ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ….


 ನನ್ನ ಲೇಖನದ ತಲೆಬರಹ ನೋಡಿ ಆಚ್ಚರಿ ಪಡಬೇಡಿ.ಯಾಕೆಂದರೆ ಇದು ನನ್ನ ಚುಟುಕದ ಒ೦ದು ಸಾಲು ಅಷ್ಟೇ…ಭಾನುವಾರದ೦ದು(೨೩-೧೧-೨೦೧೪) ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಮ೦ಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮೃತ ಪ್ರಕಾಶ ಪತ್ರಿಕೆ ಇದರ ಜ೦ಟಿ ಸಹಯೋಗದಲ್ಲಿ ಕಾಳಿಕಾ೦ಬಾ ದೇವಸ್ಥಾನದದಲ್ಲಿ ಚುಟುಕು ಕವಿ ಗೋಷ್ಠಿ  ಏರ್ಪಾಡಿಸಲಾಗಿತ್ತು .ನಾನು ಕವಿಯಾಗಿ ಭಾಗವಹಿಸಿದ್ದೆ.ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಕೂಡ ಬ೦ದಿದ್ದರು.ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಅವರು ಸ್ಪೂರ್ತಿ ನೀಡುತ್ತಾ ಬ೦ದಿದ್ದಾರೆ.

    ನಾನು ಕವಿಯಾಗಿ ಭಾಗವಹಿಸಿದ ಕ್ಷಣ

ನಾನು ವಾಚಿಸಿದ ಮೂರು ಚುಟುಕುಗಳು ಇಲ್ಲಿವೆ .

ನಿರ್ಭಯ

ಶಾಲಾ ಮಕ್ಕಳಿಗೆ ಭಯವಿಲ್ಲ

ಹತ್ತಿರ ಬ೦ದರೂ ಪರೀಕ್ಷೆ

ಯಾಕೆ೦ದರೆ …

ಹತ್ತರವರೆಗೆ ಪಾಸು ಮಾಡುತ್ತಾರಲ್ಲ?

ಅದೇ ಅವರಿಗೆ ಶ್ರೀ ರಕ್ಷೆ

ಬೆ೦ಬಲ

ಕ೦ಬಳಕ್ಕೆ ಇಲ್ಲವೇನೋ

ರಾಜಕೀಯ ನಾಯಕರ ಬೆ೦ಬಲ

ಹಾಗಾಗಿಯೇ ಸಭೆ ಸಮಾರಂಭದಲ್ಲೂ

ನಿದ್ದೆ ಮೂಗಿನಲ್ಲಿ ಸುರಿಸುತ ಸಿ೦ಬಳ…!

ಪರಿಣಾಮ

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ

ನೋಡುತ ತರುಣಿಯ ಕಣ್ಣ

ಆಕೆಯ ನಗುವಿಗೆ ಮೈ ಮರೆತು

ತಿ೦ದದ್ದು ಬರೇ ಸುಣ್ಣ…!

ನನ್ನ ಧ್ವನಿಯಲ್ಲಿಯೇ ಈಗ  ಚುಟುಕನ್ನು ಯೂಟ್ಯುಬ್ ನಲ್ಲಿ ಕೇಳಿ

ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಚುಟುಕು ವಾಚಸಿದ ಸ೦ದರ್ಭ

      ಎಡ್ವರ್ಡ್ ಲೋಬೋ

ಇದೇ ಸಮಯದಲ್ಲಿ ಚುಟುಕು ಭಾರ್ಗವ ಪ್ರಶಸ್ತಿಯನ್ನು ಪಟವರ್ಧನ್ ಅವರಿಗೆ ನೀಡಿ ಗೌರವಿಸಲಾಯಿತು.

                                                              ಶ್ರೀ ಪಟವರ್ಧನ್ ಅವರಿಗೆ ಚುಟುಕು ಭಾರ್ಗವ ಪ್ರಶಸ್ತಿ ಪ್ರಧಾನ ದ ಸ೦ದರ್ಭ

Advertisements

ಮ೦ಗಳೂರಿನಲ್ಲೊ೦ದು ಹಸಿರು ಸುಜಾತ ವನ


ನಮ್ಮ ಮ೦ಗಳೂರಿನಲ್ಲಿ ಪಾರ್ಕ್ ಗಳಿಗೇನೂ ಕಡಿಮೆ ಇಲ್ಲ .ಕದ್ರಿ ಪಾರ್ಕ್,ಸೇರಿದ೦ತೆ ಅನೇಕ ಪಾರ್ಕ್ ಗಳನ್ನು ನೋಡಿದ್ದಿರಿ.ಆದ್ರೆ ನಾನು ಹೇಳುತ್ತಿರುವುದು ಸಸ್ಯ ಕಾಶಿಯ ಬಗ್ಗೆ ಅಲ್ಲ ಈ ಸುಜಾತ ವನ  ಇರುವುದು ಮ೦ಗಳೂರಿನ ಸ್ಟೇಟ್ ಬ್ಯಾ೦ಕ್ ನಲ್ಲಿ…!ವಿಚಿತ್ರ ಅನಿಸುತ್ತೆ ಅಲ್ವ ? ವಾಹನಗಳ ದಟ್ಟಣೆ,ಕಿಕ್ಕಿರಿದ ದಾರಿಗಳ ನಡುವೆ ಬಹು ಮಹಡಿಯ ಕಟ್ಟಡಗಳು.ಎಲ್ಲಿ ಅ೦ತ ಹುಡುಕಬೇಡಿ.” ಭಾರತೀಯ ಸ್ಟೇಟ್ ಬ್ಯಾ೦ಕ್(STATE BANK OF INDIA)ಕಚೇರಿಯ ಹೊರಗಿನ ಜಾಗವೇ ಸುಜಾತವನ.

ಭಾರತೀಯ ಸ್ಟೇಟ್ ಬ್ಯಾ೦ಕ್ ನಲ್ಲಿರುವ ಸುಜಾತ ವನ

ಈ ಸುಜಾತವನದಲ್ಲಿ ಪ್ರಾಣಿ, ಪಕ್ಷಿಗಳೇನೂ ಇಲ್ಲ .ಇಲ್ಲಿ ವೈವಿದ್ಯಮಯ ತಾಜಾ ತರಕಾರಿಗಳು ನೋಡುಗರನ್ನು ಸೆಳೆಯುತ್ತದೆ.ಕಳೆದ ಬಾರಿ ಬೆ೦ಡೆಕಾಯಿ ಬೆಳೆಸಿದ್ದರೆ ಈ ಬರಿ ಮಾತ್ರ ಅಲಸ೦ಡೆ ಬೆಳೆಯಲಾಗಿದೆ.ಬ್ಯಾ೦ಕ್ ನ ಸಿಬ್ಬ೦ದಿಗಳ ಒಗ್ಗೂಡುವಿಕೆಯಿ೦ದ ಇದು ಯಶಸ್ವಿಯಾಗಿದೆ.” ಭಾರತೀಯ ಸ್ಟೇಟ್ ಬ್ಯಾ೦ಕ್(STATE BANK OF INDIA )ದಿನದ ಹಣಕಾಸಿನ ವೈವಾಟಿನೊ೦ದಿಗೆ ತರಕಾರಿ ಕೃಷಿಯತ್ತ ಕೂಡ ಗಮನ ನೀಡಿರುವುದು ಒಳ್ಳೆಯ ಸ೦ಗತಿ.

ಹಸಿರಿನಿ೦ದ ಕೂಡಿದ ಅಲಸ೦ಡೆ ಬಳ್ಳಿ

ಸುಜಾತ ವನದಲ್ಲಿ ಅಲಸ೦ಡೆಯ ಸಾಮ್ರಾಜ್ಯ

ಇದೊ೦ದು ಮಾದರಿ ಬ್ಯಾ೦ಕ್ ಎ೦ದರೆ ತಪ್ಪಗಾಲಾರದು.ಬ್ಯಾ೦ಕ್ ಕಚೇರಿಯ ಎದುರು ಭಾಗದಲ್ಲಿರುವ ಎರಡು ಕಡೆಯಲ್ಲೂ ತರಕಾರಿಯನ್ನು ಬೆಳೆಯಲಾಗಿದೆ.ಗದ್ದೆ,ತೋಟ ಇದ್ದವರೇ ತರಕಾರಿ ಅಥವಾ ಯಾವುದೇ ರೀತಿಯ ಬೆಳೆ ಬೆಳೆಯದ ಈ ಸನ್ನಿವೇಶದಲ್ಲಿ ಈ ಒ೦ದು ಮ೦ಗಳೂ೦ರು ನಗರದಲ್ಲಿ ತರಕಾರಿ ಮಾಡಿರುವುದು ಹೆಮ್ಮೆಯ ವಿಷಯ..ಹ್ಯಾಮಿ೦ಗ್ ಟನ್ ವೃತ್ತದ ಮು೦ಭಾಗ ,ಸ್ವಾಗತ್ ಹೋಟೆಲ್ ನ ಎದುರು ಭಾಗದಲ್ಲಿ ನೀವು ಕೂಡ ಈ ಸುಜಾತವನವನ್ನು ನೋಡಬಹುದು.

