾ ಸುತ್ತಲೂ ನೋಡಿದ… ನಿಶಬ್ದ… ಮತ್ತೆ ಒಂದೆಜ್ಜೆ ಮುಂದೆ ಇಟ್ಟಾಗ ಆಗಲೂ ಒಂದು ರೀತಿಯ ನಡುಗೆಯ ಸದ್ದು! ಹಿಂದೆ ಪೂರ್ತಿ ತಿರುಗದೆ ಸ್ವಲ್ಪ ತಿರುಗಿ ನೋಡಿದ… ಯಾವುದೋ ಪ್ರತಿಬಿಂಬ ಕಂಡಿತು. ಕಾಲಿಗೆ ಹಾಕಿ ಕೊಂಡ ಚಪ್ಪಳನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಹೆಜ್ಜೆ ಹಾಕಿದ. ಪ್ರತಿ ಹೆಜ್ಜೆಗೂ ಎದೆಯಲ್ಲಿ ಏನೋ ನಡುಕ. ಅಂದೊಮ್ಮೆ ರಾತ್ರಿ ವೇಳೆ ಮುತ್ತಜ್ಜಿ ಹೇಳಿದ ಭೂತ ಮತ್ತು ದೆವ್ವದ ಕತೆ ಹಾಗೆ ಒಮ್ಮೆ ಕಣ್ಣ ಮುಂದೆ ತೇಲಿ ಬಂದವು. ಈಗ ಸದ್ದು ಇಲ್ಲವೇ ಇಲ್ಲ.. ತನ್ನ ಕಾಲಿನ ಚಪ್ಪಲಿಯ ಶಬ್ದವೇ ನನ್ನನ್ನು ಬೆರಗುಗೊಳಿಸಿದೆ ಎಂದು ಮನದೊಳಗೆ ಗುನುಗುಡುತ್ತಾ ತನ್ನ ಮೂರ್ಖತನ ಅರಿವಾಗಿ ತನ್ನೊಳಗೆ ತಾನೇ ನಕ್ಕು ಬಿಟ್ಟ. ಮತ್ತೆ ದಾರಿಯುದ್ದಕ್ಕೂ ಎನೋ ಯೋಚನ ಲಹರಿ. ಹೌದು ಈ ಒಚಿಟಿ ಪಯಣ ಎಷ್ಟು ಬೇಸರ ಯಾರು ಅಷ್ಟೆ ಒಂಟಿಯಾಗಿ ಬದುಕಲು ಇಷ್ಟಪಡುವುದಿಲ್ಲ. ಮನುಷ್ಯ ಪ್ರತಿಯೊಂದು ಕಾರ್ಯಕ್ಕೊ ಯಾವುದನ್ನಾದರೂ ಅವಲಂಬಿಸಿಯೇ ಇರುತ್ತಾನೆ. ರಾಜೀವನ ಒಂಟಿ ಪಯಣ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ಏನೇನೊ ವಿಷಯಗಳು ಬಂದವು. ಬಂದಿರುವ ದಾರಿಯನು ಲೆಕ್ಕ ಹಾಕುತ್ತ ತನ್ನ ಪಯಣ ಮುಂದುವರಿಸಿದ.
ಬಾನ ಚಂದಿರ ಮೋಡದಾಚೆಗೆ ಒಮ್ಮೆ ಮುಳುಗಿ ಮತ್ತೆ ನಗುತ್ತಿದ್ದಾನೆ. ಆದರೆ ರಾಜೀವ್‍ನ ಮುಖದಲ್ಲಿ ಮಂದಹಾಸದ ನಗೆಯೇ ಇಲ್ಲ. ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎನ್ನುವ ಅನುಮಾನ ಅವನನ್ನು ಬಿಡಲೇ ಇಲ್ಲ.
ಮನುಷ್ಯ ಪ್ರಕೃತಿಯ ಒಂದು ಭಾಗವಷ್ಟೆ ಹುಟ್ಟುವಾಗ ಆತ ಏನನ್ನು ತೆಗೆದುಕೊಂಡು ಬರುವುದಿಲ್ಲ ಹೋಗುವಾಗಲೂ ಏನನ್ನು ಕೊಂಡು ಹೋಗುವುದಿಲ್ಲ ಆದರೂ ತನ್ನ ಸ್ಥಿರ ಇರುವಿಕೆಯಲ್ಲಿ ಹಣ, ಆಸ್ತಿ ಸಂಪತ್ತಿಗಾಗಿ ಹಂಬಲಿಸುತ್ತಾ ಇರುತ್ತಾನೆ. ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ದಿನ ಮಣ್ಣಿನ ಕಣವಾಗುತ್ತಾನೆ. ಒಂದು ದಿನ ಹೆಚ್ಚು ಕಡಿಮೆಯಷ್ಟೆ ಹಾಗಂತ ಆತ್ಮಹತ್ಯೆಗೆ ಈ ಜೀವಂತ ಅವಧಿಯಲ್ಲಿ ಪ್ರಯತ್ನಿಸುವುದು ಬುದ್ಧಿಜೀವಿ ಎಂದು ಕರೆದುಕೊಳ್ಳುವ ನಮಗೆ ಅರ್ಹವಲ್ಲ. ಈ ರಾಜೀವನ ಯೋಚನೆ ಎಲ್ಲಿಂದಲೋ ಶುರುವಾಗಿ ಗುರಿ ಇಲ್ಲದೆ ಇನ್ನೊಂದು ಕಡೆಗೆ ಬಂತು. ತನ್ನ ಒಂಟಿ ಪಯಣದಲಿ ಹುಟ್ಟು ಸಾವು – ಬದುಕು – ಸಾವು ಎಲ್ಲವೂ ತನ್ನ ಸ್ಮøತಿ ಪಟಲಕ್ಕೆ ಹೇಗೆ ಬಂದು ಎಂಬುದು ಪ್ರಶ್ನೆಯೇ ಸರಿ.

