ಕಬಡ್ಡಿ ಪ೦ದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ


ದೀಪಾವಳಿಯ ಪ್ರಯುಕ್ತ ನವಜ್ಯೋತಿ ಆಲ೦ಕಾರು ಹಾಗೂ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಎಸೋಯೇಷನ್ ಇವುಗಳ ಸ್೦ಯುಕ್ತ ಆಶ್ರಯದಲ್ಲಿ ಗ್ರಾಮಸ್ಥರ ಮತ್ತು ದಾನಿಗಳ ಸಹಕಾರ ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹದೊ೦ದಿಗೆ ಕಬಡ್ಡಿ ಪ೦ದ್ಯಾವಳಿ ನಡೆಯಿತು.ಈ ಕಾರ್ಯ ಕ್ರ್ರಮದಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದೆ.ಕಬಡ್ಡಿ ಪ೦ದ್ಯಾಟದ ಒ೦ದು ಕ್ಷಣ

Advertisements

ಉತ್ತರ ಹೇಳಿ


ಡಾನ್ಸ್ ರಾಜ ಡಾನ್ಸ್ -ಪ್ರಮೋದ್ ಆಳ್ವ


ನೃತ್ಯ ಕಲಾವಿದ ಪ್ರಮೋದ್ ಆಳ್ವ(PRAMOD ALVA). ಇವರು 25,000 ವಿದ್ಯಾರ್ಥಿಗಳಿಗೆ ಡಾನ್ಸ್ ತರಬೇತಿ ನೀಡಿದವರು. 5 ಬಾರಿ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಕುಣಿಯೋಣು ಬಾರಾ ಸೇರಿದ೦ತೆ ಕನ್ನಡ ಮತ್ತು ಹಿ೦ದಿ ರೀಯಾಲಿಟಿ ಶೋಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಕಲರ್ ಟಿವಿ ಚಾನೆಲ್ ನಲ್ಲಿ “ಜೈ ಜನನಿ ದುರ್ಗಾ “ಕೊರಿಯೊಗ್ರಾಫರ್ ಮಾಡಿ ತುಳು ನಾಡಿನ ಯಕ್ಷಗಾನದ ಮೈಸಾಸುರ ವೇಷವನ್ನು ಅದ್ಭುತವಾಗಿ ಮಾಡಿದ್ದಾರೆ.
ಇವರ ಒ೦ದು ಡಾನ್ಸ್ ಇಲ್ಲಿದೆ ನೋಡಿ

ಇವರಿ೦ದ ತರಬೇತಿ ಹೊಂದಿದ ಅನೇಕರು ಕನ್ನಡ ಮತ್ತು ತುಳು ಸಿನೆಮಾಗಳಲ್ಲಿ ಮಿ೦ಚುತ್ತಿದ್ದಾರೆ.ಭಾರತದೆಲ್ಲೆಡೆ ಇವರು ವರ್ಕ್ ಶೋಪ್ ಕೂಡ ಮಡುತ್ತಿದ್ದಾರೆ.ಭರತನಾಟ್ಯ ಯಕ್ಷಗಾನಕ್ಕೂ ಹೆಜ್ಜೆ ಹಾಕಿರುವ ಇವರು ಎಲ್ಲಾ ಪ್ರಕಾರದ ಡಾನ್ಸ ನ್ನು ಕರಗತ ಮಾಡಿಕೊ೦ಡಿದ್ದಾರೆ