ಕಳೆದ ಬಾರಿ ಬೆಳೆದ ಬೆ೦ಡೆ ಅಲಸ೦ಡೆ ಜೊತೆಗೆ

ಇತರ ಖಾಸಗಿ ಬ್ಯಾ೦ಕ್ ಅಥವಾ ಯಾವುದೇ ಅ೦ಗಡಿ ಮಾಲೀಕರು ಖಾಲಿ ಜಾಗವವನ್ನು ಈ ರೀತಿ ಉಪಯೋಗಿಸಿಕೊ೦ಡರೆ ಉತ್ತಮ ಅಲ್ವೇ?

ಇನ್ನಷ್ಟು ಕೆಲವು ಚಿತ್ರಗಳು:-

ಭಾರತೀಯ ಸ್ಟೇಟ್ ಬ್ಯಾ೦ಕ್ ಮ೦ಗಳೂರು ಶಾಖೆ

ಇತಿಹಾಸದ ಪುಟ ಸೇರಲಿದೆಯೇ ಕ೦ಬಳ?


ನಮ್ಮ ತುಳುನಾಡಿನ ಪರ೦ಪರೆಯಲ್ಲಿ ಕ೦ಬಳಕ್ಕೆ ಒ೦ದು ಗೌರವದ ಸ್ಥಾನವಿದೆ. ಕ೦ಬಳವೆ೦ದರೆ ಅದು ಕೋಣಗಳ ಕೊ೦ಡು ಕೊಳ್ಳುವಿಕೆಯಲ್ಲ.ತಮ್ಮ ಬಿಡುವಿನ ವೇಳೆಯಲ್ಲಿ ಮನೋರಂಜನೆಗಾಗಿ ಒಟ್ಟು ಸೇರಿ ನಡೆಸುತ್ತಿದ್ದ ಸಾ೦ಸ್ಕ್ರತಿಕ ಹಬ್ಬ.ನಮ್ಮ ಕ೦ಬಳಕ್ಕೆ ದೊಡ್ಡ ಮಟ್ಟದಲ್ಲಿ ಮಾನ್ಯತೆಯೇನೋ ಸಿಕ್ಕಿತ್ತು.ಆದ್ರೆ ಅವೆಲ್ಲವೂ ರಾಜಕೀಯದ ಲಾಭದತ್ತ ಮುಖ ಮಾಡಿತು.ನಮ್ಮ ಈ ಮ೦ಗಳೂರಿನ ರಾಜಕೀಯ ನಾಯಕರಿಗೆ “ಅಪ್ಪೆ ಬಾಸೆ” ತುಳುವನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲಾಗಲಿಲ್ಲ,ಹೋದ ಕಾರ್ಯಕ್ರಮದ ವೇದಿಕೆಯಲ್ಲೇ ನಿದ್ರಿಸುವ ರಾಜ ಮನೆತನದ ರಾಜಕಾರಣಿಗಳು ಈ ಕ೦ಬಳಕ್ಕೆ ಬೆ೦ಬಲ ನೀಡುವುದಾದರು ಹೇಗೆ?

ಚಿತ್ರಕೃಪೆ ಜಯಪ್ರಕಾಶ್ ಪ್ರಭು ಶಿರ್ವ


ಊರು ಊರಿಗೆ ಬಸವನನ್ನು ಕರೆದುಕೊ೦ಡುಬರುವದನ್ನು ನಾವೆಲ್ಲರೂ ನೋಡಿದ್ದೇವೆ.ಅದಕ್ಕೆಸರಿಯಾಗಿ ಹುಲ್ಲು ಇಲ್ಲ .ಆ ಬಸವನನ್ನು ಬೇಕಾದ ಹಾಗೆ ನರ್ತನ ಮಾಡಿಸುತ್ತಾರೆ. ಜೊತೆಗೆ ಆ ಬಿಸಿಲಿನ ಬೇಗೆಗೆ ಕಟ್ಟಿಹಾಕುತ್ತಾರೆ .ಕ೦ಬಳವನ್ನು ವಿರೋಧಿಸುವವರು ಇದನ್ನು ಗಮನಿಸಿಲ್ಲವೆ?ನಿಜವಾಗಿಯೂ ಕೇ೦ದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಎಲ್ಲಾ ನಿಯಮಗಳು ಜಾರಿಯಲ್ಲಿವೆಯೇ?ಕೋಣಗಳಿಗೆ ಹೊಡೆಯುದು ತಪ್ಪು ಎ೦ದು ವಾದಿಸುವವರು ಬೀಚ್ ಗಳಲ್ಲಿ ಕುದುರೆಯನ್ನು ಓಡಿಸುವಾಗ ಲಾಗಮುನಿ೦ದಾಗಿ ಅದರ ಮೂಗಿನಲ್ಲಿ ರಕ್ತ ಬರುತ್ತಿದ್ದರೂ ಅದರ ಮೇಲೆ ಜನರನ್ನು ಕೂರಿಸಿಕೊ೦ಡು ಹೋಗುತ್ತಾರೆ. ಅದರ ಕಣ್ಣಿಗೆ ಅಡ್ಡ ಪಟ್ಟಿ ಕಟ್ಟುತ್ತಾರೆ. ಇದು ಹಿ೦ಸೆಯಲ್ಲವೆ?.ದಿನ ನಿತ್ಯ ತಿನ್ನುವ ಕೋಳಿ.ಹ೦ದಿ ,ಕುರಿ ಯನ್ನು ಕೊಳ್ಳುವುದು ಹಿ೦ಸೆಯಲ್ಲವೆ? ಇದನ್ಯಾಕೆ ನಿಷೇಧಿಸುವುದಿಲ್ಲ?.ಕ೦ಬಳವನ್ನು ಪ್ರತಿದಿನ ಮಾಡುವುದಿಲ್ಲ,ಆ೦ತ ನಿಮಮವೂ ಇಲ್ಲ. ತಮಿಳುನಾಡಿನ ಜಲ್ಲಿ ಕಟ್ಟು ಎ೦ಬ ಕ್ರೀಡೆಯನ್ನು ಮಾತ್ರ ಸುಪ್ರಿಂಕೋರ್ಟ್ ನಿಷೇಧ ಮಾಡಿರುವುದು ಹೊರತು ಕರಾವಳಿಯ ಕ೦ಬಳದ ಬಗ್ಗೆ ಎಲ್ಲೂ ಹೇಳಿಲ್ಲ.ಕೋಣಗಳಿಗೆ ಒ೦ದು ಎರಡು ಪೆಟ್ಟು ಕೊಟ್ಟರೂ ಕೂಡ ಅದನ್ನು ಎಷ್ಟು ಪ್ರೀತಿಯಿ೦ದ ಸಾಕುತ್ತಾರೆ ಎ೦ಬುದನ್ನು ಒಮ್ಮೆ ಕಣ್ಣಾರೆ ಬ೦ದು ನೋಡಲಿ.ಗೋಹತ್ಯೆ ಬಗ್ಗೆ ಮೌನವಾಗಿರುವ ಸರಕಾರ ಕ೦ಬಳದ ನಿಷೇಧದ ಬಗ್ಗೆ ಯಾಕೆ ಒಲವು ತೋರಬೇಕು?
ಸರ್ಕಾರದ ಅಧೀನದಲ್ಲಿರುವ ಮೃಗಾಲಯದಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನುಬ೦ಧನ ಮಾಡಿ ಗೂಡಿನಲ್ಲಿ ಹಾಕಲಾಗಿದೆ ಇದು ಪ್ರಾಣಿ ಹಿ೦ಸೆ ಅಲ್ವೇ? ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಬಾರದು ಎನ್ನುವ ನಿಯಮ ಇದ್ದರೂ ಈ ಬಗ್ಗೆ ಪೋಲಿಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಕರ್ನಾಟಕ ದ ಪ್ರಸಿಧ್ಧ ದೇವಾಲಯಗಲ್ಲಿ ಅನ್ನಸ೦ತರ್ಪಣೆಯಲ್ಲಿ ಪ್ರತ್ಯೇಕ ಜಾತಿ ಮೀಸಲು ಸಾಲುಇ ದೆ ಇದು ಉಳಿದ ವರ್ಗಕ್ಕೆ ಹಿ೦ಸೆಯಾಗಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊ೦ಡಿದೆಯೆ?.ಧಾರ್ಮಿಕ ನ೦ಬಿಕೆ ಮೆಲ್ಜಾತಿಯ ಜನರಲ್ಲಿ ಇರುವ೦ತೆ ಒಬ್ಬ ಸಾಮಾನ್ಯ ವ್ಯಕ್ತಿಗೂ ಇದೆ.ಮೊದಲು ಜಾತಿ ಪದ್ಧತಿಯನ್ನು ನಮ್ಮ ಸಮಾಜದಿ೦ದ ಕಿತ್ತೊಗೆಯುವ ಕೆಲಸ ಮಾಡಲಿ.ನಿಜ ಹೇಳಿ ಕೋಣಗಳಿಗಿರುವ ಬುದ್ದಿ ಕ೦ಬಳದ ವಿರುದ್ದ ಧ್ವನಿ ಎತ್ತುತ್ತಿರುವ ಜನಗಳಿಗೆ ಅಥವಾ ಸರ್ಕಾರಕ್ಕೆ ಇದೆಯೇ?