ರಾಜೀವನಿಗೆ ನಡೆದು, ನಡೆದು ಸುಸ್ತೊ ಸುಸ್ತು… ಒಮ್ಮೆ ವಿಶ್ರಾಂತಿ ಪಡೆಯಬೇಕೆಂದು ದಾರಿ ಮದ್ಯೆಯಿಂದ ಬಂಡೆ ಕಲ್ಲಿನ ಮೇಲೆ ಮೆಲ್ಲನೆ ಕುಳಿತ.

ಕುಳಿತುಕೊಂಡ ರಾಜೀವ್‍ಗೆ ಮತ್ತೆ ತನ್ನ ಹಿಂದೆ ಯಾರೊ ಇದ್ದಂತೆ ಭಾಸವಾಯಿತು! ಬಹುಶಃ ನಾನು ಮೌನ ಇದ್ದದಕ್ಕೆ ನನ್ನ ಹಿಂದೆ ಏನೋ ಕಾಣದ ಅಶರೀರವಾಣಿ ಬರುತ್ತದೆ ಎಂದು ಯೋಜಿಸಿ ರೋಷಗೊಂಡು ಕೇಳಿಯೇ ಬಿಟ್ಟ “ಯಾರು ನೀನು? ನನ್ನ ಹಿಂದೆ ಸುತ್ತುವ ಅಗತ್ಯ ನಿನಗೇಕೆ? ಧೈರ್ಯವಿದ್ದರೆ ನನ್ನ ಮಾತಿಗೆ ಉತ್ತರ ಕೊಡು…” ರಾಜೀವನ ಪ್ರಶ್ನೆ ಪ್ರಶ್ನೆಯಾಗಿ ಉಳಿಯಿತು. ಮೌನ ವಾತಾವರಣ ಛೇ ಬಂಡೆಕಲ್ಲು ಜೀವಂತ ಇರುತ್ತಿದ್ದರೆ ಅದಾದರೂ ಉತ್ತರಿಸುತ್ತಿತ್ತು!