ಸ೦ದರ್ಶನ ದ ಸಮಯದಲ್ಲಿ ಪ್ರಮೋದ್ ಆಳ್ವ ಜೊತೆ

ಇವರ ಮತ್ತೊಂದು ಡಾನ್ಸ ನ್ನು ನೋಡಿ ಆನ೦ದಿಸಿ

ಪ್ರಮೋದ್ ಆಳ್ವ ರವರು ತಮ್ಮದೆ ಡಾನ್ಸ್ ತರಬೇತಿ ಸ೦ಸ್ತೆಯನ್ನು ಹುಟ್ತ್ತು ಹಾಕಿದ್ದಾರೆ.ಓದಿದ್ದು ಅರ್ಥಶಾಸ್ತ್ರ,ಉಪನ್ಯಾಸಕನಾಗಿ ಕೆಲಸ ಮಾಡಲು ಮನಸಿತ್ತು. ಆದ್ರೆ ಡಾನ್ಸ್ ನಲ್ಲಿ ತು೦ಬ ಆಸಕ್ತಿ ಮತ್ತು ಸಮಧಾನವಿದೆ.ಡಾನ್ಸ್ ನಲ್ಲಿ ಸಾಧನೆ ಮಾಡಲು ಯಾವುದಾದರು ಒ೦ದು ಪ್ರಕಾರದ ನೃತ್ಯ ಗೊತ್ತಿರಲೇ ಬೇಕು ಎ೦ಬುದು ಅವರ ಮನದಾಳದ ಮಾತು.

ರೇಡಿಯೋ ಸಾರ೦ಗ್ 107.8 FM ಟೀಮ್ ಜೊತೆಗೆ
.

ಇವರಿಗೆ ಇನ್ನಷ್ಟೂ ಅವಕಾಶಗಳು ಒದಗಿ ಬರಲಿ ಎ೦ಬುದೆ ನನ್ನ ಆಶಯ.

ನೋವು ಮರೆತು ಬದುಕುತ್ತಿರುವ ಪ್ರಕಾಶ್


ಬಂಟ್ವಾಳ ತಾಲೂಕಿನ ವಾಮದ ಪದವು ಪಾಂಗಲ್ಪಡಿ ಯಲ್ಲಿ ಇವರ ಮನೆ .2008 ರಲ್ಲಿ ಬಸ್ಸ್ ಅಪಘಾತ ದಲ್ಲಿ ತಮ್ಮ ಸೊಂಟ ಮತ್ತು ಕಾಲಿನ ಬಲವನ್ನು ಕಳೆದು ಕೊಂಡರು. ಬಸ್ಸಿನಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಇವರು ಬಸ್ಸಿನ ಅಡಿ ಭಾಗದಲ್ಲಿ ಸಿಲುಕಿದ ಪರಿಣಾಮವಾಗಿ ಜೀವನ ಪರ್ಯಂತ ಕೂತಲ್ಲಿಯೆ ಜೀವನ ಸಾಗಿಸಬೇಕಾದ ಸ್ಥಿತಿ ಇವರದಾಯಿತು.ಇವರು ಸದಾ ರೇಡಿಯೋ ಕೇಳಿಕೊಂಡು ತಮ್ಮ ದಿನವನ್ನು ಕಳೆಯುತಿದ್ದಾರೆ.ಆದರೆ ಇವರದು ಸದಾ ಚಟುವಟಿಕೆಯಿಂದ ಇದ್ದಾರೆ.ಅಧ್ಬುತ ಕವಿತೆಗಳನ್ನೂ ಬರೆಯ ಬಲ್ಲರು.ಜೊತೆಗೆ ಹಾದುಗಾರನೂ ಹೌದು .ಇವರೇ ತಯಾರಿಸಿದ ರೇಡಿಯೋ ವಿಶೇಷವಾಗಿದೆ .ಸಣ್ಣ ಮನೆಯಲ್ಲಿ ತಮ್ಮ ತಾಯಿ ಜೊತೆಗೆ ವಾಸವಾಗಿದ್ದಾರೆ.ರೇಡಿಯೋ ಸಾರಂಗ್107.8 fm ಎ೦ದರೆ ಇವರಿಗೆ ತುಂಬಾ ಇಷ್ಟ.ಇವರ ಕಷ್ಟವನ್ನು ಅರಿತು ನಾನು ಸಂದರ್ಶನ ಮಾಡಿದೆ. ಅನೇಕ ರೇಡಿಯೋ ಸ್ಹೇಹಿತ ಮಿತ್ರರು ಇವರಿಗೆ ಸಹಾಯವನ್ನೂ ಮಾಡಿರುವುದು ಹೆಮ್ಮೆಯ ವಿಷಯ .ಇತ್ತೀಚೆಗೆ ಇವರಿಗೆ ಗಾಲಿಕುರ್ಚಿಯ ಅಗತ್ಯ ಇದೆ ಅಂತ ಗೊತ್ತಾಯಿತು.ಅ ಸಮಯದಲ್ಲಿ ಮುಲಿಹಿತ್ಲುವಿನ ಅಶೋಕ್ ಎ೦ಬವರು ಮಂಗಳಾದೇವಿಯ ಗಣೇಶೋತ್ಸವ ಸಮಿತಿಗೆ ಒ೦ದು ಮನವಿಯನ್ನು ಕೊಟ್ಟರು .ಆಗ ಬಹು ಬೇಗನೆ ಸ್ಪಂದನೆ ದೊರೆಯಿತು .ಮೊನ್ನೆ ನಾನು ನನ್ನ ಸ್ಹೇಹಿತರಾದ ಅಶೋಕ್ ,ಸಿಂಚನಾ ಶ್ಯಾಮ್ ಮತ್ತು ಮನೆಯವರು ಹೋಗಿ ಅವರಿಗೆ ಗಾಲಿಕುರ್ಚಿಯನ್ನು ಹಸ್ತಾ೦ತರ ಮಾಡಿದೆವು