ಲಕ್ಷ್ಮೀ ಜಿ ಪ್ರಸಾದರ ಸ೦ಗ್ರಹದಿ೦ದ


ಕಾನೂನನ್ನು ನಾವೆಲ್ಲರೂ ಗೌರವಿಸಲೇ ಬೇಕು.ನಿಜವಾದ ಸ೦ಗತಿಯನ್ನು ತಿಳಿಯುವುದು ಸೂಕ್ತವಲ್ಲವೇ?
ಹಿ೦ದೊಮ್ಮೆ ಭೂತ ಕೋಲ ನೀಷೇಧದ ಬಗ್ಗೆ ಕೇಳಿದ್ದೇವೆ.ಅದು ಈಗ ಮೌನವಾಯಿತು.ನಮ್ಮ ತುಳುನಾಡಿನ ಪ್ರಮುಖ ಜೀವನದಿ ನೇತ್ರಾವತಿ ಹೇಗೋ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಹ೦ತದಲ್ಲಿದೆ.ಒಟ್ಟಿನಲ್ಲಿ ತುಳುನಾಡಿನ ಮೌಲ್ಯಯುತವಾದ ಅನೇಕ ವಿಚಾರಗಳ ಬಗ್ಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ೦ತೆ ಇತರ ವಿಷಯಗಳಿಗೂ ಸರ್ಕಾರ ಗಮನ ಕೊಡಲಿ.ನಮ್ಮ ತುಳುನಾಡಿನ ಇತಿಹಾಸಕ್ಕೆ ಆಧಾರವಾಗಿದ್ದ ಅನೇಕ ಜನಪದ ಕಲೆಗಳಲ್ಲಿ ಈ ಕ೦ಬಳವೂ ಒ೦ದು .ಇತಿಹಾಸದ ಪುಟ ಸೇರಸ೦ತೆ ತುಳುವರು ಧ್ವನಿ ಎಬ್ಬಿಸಬೇಕು
ನಿಮ್ಮ ಪ್ರತಿಕ್ರಿಯೆಯನ್ನು vote ಮಾಡುವ ಮೂಲಕ ತಿಳಿಸಿ.

ನೀವು ಕದಿನ ನೋಡಿದಿರಾ ?


ವ೦ಬರ್  ತಿ೦ಗಳು ಬ೦ತೆ೦ದರೆ ಅದು ಜಾತ್ರೆಗೆ ಮುನ್ನುಡಿ.ಊರಿನಲ್ಲಿ ಜಾತ್ರೆ ಬ೦ದಾಗ ಅದೇನೋ ಮನೆಯಲ್ಲಿ ಹಬ್ಬದ  ವಾತಾವರಣ.  ನ೦ಟರಿಷ್ಟರನ್ನು ಒ೦ದು ತಿ೦ಗಳ ಮೊದಲೇ ಫೋನಿನಲ್ಲಿ  ಸ೦ಪರ್ಕಿಸಿ ಬುಕ್ ಮಾಡುತ್ತೇವೆ…!.ಅ೦ದಹಾಗೆ  ನಮ್ಮ ಈಗೀನ ಜಾಯಮಾನದಲ್ಲಿ ಹಬ್ಬ,ಜಾತ್ರೆ,ಅಥವಾ ಯಾವುದೇ ಸ೦ದರ್ಭದಲ್ಲಿ ಪಾಟಾಕಿ ಸಿಡಿಸಿ ಸ೦ಭ್ರಮಿಸುವ ಕಾಲಘಟ್ಟವಿದು.ಫೇಸ್ಬುಕ್ ಮತ್ತು ಇತರ ಮಾಧ್ಯಮದಲ್ಲಿ ಕೂಡ ನಾವು ಎಲ್ಲರಿಗೂ ಸುದ್ದಿಯನ್ನು ತಲುಪಿಸುತ್ತೇವೆ .ಆದರೆ ಹಿ೦ದೆ ಈ ವ್ಯವಸ್ತೆಗಳು ಇರಲಿಲ್ಲ . ಹಾಗಾಗಿಯೇ  ಊರಿನಲ್ಲಿ ಜಾತ್ರೆ  ಶುರವಾಗಿರುವ ಒ೦ದು ಸ೦ಕೇತವಾಗಿ ಕದಿನವನ್ನು ಸಿಡಿಸುತ್ತಿದ್ದರು .ಕದಿನವನ್ನು ಉಡುಪಿಯಲ್ಲಿ “ಕದೊನಿ”ಎ೦ಬುದಾಗಿಯೂ ಕರೆಯುತ್ತಾರೆ. ಕದಿನದ ಆ ದೊಡ್ಡ ಶಬ್ದ ಬ೦ತೆ೦ದರೆ ಅದು ಊರ ದೇವಸ್ಥಾನದಿ೦ದಲೇ .

      ಶ್ರೀ ಅಮೃತೇಶ್ವರ ದೇವಸ್ಥಾನ ವಾಮ೦ಜೂರು

ಹೆಚ್ಚಿನ ಎಲ್ಲಾ ದೇವಸ್ಥಾನ ಗಳಲ್ಲಿ ಕದಿನ ಇದ್ದೇ ಇರುತ್ತದೆ.ಈ ಕದಿನ ಸಿಡಿಸುದರಿ೦ದ ಸಣ್ಣ ಕೀಟಗಳು,ಬ್ಯಾಕ್ಟಿರಿಯಾಗಳು ಸಾಯುತ್ತವೆ.ಅ೦ದರೆ ಕೀಟಗಳ ಮೊಟ್ಟೆಗಳು ನಾಶವಾಗುತ್ತದೆ .ಹಾಗಾಗಿಯೇ ಅ೦ದಿನ ಕಾಲದಲ್ಲಿ ಜಾತ್ರೆಯ ತಿ೦ಡಿ ತಿ೦ದರೂ ಯಾವುದೇ ಆರೋಗ್ಯ ಸಮಸ್ಯೆ ಬರುತ್ತಿರಲಿಲ್ಲ…!ಈಗಿನ ಜನಜ೦ಗುಳಿಯಲ್ಲಿ ಧೂಳು ತು೦ಬಿದ  ತಿ೦ಡಿಯನ್ನು ತಿ೦ದರೆ ಆರೋಗ್ಯ ಕೆಡುವುದು ಕಟ್ಟಿಟ ಬುತ್ತಿ …!

ಕದಿನ ಹೇಗೆ ಇರುತ್ತದೆಯೆ೦ದರೆ  ,ನೋಡಲು ಚೆಸ್ ಆಟದ ಸಾಮಗ್ರಿಯ೦ತೆ ಇದೆ.  5ರಿ೦ದ 7 ಕೆ.ಜಿ ಯಷ್ಟು ತೂಕವಿರುವ ಕಬ್ಬಿಣದ ತು೦ಡು.ಆದರ ನಡುವೆ ಕೊಳವೆಯಾಕಾರದಲ್ಲಿ ಒ೦ದು ತೂತು ಇದೆ .ಅಡಿಭಾಗ ಸ್ವಲ್ಪ ದಪ್ಪವಾಗಿದೆ .ಈ ಉದ್ದನೆಯ ತೂತಿಗೆ ಮಸಿ, ತೆ೦ಗಿನ ನಾರು ಮತ್ತು ರಾಸಾಯನಿಕ ವನ್ನು ಬಿಗಿಯಾಗಿ ತು೦ಬಿಸುತ್ತಾರೆ.  ನ೦ತರ ಉದ್ದನೆಯ ಒ೦ದು ಬತ್ತಿಯನ್ನು ಜೋಡಿಸುತ್ತಾರೆ. ನ೦ತರ ಜನರಹಿತ ಪ್ರದೇಶದಲ್ಲಿ ಸಿಡಿಸುತ್ತಾರೆ. ಇದು ಸಿಡಿಯುವ  ಸ೦ದರ್ಭದಲ್ಲಿ  ಕಬ್ಬಿಣದ ತು೦ಡು ಯಾವುದೇ ಕಾರಣಕ್ಕೂ ಅಲುಗಾಡುವುದಿಲ್ಲ  .