ರಾಜೀವ್ ಮತ್ತೆ ತನ್ನ ಯಾಣವನು ಮುಂದುವರೆಸಿದ. ಒಂಟಿಯಾಗಿ ಹೆಜ್ಜೆ ಹಾಕುವಾಗ ಪ್ರತಿ ಸಂದರ್ಭದಲ್ಲೂ ಏನೋ ವಿಭಿನ್ನ ವಿಷಯಗಳತ್ತ ಯೋಚನೆ. ಈ ಜೀವನ ಎಂಬುದು ಎಷ್ಟು ವಿಶಾಲ ಏನು ಬೇಕು ಅದೆಲ್ಲವನ್ನು ಪಡೆಯಬಹುದು. ನಮ್ಮೊಳಗಿನ ಬ್ರಹ್ಮಂಡದೊಳಗೆ ಯಾರು ಸಣ್ಣವರಲ್ಲ ಯಾರು ದೊಡ್ಡವರಲ್ಲ. ಜಾತಿ – ಭೇದ ಏನಿದ್ದರೂ ಜೀವಂತ ಅವಧಿಗೆ ಸೀಮಿತ. ಸತ್ತ ಮೇಲೆ ಆದರ್ಶ ಗುಣಗಳು ಮಾತ್ರ ಉಳಿದು ಬಿಡುತ್ತವೆ. ರಾಜೀವ್‍ನ ಒಂಟಿ ಪಯಣವಾದರೂ ಆತನ ಯೋಚನೆಗೆ ಏನು ಕೊರತೆ ಇರಲಿಲ್ಲ. ತನ್ನನ್ನೂ ತಾನು ಮರೆತು ದಾರಿಯುದ್ದ ನಡೆಯುತ್ತಿದ್ದಾನೆ.

ಬರು ಬರುತ್ತಾ ಕಾಡು ದಾರಿ ದೂರವಾಯಿತು. ಈಗ ಬಾನ ಚಂದಿರ ನಡು ನೆತ್ತಿಯ ಮೇಲಿದ್ದಾನೆ. ಒಂದು ಕ್ಷಣ ನಿಂತು ಮತ್ತೆ ಹಿಂದೆ ತಿರುಗಿ ನೋಡಿದ. ತನ್ನ ಹಿಂದೆ ಕಾಣುತ್ತಿದ್ದ ಯಾವುದೊ ಪ್ರತಿಬಿಂಬ ಈಗ ರಾಜೀವನ ಎಡಗಡೆಯಿಂದ ಬರುತ್ತಿರುವುದು ಕಾಣತೊಡಗಿತು. ಒಮ್ಮೆ ಓರೆಗಣ್ಣಿನಿಂದ ನೋಡಿ ಪಿಶಾಚಿ ಎಂದು ಭಾವಿಸಿ ಮನೆಯತ್ತ ವೇಗವಾಗಿ ಓಡುತ್ತಾ ಬಂದ.

ಹೋಗಿ ಹೋಗಿ ನಾನೇ ಸಿಗಬೇಕೆ ಬೇರೆ ಯಾರು ಈ ದಾರಿಯಲ್ಲಿ ಸಿಗಲಿಲ್ಲವೆ… ಪುಣ್ಯಕ್ಕೆ ನನ್ನ ಜೀವ ಹೋಗದಿದ್ದ ಸಾಕು ಎನ್ನುತ್ತಾ ಮನೆ ಸಮೀಪದ ಮರದಡಿಯಲ್ಲಿ ಬಂದು ಕುಳಿತ. ಹಿಂಬಾಲಿಸುಕೊಂಡು ಬರುತ್ತಿದ್ದ ಪ್ರತಿಬಿಂಬ ಈಗ ಮಾಯ…!