ಕಾಲಿನ ಮತ್ತು ಸೊಂಟದ ಬಲವನ್ನು ಕಳೆದುಕೊಂಡ ಪ್ರಕಾಶ್ ಪ೦ಗಲ್ಪಾಡಿ

ಕಾಲಿನ ಮತ್ತು ಸೊಂಟದ ಬಲವನ್ನು ಕಳೆದುಕೊಂಡ ಪ್ರಕಾಶ್ ಪ೦ಗಲ್ಪಾಡಿ


ಅಣ್ಣ,ಗಣೇಶ್ ಮತ್ತು ತಾಯಿ ಯಮುನಾ ಜೊತೆ ಪ್ರಕಾಶ್

ಅಣ್ಣ,ಗಣೇಶ್ ಮತ್ತು ತಾಯಿ ಯಮುನಾ ಜೊತೆ ಪ್ರಕಾಶ್


ಪ್ರಕಾಶರೇ ತಯಾರಿಸಿದ ರೇಡಿಯೋ

ಪ್ರಕಾಶರೇ ತಯಾರಿಸಿದ ರೇಡಿಯೋ


ಪ್ರಕಾಶ್ ಜೊತೆ ನಾನು (ವಿಕೆ ಕಡಬ ) ಮತ್ತು ಅಶೋಕ್

ಪ್ರಕಾಶ್ ಜೊತೆ ನಾನು (ವಿಕೆ ಕಡಬ ) ಮತ್ತು ಅಶೋಕ್


 ಗಾಲಿಕುರ್ಚಿ ಹಸ್ತಾ೦ತರದ ಸಂದರ್ಭ

ಗಾಲಿಕುರ್ಚಿ ಹಸ್ತಾ೦ತರದ ಸಂದರ್ಭ


ಪ್ರಕಾಶ್ ಗಾಲಿಕುರ್ಚಿಯಲ್ಲಿ ಓಡಾಟ ಮಾಡುತ್ತಿರುವುದು

ಪ್ರಕಾಶ್ ಗಾಲಿಕುರ್ಚಿಯಲ್ಲಿ ಓಡಾಟ ಮಾಡುತ್ತಿರುವುದು


ಪ್ರಕಾಶ್ ಇತ್ತೀಚೆಗೆ ಹಾಡಿದ ದೇಶ ಕಾಪು ವೀರ ಹಾಡನ್ನು ಕೇಳಲು ಇಲ್ಲಿಗೆ ಒತ್ತಿರಿ
http://yourlisten.com/thimmappavk/prakash-pangalpady-songs
ಇವರ ಸಂದರ್ಶನ ವನ್ನು ಕೇಳಲು ಇಲ್ಲಿಗೆ ಒತ್ತಿರಿ
http://yourlisten.com/thimmappavk/bennere-paterakate-prakash-pangalpady

ನೀವೂ ಇವರಿಗೆ ಸಹಾಯ ಮಾಡುವಿರಾ? ಸಂಪರ್ಕಿಸಿ 9686392283