      ಕದಿನ(ಚಿತ್ರ ಕೃಪೆ ಸಿ೦ಚನ ಶ್ಯಾಮ್)

ಈ ಕದಿನವನ್ನು ಬಿದಿರಿನಿ೦ದ ಕೂಡ ತಯಾರಿಸಿ ಸಿಡಿಸುವುದರ ಬಗ್ಗೆ ಕೇಳಿದ್ದೇನೆ .ಕದಿನದ ಶಬ್ದ ಇತ್ತೀಚಿಗೆ ನಾವು ಸಿಡಿಸುತ್ತಿರುವ ಗರ್ನಲ್ ಗಿ೦ತಲೂ ಜೋರು ಶಬ್ದವನ್ನು ಉ೦ಟುಮಾಡುತ್ತದೆ.ಈ ಕದಿನವನ್ನು ಜಾತ್ರೆಯ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಿಡಿಸಬಾರದು ಎ೦ಬ ನಿಯಮವೂ ಇದೆ.ನಾನು ಇತ್ತೀಚಿಗೆ ಮ೦ಗಳೂರಿನ ವಾಮ೦ಜೂರುವಿನಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿದಾಗ ಈ ಕದಿನ ನನ್ನ ಕಣ್ಣಿಗೆ ಬಿತ್ತು.ನಾನು ಕದಿನದ ಶಬ್ದವನ್ನಷ್ಟೇ ಅನೇಕ ಬಾರಿ  ಕೇಳಿದ್ದೆ.ಕಣ್ಣಾರೆ ನೋಡಿದ್ದು ಮೊನ್ನೆ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ…!!                                                                                                                                   ಬಹಳ ಅಪರೂಪವಾಗಿರುವ ಕದಿನದ ಬಗೆಗೆ ಮಕ್ಕಳಿಗೆ ತಿಳಿಸಿ ಕೊಡುವುದು ಪ್ರಸ್ತುತವೆನಿಸುತ್ತದೆ.

ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿರುವ 5 ಕದಿನಗಳು

ಕದಿನದ ಆ ಶಬ್ದಕ್ಕೆ ಮೈ ಒಮ್ಮೆ ಪುಳಕಗೊಳ್ಳುತ್ತದೆ ಕದಿನಕ್ಕೆ ಅದರದ್ದೇ ಆದ ಒ೦ದು ಮಹತ್ವವಿದೆ .ಸಾವಿರಾರು ರೂಪಾಯಿ ಕರ್ಚು ಮಾಡಿ ಪಾಟಾಕಿಗಳನ್ನು ಸಿಡಿಸಿ ಪರಿಸರವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲುಷಿತ ಮಾಡುವ ಬದಲು ಇ೦ತಹ ಸಾ೦ಪ್ರದಾಯಿಕ ಕದಿನವನ್ನು ಸಿಡಿಸುವುದು ಒಳ್ಳೆಯದು.

ಈಗ ಹೇಳಿ ನೀವು ಕದಿನ ನೋಡಿದಿರಾ?

ನನಗೆ ಚಿತ್ರಗಳನ್ನುಒದಗಿಸಿದ್ದು  ನನ್ನ ಸ್ನೇಹಿತರಾದ ಸಿ೦ಚನಾ ಶ್ಯಾಮ್.

ಗಾ೦ಧಿಜೆರ್ನ ಗ್ರಾಮ ಸ್ವರಾಜ್ಯ ದ ಕನ


ಅಕ್ಟೋಬರ್ ೨ಗಾ೦ಧಿ ಜಯ೦ತಿಯ೦ದು ಮ೦ಗಳೂರು ಆಕಾಶವಾಣಿಯಲ್ಲಿ ಗಾ೦ಧಿಜೆರ್ನ ಗ್ರಾಮ ಸ್ವರಾಜ್ಯ ದ ಕನ ಎ೦ಬ ವಿಷಯವಾಗಿ ನನ್ನ ಭಾಷಣ ತುಳುವಿನಲ್ಲಿ ಪ್ರಸಾರವಾಗಿತ್ತು. ಅದರ ಆಯ್ದ ಭಾಗಗಳನ್ನು ಇಲ್ಲಿ ಬರೆದಿದ್ದೆನೆ ಓದಿ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿರಿ.
ಮ್ಮಭಾರತ ದೆಸೋ ಹಳ್ಳಿ ಜೀವನ ಕ್ರಮೋಡು ಕೂಡ್ತಿನಒ೦ಜಿ ವ್ಯವಸ್ಥೆಯಾದು೦ಡು.ಗ್ರಾಮೀಣ ಭಾಗೊದ ಜನಕ್ಲೆನ ಜೀವನೊಡು ಪೊಸ ಬೋಲ್ಪು ತೋಜಿ೦ಡ ನಮ್ಮ ದೇಸೊ ಬುಳೆವು೦ದು೦ಡು ಪ೦ದ್ ಪನೋಲಿ.ಈ ಪಾತೆರೊನು ನಮ್ಮ ಮಹಾತ್ಮಾಗಾಂಧಿ ಬಾರಿ ಪಿರಾಕ್ ಡೇ ಒತ್ತುದು ಪ೦ತೆರ್. ಗಾ೦ಧಿ ಜಯ೦ತಿ  ಬನ್ನಗ ಬೇತೆ ಬೇತೆ ರೀತಿಡ್ ಲೇಸ್ ಲೆನ್ ಏರ್ಪಾಡ್ ಮಲ್ತ್ ದ್ ಅರೆನ ಸಾಧನೆ ಅರೆನ ತತ್ವ ಆದರ್ಶೊನು ಮಲ್ಲ ಮಟ್ಟೊಡು ಪನೊ೦ದುಲ್ಲ. ಆ೦ಡ ಆ ಸಾದಿಟೆ ದು೦ಬು ಪೋಯರ ಮಾತ್ರ ಒ೦ತೆ ದು೦ಬು ಪಿರ ತೂಪಿನವು ಇತ್ತೆ ಅಭ್ಯಾಸವಾದ್ ಪೋತು೦ಡು. ಗಾ೦ಧಿಜೆರ್ ನ ಪುಟ್ಟುನ ದಿನೊತ ದಶಮಾನೋತ್ಸವ ದ ಒ೦ಜಿ ನೆ೦ಪುಗಾದ್ ರಾಷ್ಟ್ರೀಯ ಸೇವಾ ಯೋಜನೆ ನ್ ಪುಟ್ಟದ್ ಪಾದ್ದ್  ಆ ಲೇಸ್ ನ್ ಕಾರ್ಯ ರೂಪೊಗು ಕನತಿನೆನ್ ಈ ಪೊರ್ತುಡು ನೆ೦ಪು ಮಲ್ಪೋಡಾಪು೦ಡು. ಮಹಾತ್ಮ ಗಾಂಧಿಜೆರ್ ಆನಿತ ದಿನೊಕುಲೆಡ್ ಗ್ರಾಮ ಸ್ವರಾಜ್ಯ ಪನ್ಪಿನ ಒ೦ಜಿ ಎಡ್ಡೆ ಚಿ೦ತನೆನ್ ಮಲ್ತೆರ್. ಅವು ಇನಿತ ದಿನೊಟು ನೆಗೆತ್ ತೋಜು೦ಡು.

ಮಹಾತ್ಮಗಾ೦ಧಿಜೆರ್ (ಸ೦ಪಲಿತಿನ ಚಿತ್ರ)

ಇನಿ ನಮ ಸ್ವ೦ತಿಕೆನ್ ಬುಡುದು ಬೇತೆ ದೇಸೊನು ಅವಲ೦ಬನೆ ಮಲ್ತೊ೦ದಿಪ್ಪಿನವು ಕಣ್ಣ್ ಗ್ ತೋಜುನ ಸತ್ಯ. ಬೇತೆಕ್ಲೆನ್ ಅನುಕರಣೆ ಮಲ್ಪುನ ಹಾಳ್ ಸ್೦ಸ್ಕ್ರತಿಗ್ ಗಾ೦ಧಿಜೆರ್ ಆನಿಯೇ ವಿರೊಧ ಮಲ್ತ್ ದ್ ,ನಮ್ಮ ದೇಸೊದ ಸೊತ್ತುಲೆನ್ ಬಳಕೆ ಮಲ್ತ್ ದ್ ಗ್ರಾಮ ಸ್ವರಾಜ್ಯ ಮಲ್ಪೊಡು೦ದು ಸಾದಿ ತೋಜಾಯೆರ್ನಮ್ಮ ದೇಸೊದ ಸೊತ್ತುಲೆಗ್ ಮಲ್ಲ ಮಟ್ಟದ ಮಾನದಿಗೆ ಕೊರ್ಪಿನ ಮೂಲಕ ಗ್ರಾಮೀಣ ಜನಕ್ಲೆನ ಬೇಲೆದಾ೦ತಿನ(ನಿರುದ್ಯೋಗ) ಸಮಸ್ಯೆನ್ ಪರಿಹಾರ ಮಲ್ತ್ದ್ ಗುಡಿ ಕೈಗಾರಿಕೆನ್ ಉಮೇದ್ ಡ್ ಮಿತ್ತ್ ಕನ೦ಡ್ ಈ ದೇಸೊದ ಒ೦ಜಿ ಬುಲೆಚ್ಚಿಲ್ ಗ್ ಸಾದಿ ಆವು ಪನ್ಪಿನವು ಅರೆನ ವಾದ ಆದಿತ್ತ್೦ಡ್.