ಸುಂದರ ಬೆಳದಿಂಗಳಿಗೆ ಮರದ ನೆರಳು ಅಲಕೃತವಾಗಿ ಚಿತ್ತಾರ ಬಿಡಿಸಿದಂತೆ ಕಾಣುತ್ತಿತ್ತು. ರಾಜೀವ್ ಮತ್ತೆ ಅಲ್ಲೇ ಕೂತು ಯಾವುದೋ ವಿಚಾರದತ್ತ ಚಿಂತಿಸತೊಡಗಿದ ಮನುಷ್ಯ ನಂಬಿಕೆಯಿಂದ ಬಾಳುತ್ತಾನೆ. ಸುಳ್ಳು ಮೋಸ ವಂಚನೆ ಎಲ್ಲವೂ ಮಾಮೂಲಿ. ಒಂದೆಡೆ ಭೂತ, ಪ್ರೇತ, ಪಿಶಾಚಿ ಹಿರಿಯರು ಮಾಡಿದ ಕಟ್ಟುಕಟ್ಟಳೆ ಎಂದು ಭಾವಿಸಲೆ? ಅಥವಾ ಇದು ಪ್ರಕೃತಿಯ ಸಹಜವಾದ ಕಾಲ್ಪನಿಕ ಮಾಯೆ ಎನ್ನಬೇಕೆ? ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎನ್ನುವಷ್ಟರಲ್ಲಿ ಆತನ ತಲೆಯ ಮೇಲೆ ಹಣ್ಣು ಎಲೆಯೊಂದು ಬಿತ್ತು. ಆ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬನೇ ಮಾತಿಗೆ ಆರಂಭಿಸಿದ. ಪಾಪ ಈ ಹಣ್ಣು ಎಲೆ ಚಿಗುರಿದ ಸಮಯದಲ್ಲಿ ಇಬ್ಬನಿಯನು ತಬ್ಬಿ ಎಷ್ಟೊಂದು ಸುಖ ಅನುಭವಿಸಿರಬಹುದು.
ಮನುಷ್ಯನೂ ಅಷ್ಟೆ ಎನ್ನುತ್ತಾ ಎದ್ದು ಮತ್ತೆ ತನ್ನ ಮನೆದಾರಿಯನ್ನು ಹಿಡಿದ. ಮತ್ತೆ ವಿಚಿತ್ರ ಯೋಚನೆ… ಮನುಷ್ಯನ ಹುಟ್ಟು ನಿಗೂಢ ಸಾವು ಕೂಡ ಹಾಗೆಯೇ. ಸಾವಿನ ಸುಳಿಯೊಳಗೆ ಬಿದ್ದಾಗ ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ಈ ಒಂಟಿ ಜೀವನದಲ್ಲಿ ಯಾವ ವಿಷಯವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.