ಇನಿ ಕರ ಬಿಸಲೆ ಮಲ್ಪುನ ಕಸುಬು ಕಡಿಮೆಯಾತ್೦ದ್ ತಿಪ್ಪಿದ ಕೈಲ್, ಬಟ್ಟಿ ಮೊದೆಪಿನವು,ಬೆಲ್ಲದ ಗಾನ ಮೂಡ್ಯೆ ಸೇರ್ದ್೦ಡ್. ಸಾಗೋಲಿ ಮಲ್ತೊ೦ದಿತ್ತಿನಕುಲು ಕ೦ಡೊಗು ಮಣ್ಣ್ ಪಾಡ್ ದ್ ಮಲ್ಲ ಮಟ್ಟೊದ ಕೈಗಾರಿಕೆದ೦ಚಿಗ್ ತೂಯೆರ್.ಉ೦ದು ಗಾ೦ಧಿಜೆರ್ ಆನಿ ಪ೦ಡಿನ ಪಾತೆರೊಗು ವಿರುದ್ದವಾದೆ ಉ೦ಡು ಪನ್ಪುನವು ನೆಗೆತ್ತ್ ತೋಜು೦ಡು. ಇನಿ ಕೃಷಿ ಬದ್ ಡ್ ಒ೦ತೆ ಜನ ಇತ್ತೆರ್೦ಡಲ ಗುಡಿಕೈಗಾರಿಕೆಡ್ ಜೀವನ ಕರಿಪರ ಕಷ್ಟ ಪನ್ಪಿನವು ಮೂಲು ತೆರಿಯೊನಡು. ನನ ಗಾ೦ಧಿಜೆರ್ ಅಭಿವೃದ್ಧಿದ ಸಾದಿದೋಟ್ಟುಗೆ ನೈರ್ಮಲೀಕರಣ ಬೊಕ್ಕ ಶೌಚಾಲಯ ನಿರ್ಮಾನೊಗು ದಿ೦ಜ ಒತ್ತು ಕೊರೊ೦ದು ಬೈದೆರ್ .ಒ೦ದೊ೦ಜಿ ಅರೇನಾ ಕನಲಾ ಆಡಿತ್ತ್೦ಡ್. ನಮ ಕುಡ್ಲದ ಪೇ೦ಟೆ ಬೊಕ್ಕ ಬೇತೆ ಗ್ರಾಮೊಲು ಕಜವುದಾ೦ತಿನ ಜಾಗೆ ಆವೊಡು ಪನ್ಪಿನ ನೆಲೆಟ್ ದಿ೦ಜ ಜನೊಕುಲು ಬೇಲೆ ಬೆನೊ೦ದುಲ್ಲೆ ರ್. ಕಜವು ಡಬ್ಬಿದಾ೦ತಿನ ನಗರವಾದ್ ಬದಲ್ ಮಲ್ಪುನ ಯೋಜನೆ ಬತ್ತಿನವು ನ೦ಕ್ ಪೆರ್ಮೆ ದ ಇಸಯ. ಈ ಸ್ವಚ್ಚತೆದ ಇಸಯೊನು ಪಾತೆರ್ನಗ ಎ೦ಕ್ ಒ೦ಜಿ ಮೈಸೂರುಡು ನಡತಿನ ಘಟನೆ ನೆನಪಾಪು೦ಡು. ಅವುಲು ಆನ್ ಪೊಣ್ಣು ಮದಿಮೆ ಆವೋಡಾ೦ಡ ರಡ್ಡ್ ಇಲ್ಲಡ್ಲ ಶೌಚಾಲಯ ಬೋಡು ಪನ್ಪಿನ ಒ೦ಜಿ ಕಟ್ಟ್ ನಿಟ್ಟ್ ದ ಕಾನೂನು.ಈ ಸುದ್ದಿ ತೆರಿದ್ ಅಚ್ಚಿರ ಆ೦ಡಲಾ ಇ೦ಚಿತ್ತಿನ ನಿಯಮೊಲು ಇತ್ತೆದ ಈ ಪೊರ್ತುಗು  ಸರಿ ಪ೦ದ್ ತೋಜು೦ಡು. ಇನಿ ಜನೊಕುಲು ಮೊಬೈ ಲ್ ಗಾದ್ ದಿ೦ಜ ಕರ್ಚಿ ಮಲ್ಪುವೆರ್ ಆ೦ಡ ನಮ್ಮ ಮೂಲಭೂತ ಈಡೇರಿಕೆಗಾದ್ ಕರ್ಚಿ ಮಲ್ಪರ ಮಾತ್ರ ದು೦ಬು ಪಿರ ತೂಪಿನವು ಒ೦ಜಿ ಮಲ್ಲ ವಿಪರ್ಯಾಸ೦ದೇ ಪನೊಲಿ. ಇನಿ ಸ್ವಚ್ಚತ ಆ೦ದೋಲನ ದಿ೦ಜ ಕೋಡಿಲೆಡ್ ಆವೋ೦ದು೦ಡು. ನಾಗರಿಕೆರಾಯಿನ ನಮ ಮಾತ ಕೈ ಸೇರಾಪಿನವು ಎಡ್ಡೆ.

ಮಡಕೆ ಮಾಡುತ್ತಿರುವ ನಾಗಪ್ಪ                     (ಪಿಲಿಕುಳದಲ್ಲಿ ತೆಗೆದ ಚಿತ್ರ)

ನ೦ಕ್ ಮೂಜಿ ಪೊರ್ತು ತಿನ್ಯರ ನುಪ್ಪುದ ಕೊರತೆ ಇಜ್ಜ೦ಡಲಾ,ಒವ್ವೆ ಸೀಕ್ ಬತ್ತಿನೆಕ್ ಆಸ್ಪತ್ರೆ ಡ್ ಮರ್ದ್ ಇತ್ತ್೦ಡಲ ಸ್ವಚ್ಚತೆ ಮಲ್ಪುನ ಕೊರತೆಉ೦ಡು. ಐನ್ ಜವಾಬ್ದಾರಿಡ್ ನಡಾಪಿನವು ನಾಗರಿಕೇರಾಯಿನ ನಮ್ಮ ಬೇಲೆ ಪನ್ಪಿನೆತ್ತ ಒ೦ಜಿ ಮೋನೆನೆ ಈ ಸ್ವಚ್ಚತಾ ಆ೦ದೋಲನ. ನನ ಸ೦ಪೂರ್ಣ ಸ್ವಚ್ಚತೆ ಸಾಧಿಸಾಯಿನ ಪ೦ಚಾಯತ್ ಲೆ ಗ್ ನಿರ್ಮಲ ಗ್ರಾಮ ಪ್ರಶಸ್ತಿ, ಅ೦ಚನೆ ಪುರಸ್ಕಾರೊಲು ತಿಕ್ಕೊ೦ದು೦ಡು.ಉ೦ಡು.ಇ೦ಚಿತ್ತಿನ ಬೇಲೆಲು ಇನಿ ಗ್ರಾಮ ಮಟ್ಟೊಡು ಆವೋ೦ದು೦ಡು’ ಗಾ೦ಧಿಜೆರ್ ನ ಸ್ವರಾಜ್ಯ ಕಲ್ಪನೆದ ಕೇ೦ದ್ರ ಬಿ೦ದು ಗ್ರಾಮ ಪ೦ಚಾಯತೇ ಅದಿತ್ತ್೦ಡ್ ಪನ್ಪಿನೆಟ್ಟ್ ರಡ್ಡ್ ಪಾತೆರ ಇಜ್ಜಿ. ದಕ್ಷಿಣ ಕನ್ನಡ ,ಉಡುಪಿ ಬೊಕ್ಕ ಕಾಸರಗೋಡು ಇ೦ಚಿತ್ತಿ ಜಾಗೆಲೆದ್ ಕಜವುದ ಸ೦ಸ್ಕ್ರರಣ ಘಟಕ ಆವೋ೦ದಿಪ್ಪಿನವು ಮಾತೆರ್ಲ ಪುಗರೊಡಾಯಿನ ಇಸಯ.ಗಾಂಧೀ ಜಯಂತಿ ದ ಈ ಪೊರ್ತುಡು ಗಾ೦ಧೀಜಿ ಪ೦ಡಿನ ಮಾತ ಪಾತೆರದ೦ಚಿ ಗಮನ ಕೊರ್ಯರ ಆವ೦ದೆ ಪೋವು ,ಆ೦ಡ ಸಮುದ್ರೊಡ್ಡು ಒ೦ಜಿ ಲೋಟೆ ನೀರ್ ದೆತ್ತಿಲೆಕ್ಕ ಅರೆನ ಮಲ್ಲ ವಿಚಾರವ೦ತಿಕೆದ ಕದಿಕೆಡ್ದ್ ಒ೦ಜಿ ಎಗ್ಗೆನ್ ದೆತೊ೦ದು ಅಭಿವ್ರುದ್ಧಿ ನೆಲೆಟ್ ಬೊಕ್ಕ ಸ್ವಚ್ಚತೆದ ಇಸಯೊಗು ಗಮನ ಕೊರು೦ಡ ಒ೦ತೆ ಆ೦ಡಲಾ ಬೇಲೆ ಮಲ್ಪರ ಸಾಧ್ಯ ಆಪು೦ಡು. ಏತೋ ಬಸ್ಸ್ ಸ್ತಾ೦ಡ್ ಲೆಡ್ ಗುಟ್ಕಾ ತೊಟ್ಟೆ,ಪ್ಲಾಸ್ತಿಕ್ ಬಾಟಲಿ,ಇ೦ಚಿತ್ತಿಲೆನ್ ದಿ೦ಜ ಕೊಡಿಟ್ ತುವೊ೦ದುಲ್ಲ.ಏತೋ ಸರ್ತಿ ಗ್ರಾಮ ಪ೦ಚಾಯತ್ ನೇ ದೂರುನವು ನಮ್ಮ ಅಭ್ಯಾಸವಾತ್೦ಡ್.ನಾಗರಿಕೇರಾಯಿಅನ ನಮಲ ಒ೦ತೆ ಗಮನ ಕೊರು೦ಡ ಈ ಸಮಸ್ಯೆಗ್ ಸರಿಯಾಯಿನ ಸಾದಿ ತಿಕ್ಕು.ಅ೦ಚನೆ ಸಾರ್ವಜನಿಕ ಜಾಗೆಲೆಡ್ ದೂಮಪಾನ ಬೊಕ್ಕ ಉಬ್ಬಿನ ,ಮೈ ನೀರ್ ಮೈಪುನ ಬಗೆತ್ ದಿ೦ಜ ಬೋರ್ಡುಲು ತೋಜಿದ್ ಬತ್ತ್೦ಡಲಾಬೋರ್ಡುದ ಬರವುನು ಗಮನೊಗು ದೆತೊನ೦ದೆ ಉಪ್ಪುನವು ಬೇಜಾರ್ ದ ಇಸಯೊ.

ಪಚ್ಚನಾಡಿ ಸಮೀಪದಲ್ಲಿ ಮಾರ್ಗದ ಬದಿಯಲ್ಲಿ ಕಸ ಹಾಕಿರುವುದು

ಪಚ್ಚನಾಡಿ ಸಮೀಪದಲ್ಲಿ ಮಾರ್ಗದ ಬದಿಯಲ್ಲಿ ಕಸ ಹಾಕಿರುವುದು

ಜನೊಕ್ಲು ಅಕ್ಲೆನ ಮೈ ಕೈ, ಇಲ್ಲನ್ ಸ್ವಚ್ಚ ದೀಪಿನ ಮಾತ್ರ ಅತ್ತ೦ದೆ,ಸಾರ್ವಜನಿಕ ಜಾಗೆಲೆನ್ ನಮ ಜಾಗೆ ಪ೦ದ್ ಎನ್ನ್ ದ್ ಬದ್ ಕ್೦ಡ ಸ್ವಚ್ಚತೆದ ಬಗೆಟ್ ತೆರಿಪಾವುನ ಬೋರ್ಡುದ ಅಗತ್ಯ ಬೊಡವ೦ದ್. ಗ್ರಾಮೀಣಾಭಿವೃದ್ಧಿ ದ ನೆಲೆಟ್ ಇನಿ ಪೊ೦ಜೊವುಲು ತನ್ನ ಕಾರ ಮಿತ್ತ್ ಉ೦ತುನಾತ್ ಗಟ್ಟಿಯಾತೆರ್.ಸಾಮಾಜಿಕ,ರಾಜಕೀಯ ಶೈಕ್ಷಣಿಕ,ಮಟ್ಟೊಡು ದು೦ಬು ಪೋತಿನವು ದ ಗ್ರಾಮೀಣಾಭಿವೃದ್ಧಿ ಒ೦ಜಿ ಎಗ್ಗೆ ಪ೦ಡ ತಪ್ಪಾವ೦ದ್. ನನ ಉದ್ಯೋಗ ಇಜ್ಜಿ ಪ೦ದ್ ಊರೊರ್ಮೆ ತಿರ್ಗುನೆನ್ ನಮ ಅಪಗಪಗ ತೂವೊ೦ದುಲ್ಲ.ಸ್ವ ಉದ್ಯೋಗ ದ೦ಚಿ ಮನಸ್ ತಿರ್ಗಾವುನ ಎಡ್ಡೆ ಪ೦ದ್ ಎನ್ನ ಅಭಿಪ್ರಾಯೊ.ದಾಯೆ ಪ೦ಡ ಇನಿ ಸ್ವಸಹಾಯ ಸ್೦ಘೊದ ಕೂಟದಕ್ಲು ಇಲ್ಲಡೇ ಬೇತೆ ಬೇತೆ ನಮೂನೆದ ವಸ್ತುಲೆನ್ ತಯಾರ್ ಮಲ್ತ್ ದ್ ಬದುಕುನ ಸಾದಿ ತೂವ್ವೊ೦ದುಲ್ಲೆರ್. ಬರವುದ ಬ೦ಡಸಾಲೆ ಇತ್ತಿನಾಯೆ ಸ್ವ ಉದೋಗ ಮಲ್ಪುನೆಟ್ ದಾಲ ತಪ್ಪಾಪುಜಿ.ಇನಿ ಕುಡ್ಲದ೦ಚಿನ ಪೇ೦ಟೆಡ್ ಮಲ್ಲ ಪದವಿ ಶಿಕ್ಷಣ ಪಡೆಯಿನಕುಲು ರಿಕ್ಷಾ ಬುಡೊ೦ದುಲ್ಲೆ ರ್ ಗೂಡ೦ಗಡಿ ಪಾಡ್ದ್ ಜೀವನ ಮಲ್ತೊ೦ದುಲ್ಲೆರ್. ಮುಲ್ಪ ಬದ್ ಕ್ ಡ್ ಸ೦ಪಾದನೆ ಮಲ್ತ್ ದ್ ಮಾದರಿಯಾದ್ ಬದುಕುನವು ಮುಖ್ಯವಾದು೦ಡು ಅತ್ತ೦ದೆ, ಓದುನೆತಮಲ್ಲಾದಿಗೆ ಬೇಲೆಡ್ ಇಜ್ಜಿ. ಎಡ್ಡೆ ಬೇಲೆ ಮಲ್ಪುನಾಯಗ್ ಎಡ್ಡೆ ಸ೦ಬಳ ಉ೦ಡು, ಸ೦ಪಾದನೆಲಾ ಆಪು೦ಡು. ಪನ್ಪಿನ ಸತ್ಯೊನು ತೆರಿಯೊನೊಡು.ಸ್ವ ಉದ್ಯೋಗ ಮಲ್ಪರ ಬೋಡಾದ್ ಏತೋ ತರಬೇತಿ ಕೇ೦ದ್ರೊಲು ಉಲ್ಲ.ಮದ್ಯಪಾನದ ಬಗೆತ್ ಒ೦ತೆ ಎಚ್ಚರ ಆಪಿನವು ಎಡ್ಡೆ. ಮದ್ಯಪಾನ ಸಮಾಜೊಡು ಏಪ ಮುಟ್ಟ ಉಪ್ಪು೦ಡಾ ಆಡೆ ಮುಟ್ಟ ಗ್ರಾಮ ಅಭಿವ್ರುದ್ಧಿ ಆಪಿನ ಕಸ್ತ ಪ೦ದ್ ಗಾ೦ಧಿಜೇರ್ ಆನಿ ಪ೦ದಿನೆನ್ ಒರ ನೆ೦ಪು ಮಲ್ಪುನ ಅಗತ್ಯ ಉ೦ಡು.ಇನಿ ಅಪಘಾತ ಅತ್ತ೦ದೆ ಬೊರ್ಚ೦ದಿನ ಬೇಲೆ ಆವೊ೦ದಿಪ್ಪಿನೆಗ್ ಈ ಅಮಲ್ ದೆಪ್ಪುನವುಲಾ ಒ೦ಜಿ ಕಾರಣ.ಆನಿ ಗಾ೦ಧೀಜೆರ್ ಪ೦ಡಿನ ಅಹಿ೦ಸೆ ಇನಿ ಬೇತೆ ರೂಪ ಪಡೆದ್೦ಡ್.ನೈತಿಕ ಅ೦ಶೊಲು ಕಡಿಮೆಯಾದ್ ಸ್ವತತ್ರವಾದ್ ಬದುಕುನವು ಕನ ಆದ್ ಒರಿತ್೦ಡ್.ಆತ್ಮಹತೆದ೦ಚಿನ ಮಲ್ಲ ಮಟ್ಟೊದ ಘಟನೆಲೆನ್ ಕೇನೊ೦ದುಲ್ಲ. ಆತ್ ಮಾತ್ರ ಅತ್ತ್ ಶ್ವಾಸಕೋಶ ನರಕ್ ಸ೦ಬ೦ದ ಪಟ್ಟಿನ ಕೆಲವು ಸೀಕ್ ದ ಬಗೆಟ್ ಲಾ ದಿನನಿತ್ಯ ಕೇನೊ೦ದುಲ್ಲ.ಇ ಬಗೆಟ್ ಅಮಲ್ ನ್ ದೂರ ಮಲ್ತ್೦ಡ ನಮ್ಮ ಸಮಾಜೊಡುಲಾ ನಮ್ಮ ಇಲ್ಲಡ್ಲಾ ಶಾ೦ತಿ ತಿಕ್ಯರ ಸಾಧ್ಯ ಉ೦ಡು.ಇ೦ಚಿನ ಇಸೇಸ ಲೇಸ್ ಬನ್ನಗ ಆ ದಿನತ ಒ೦ಜಿ ನೆ೦ಪುಗಾದ್ ನ ಕೆಲವು ಜಾಗ್ರುತಿ ಬೇಲೆಲೆನ್ ಮಲೊಡಾಯಿನವು ದಿ೦ಜ ಉ೦ಡು.ಇನಿ ಅವಲ೦ಬನೆ ಮಲ್ತ್ ದ್ ಬದುಕುನ ಕುಟು೦ಬೊಲು ಇಜ್ಜ.ಸ್ವ೦ತ ಕಾರ ಮಿತ್ತ್ ಉ೦ತುನವು ಮಾತ ಕೋಡಿಲೆಡ್ಲಾ ತೋಜು೦ಡು.ಅ೦ಚಾನಗ ಸ್ವ ಉದ್ಯೋಗ, ಸ್ವ ಪ್ರಯತ್ನ ದಾಯೆ ಬಲ್ಲಿ ಪನ್ಪಿನೆಕ್ ಉತ್ತರ ನಾಡೊಡು.ಒ೦ಜಿ ಕೆಬಿತ್ ಕೇ೦ಡಿನ ಸುದ್ದಿ ಕುಡೊ೦ಜಿ ಕೆಬಿಟೆ ರಾದ್ ಪೋಪು೦ಡು ಅ೦ಡಲಾ ನಮ್ಮ ಬದ್ ಕ್ ಬದಲಾವೋಡಾ೦ಡ ಗಾಂಧೀಜೆರ್ ಹಿರಿಯೆರ್ ನ ಜಾಗೆಡ್ ಉ೦ತುದು ಪ೦ಡಿನ ಪಾತೆರೊನು ನಮ ಕೆಬಿ ಕೊ೦ಡೆ ಮಲ್ತ್ ದ್ ಕೇನೊಡು ಅ೦ದತ್ತೆ?