ತನ್ನ ಮನೆಯ ಅಂಗಳಕ್ಕೆ ಕಾಲಿಟ್ಟ. ಒಂದು ಕ್ಷಣ ಗಾಢವಾಗಿ ಯೋಚಿಸಿದ. ನನ್ನ ಜೀವನದ ಈ ಅವಧಿಯಲ್ಲಿ ಇದೊಂದು ಹೊಸ ಅನುಭವ ಎಂದು ಮನದಲ್ಲೆ ಮಾತಾಡುತ್ತಾ ನನ್ನ ಕಡಲ ತೀರದಿಂದ ನನ್ನ ಮನೆ ತನಕ ಬಂದಿರುವ ಆ ಕಾಣದ ವ್ಯಕ್ತಿ ಯಾರು ಎಂಬುದನ್ನು ಈಗ ಸ್ಪಷ್ಟಪಡಿಸಿಕೊಂಡ….!
ಈ ಮುಖದಲ್ಲಿ ಸ್ವಲ್ಪ ನಗು… ಇದುವರೆಗೆ ನನ್ನೊಂದಿಗೆ ಬಂದದ್ದು ಭೂತ, ಪ್ರೇತ, ಪಿಶಾಚಿ ಯಾವುದು ಅಲ್ಲ ನನ್ನ ಬೆನ್ನ ಹಿಂದಿನ ನೆರಳು…! ಹೌದು ರಾಜೀವ್ ಈವರೆಗೆ ಒಂಟಿ ಎಂದು ನಂಬಿದ್ದ. ಮನುಷ್ಯ ಯಾರು ಕೂಡ ಒಂಟಿ ಅಲ್ಲವೇ ಅಲ್ಲ. ನಮ್ಮ ಪ್ರತಿ ಸಂದರ್ಭದಲ್ಲೂ ನೆರಳು ನಮ್ಮೊಂದಿಗೆ ಸದಾ ಇರುತ್ತದೆ. ನೆರಳು ನಮ್ಮ ಪ್ರತಿಬಿಂಬವಾದರೂ ಅದು ನಮ್ಮನ್ನು ಕೈ ಬಿಡುವುದಿಲ್ಲ. ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಹೊಸ ದಾರಿಯನ್ನು ತೋರಿಸುತ್ತದೆ. ನೆರಳು ನಮ್ಮನ್ನು ಪ್ರೀತಿಸುತ್ತದೆ. ನೆರಳೇ ನಮ್ಮನ್ನು ಅನೈತಿಕತೆಗೂ ಒಮ್ಮೆಮ್ಮೆ ಕೊಂಡೊಯ್ಯುತ್ತದೆ. ನಮ್ಮ ಜೀವನದ ದಾರಿಯನ್ನು ತೋರಿಸುವುದು ನಮ್ಮ ನೆರಳು ಹೊರತು ಬೇರೆ ಯಾವುದು ಅಲ್ಲ ಮನುಷ್ಯನ ರೂಪ ಬೆಳ್ಳಗೆ ಇದ್ದರೂ ನೆರಳು ಮಾತ್ರ ಕಪ್ಪು….! ಮರದ ನೆರಳು ಅನೇಕ ಜೀವರಾಶಿಗಳಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಆದರೆ ಮನುಷ್ಯ ತನ್ನ ನೆರಳಲ್ಲಿ ಯಾರಿಗಾದರೂ ಆಸರೆ ಕೊಟ್ಟಿದ್ದಾನೆಯೇ? ಆತ ಹಣ, ಆಸ್ತಿ, ಸಂಪತ್ತುಗಾಗಿಯೆ ಕಾದು ಕುಳಿತು ಸಮಯ ಹಾಳು ಮಾಡಿದ. ಒಳ್ಳೆಯ ವಿಚಾರ ನಮ್ಮನ್ನು ಭದ್ರಗೊಳಿಸುತ್ತದೆ. ನೆರಳು ನಮ್ಮ ಬದುಕಿನ ಸುತ್ತ ಇರುತ್ತದೆ. ನಾವು ಗಮನ ಕೊಡದಿದ್ದರೂ ಅದು ನಮ್ಮನ್ನು, ನಮ್ಮ ಚಟುವಟಿಕೆಯನ್ನು ಗಮನಿಸುತ್ತಲೇ ಇರುತ್ತದೆ. ರಾಜೀವ್ ತನ್ನ ಯೋಚನೆಗೆ ವಿರಾಮ ನೀಡಿ ಮನೆಯ ಕೋಣೆಯತ್ತ ನಡೆದ.

ನೇಕ ಜೀವರಾಶಿಗಳಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಆದರೆ ಮನುಷ್ಯ ತನ್ನ ನೆರಳಲ್ಲಿ ಯಾರಿಗಾದರೂ ಆಸರೆ ಕೊಟ್ಟಿದ್ದಾನೆಯೇ? ಆತ ಹಣ, ಆಸ್ತಿ, ಸಂಪತ್ತುಗಾಗಿಯೆ ಕಾದು ಕುಳಿತು ಸಮಯ ಹಾಳು ಮಾಡಿದ. ಒಳ್ಳೆಯ ವಿಚಾರ ನಮ್ಮನ್ನು ಭದ್ರಗೊಳಿಸುತ್ತದೆ. ನೆರಳು ನಮ್ಮ ಬದುಕಿನ ಸುತ್ತ ಇರುತ್ತದೆ. ನಾವು ಗಮನ ಕೊಡದಿದ್ದರೂ ಅದು ನಮ್ಮನ್ನು, ನಮ್ಮ ಚಟುವಟಿಕೆಯನ್ನು ಗಮನಿಸುತ್ತಲೇ ಇರುತ್ತದೆ. ರಾಜೀವ್ ತನ್ನ ಯೋಚನೆಗೆ ವಿರಾಮ ನೀಡಿ ಮನೆಯ ಕೋಣೆಯತ್ತ ನಡೆದ.

– ವಿ.ಕೆ. ಕಡಬ
ಕಾರ್ಯಕ್ರಮ ನಿರೂಪಕರು
ರೇಡಿಯೋ ಸಾರಂಗ್ 107-8 ಎಫ್.ಎಂ.