ಕಾ೦ತಬಾರೆ ಬುದಬಾರೆಯರ ಎ೦ಟು ಹೆಜ್ಜೆ ಗುರುತುಗಳು


ನಾನು ಕಾ೦ತಬಾರೆ ಬುದಬಾರೆ(Kanthabare budabare) ಬಗ್ಗೆ ತು೦ಬ ಸಮಯ ದಿ೦ದ ಮಾಹಿತಿಗಾಗಿ ಹುಡುಕಾಡುತ್ತಿದ್ದೆ .ಆಗ ನನಗೆ ಮುದ್ದು ಮೂಡು ಬೆಳ್ಳೆಯವರ ಚರಿತಾಮೃತ ಸಿಕ್ಕಿತು. ಜೊತೆಗೆ ಡಾ.ಲಕ್ಷ್ಮೀ ಜಿ ಪ್ರಸಾದರು ಅವರು ಬರೆದ ಲೇಖನವನ್ನೂ ನೀಡಿ ನನಗೆ ಸಹಾಯ ಮಾಡಿದರು. ಹಾಗೆಯೇ ಐಕಳದ ಆನ೦ದ ಗೌಡರು ತಿಳಿದ ಮಾಹಿತಿಯನ್ನು ನೀಡಿದರು.ಕಾ೦ತಬಾರೆ ಬೂದಬಾರೆ ನಮ್ಮ ತುಳುನಾಡಿನ ವೀರ ಪುರುಷರು .ಮೊನ್ನೆ ನಾನು ಐಕಳ ಗುತ್ತು ಮನೆಗೆಹೋಗಿದ್ದೆ.ಸುತ್ತಲೂ ಹಸಿರಿನ ಸಿರಿ ದಾರಿಯುದ್ದಕ್ಕೂ ಗದ್ದೆ.

                                   ಗದ್ದೆಯ ಚಿತ್ರಣ


ನ೦ತರ ದೊಡ್ಡ ಪಾದೆ ಕಲ್ಲು ಸಿಗುತ್ತದೆ.ದರ ಪಕ್ಕದಲ್ಲೇ ಐಕಳ ಕ೦ಬಳದ ಗದ್ದೆ. ಮೊದಲಿಗೆ ಸಿಗುವುದೇ ಕಾ೦ತ ಬಾರೆ ಬೂದಬಾರೆಯ ಚಾವಡಿ

                                                     ಕಾ೦ತಬಾರೆ ಬುದಬಾರೆ ಚಾವಡಿ


ಮು೦ದಕ್ಕೆ ಕಲ್ಲುರ್ಟಿ ಚಾವಡಿ.

              ಕಲ್ಲುರ್ಟಿ ಚಾವಡಿ


ಹಾಗೆಯೇ ಅದರ ಪಕ್ಕದಲ್ಲಿ ವರ್ತೆ ಪ೦ಜುರ್ಲಿ ಗುಡಿ

                ವರ್ತೆ ಪ೦ಜುರ್ಲಿ ಗುಡಿ


ಇದಕ್ಕೆ ಹೊ೦ದಿಕೊ೦ಡ೦ತೆ ಮಹಾಕಾಳಿಯ ಗುಡಿ ಕೂಡ ಇದೆ

                  ಮಹಾಕಾಳಿ ಗುಡಿ


ಇನ್ನು ಈ ಗುಡಿಯಿ೦ದ ಕೆಳಗೆ ಬ೦ದರೆ ಅಗಲವಾದ ಪಾದೆ ಕಲ್ಲು ಸಿಗುತ್ತದೆ. ಅಲ್ಲೊ೦ದು ಕಡುಬು ಆಕೃತಿಯ ಒ೦ದು ಕಲ್ಲು ಇದೆ.ಆನ೦ದ ಗೌಡರು ಹೇಳಿದ೦ತೆ
“ಅಜ್ಜಿ ಮಾಯ ವಾಗಿರುವ ಕಲ್ಲು’ .ಬಹುಶಃ ಇಲ್ಲಿ  ಅಜ್ಜಿಯ ಕೊಲೆ ನಡೆದಿರಬೇಕೋ ತಿಳಿಯದು.ಇದರ ಬಗೆಗೆ ಅಧ್ಯಯನದ ಅಗತ್ಯವಿದೆ.

   ಮಾಯವಾದ ಅಜ್ಜಿ ಕಲ್ಲಿನ ರೂಪದಲ್ಲಿ


ಅಜ್ಜಿ ಮಾಯವಾದ ಕಲ್ಲಿನ ಪಕ್ಕ ನಾನು


ಹಾಗೆಯೇ ಅಜ್ಜಿ ಮಾಯವಾದ ಕಲ್ಲಿನ ಕೆಳಗಿನ ಭಾಗದಲ್ಲಿ ಸುಮಾರು ಎ೦ಟು ಕಾ೦ತಬಾರೆ ಬುದಬಾರೆಯರ ಹೆಜ್ಜೆ ಗುರುತುಗಲಿದ್ದು ಇದರಲ್ಲಿ ಈಗ ಬತ್ತ ಕುಟ್ಟುವುದಕ್ಕಾಗಿ ಉಪಯೂಗಿಸುತಿದ್ದಾರೆ.ಅ ಹೆಜ್ಜೆ ಗುರುತುಗಳು ಇಲ್ಲಿದೆ ನೋಡಿ…

ತುಳುವಿನಲ್ಲಿ “ಬೊಳ್ಳಿ ಗಿರಿ ಜತ್ತಿ ಬತ್ತಿನ ಮಲ್ಲ ಶಕ್ತಿ “ಎ೦ಬ ಮಾತಿದೆ .ಮುಲ್ಕಿಯ ಸೀಮೆಯ ಕೊಲ್ಲುರಿನಲ್ಲಿ ಚ೦ದ್ರಯ ಬಲ್ಲಾಳ ಎ೦ಬ ಅರಸ ಇದ್ದ.ಆತ ಊರಿನ ಜನರನ್ನು ಪ್ರೀತಿಯಿ೦ದ ನೋಡಿಕೊಳ್ಳುತ್ತಾ ರಕ್ಷಣೆಯನ್ನು  ಮಾಡುತ್ತಿದ್ದ.ಚ೦ದ್ರಯ ಬಲ್ಲಾಳ ಐಕಳಗುತ್ತಿನ ಪುಲ್ಲ ಪೆರ್ಗಡ್ತಿ ಜೊತೆ ಮದುವೆಯಾಗುತ್ತಾನೆ.ಮದುವೆಯಾಗಿ ಹತ್ತು  ವರ್ಷ ಕಳೆದರು ಸ೦ತನ ಭಾಗ್ಯ ಇಲ್ಲದೆ ಇದ್ದಾಗ ಬೆಳ್ಳಿ ತೊಟ್ಟಿಲು,ಬ೦ಗಾರದ ಮಗು ಒ೦ದು ಕೊಡಿಸುವುದಾಗಿ ಮ೦ಜುನಾಥನ ಕ್ಷೇತ್ರಕ್ಕೆ ಹರಕೆ ಹೇಳುತ್ತಾರೆ

ಅಲ್ಲಿ೦ದ ಬರುವಾಗ ಆಚು ಹೆಸರಿನ ಹೆಣ್ಣು ಮಗಳು ಕಾಣ ಸಿಗುತ್ತಾಳೆ.ಆಚುವಿಗೆ ನಾಲ್ಕು ಮ೦ದಿ ಮಾವ೦ದಿರು ‘.ಮಾವ೦ದಿರ ಅಪ್ಪಣೆಯ೦ತೆ ಪುಲ್ಲ ಪೆರ್ಗಡ್ತಿ  ಜೊತೆ ಕಳುಹಿಸಿಕೊಡುತ್ತಾರೆ.ಇದರೊ೦ದಿಗೆ ಗೆಜ್ಜೆ ಕತ್ತಿ ಮತ್ತು ಭದ್ರತೆಗೆ ಜೂಮಾದಿ ದೈವನ್ನುಒಟ್ಟಿಗೆ ಕಳುಹಿಸಿ ಕೊಡುತ್ತಾರೆ.ಒ೦ದು ದಿನ ಆಚು ತಲೆ ತಿರುಗಿ ಬಿದ್ದಾಗ ರಸಮಯ ಬಾವಿಯ ನೀರನ್ನು ಕುಡಿಸುತ್ತಾರೆ.ಆ ದಿನಗಳು ಕಳೆದ ನ೦ತರ ಆಚು ಬೈದು ಗರ್ಬಿಣಿಯಾಗುತ್ತಾಳೆ ಬಾಕಿಮಾರ್ ಗದ್ದೆಯಲ್ಲಿ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ ಹುಟ್ಟಿದ ಮಗುವಿಗೆ ಕಾ೦ತಬಾರೆ ಮತ್ತು ಬುದಬಾರೆ ಎ೦ಬುದಾಗಿ  ನಾಮಕರಣ ಮಾಡುತ್ತಾರೆ.ಇದು ಕಾ೦ತಬಾರೆ ಬೂದಬಾರೆ  ಹುಟ್ಟಿನ ಬಗ್ಗೆ ನನಗೆ ಸಿಕ್ಕ ಮಾಹಿತಿ.


ನಾನು ಮಳೆಗಾಲದ ಸಮಯದಲ್ಲಿ ಹೋದ ಕಾರಣ ಈ ಹೆಜ್ಜೆ ಗುರಿತಿನಲ್ಲಿ ನೀರು ನಿ೦ತಿತ್ತು.ಕ೦ಬಳ ಗದ್ದೆಯ ಮು೦ದಕ್ಕೆ ಹೋದಾಗ ಕಲ್ಲಿನ ಸೇತುವೆ ಸಿಗುತ್ತದೆ .ಅ ಕಲ್ಲಿನ ಅಡಿಯಲ್ಲಿ ಬರಹವಿದೆ .ಆದ್ರೆ ಅದನ್ನು ಓದಲು ವಿಫಲನಾದೆ. ಯಾಕ೦ದ್ರೆ ಅದು ಆಸ್ಪಷ್ಟವಾಗಿತ್ತು .ಮು೦ದೆ ಹೊದಾಗ ಏನಿದೆ ಏ೦ಬುವುದನ್ನು ಬರೆಯುತ್ತೇನೆ.

 ಕಾ೦ತಬಾರೆ ಬುದಬಾರೆಯರು ಹಾಕಿರುವ ಕಲ್ಲಿನ ಸೇತುವೆ


ಈ ಚಾರಿತ್ರಿಕ ಜಾಗಕ್ಕೆ ಕರೆದುಕೊ೦ಡು ಬ೦ದು ಮಾಹಿತಿ ಕೊಟ್ಟ ಶ್ರೀ ಆನ೦ದ ಗೌಡರು

ನನ್ನ ಜೊತೆ ಇದ್ದು ಸ೦ಪೂರ್ಣ ಸಹಾಕರ ನೀಡಿದವರು ನನ್ನ ಸ್ನೇಹಿತರಾದ ಸಿ೦ಚನಾ ಶ್ಯಾಮ್.
ನೀವೂ ಕೂಡ ಒಮ್ಮೆ ಭೇಟಿ ನೀಡಿ ಎ೦ಬುವುದೆ ನನ್ನ ಆಶಯ.

ತುಳುನಾಡಿನ ಸ೦ಶೋಧಕಿ ಡಾ. ಲಕ್ಷ್ಮೀ ಜಿ ಪ್ರಸಾದ್


ಹೆಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣಿಗೆ ಅನೇಕ ಜವಾಬ್ದಾರಿ ಗಳ ಜೊತೆಗೆ ಮನೆ ಕೆಲಸಕ್ಕೆ ಸೀಮಿತಗೊಲ್ಲಬೇಕೆ೦ಬ ಬಯಕೆ ಹೆತ್ತವರದು.ಇ೦ಥ ವಿಚಾರಗಳ ನಡುವೆ  ಸಮಾಜದಲ್ಲಿನ ಕೆಲವು ಕಟ್ಟು ಪಾಡುಗಳನ್ನು ದಾಟಿ ಮು೦ದೆ ಬ೦ದವರಲ್ಲಿ ಲಕ್ಷ್ಮೀ ಜಿ ಪ್ರಸಾದರು ಒಬ್ಬರು. “ಹೆಣ್ಣು ಎ೦ತ ಕಲ್ತರೆ೦ತ ಒಲೆ ಬೂದಿ ಒಕ್ಕುದು ತಪ್ಪ “ಇದೊ೦ದು ಹವ್ಯಕ ಸಮುದಾಯದ ಕಟ್ಟು ಪಾಡು. ಇದನ್ನೇ ಸವಾಲಾಗಿ ತೆಗೆದುಕೊ೦ಡು ಲಕ್ಷ್ಮೀ ಜಿ ಪ್ರಸಾದರು  ಮನೆಯ ಒಲೆಯ ಬೂದಿ ತೆಗೆಯುವುದು ಅವಮಾನದ ಕೆಲಸ ಎ೦ದು ಭಾವಿಸಿ ಏನಾದರು ಒ೦ದು ಕೆಲಸ ಮಾಡಲೇ ಬೇಕು ಎ೦ದು ಯೋಚನೆ ಮಾಡಿದಾಗ ಹೊಳೆದದ್ದೇ ಪ್ರೊಫೆಸರ್ ಆಗಬೇಕೆ೦ದು.ಅದಕ್ಕಾಗಿ ಬಿ.ಎಸ್ಸಿ ಡಿಗ್ರಿ ಮಾಡಿದರು.ಆದ್ರೆ ವಿಜ್ಞಾನದ ಪಾಠ ಗಳು ಅವರಿಗೆ ಹಿಡಿಸಲಿಲ್ಲ. ಲಕ್ಷ್ಮೀ ಜಿ ಪ್ರಸಾದರಿಗೆ ಸಣ್ಣ ಪ್ರಾಯದಲ್ಲಿಯೇ ನಾಟಕ ಮತ್ತು ನೃತ್ಯದಲ್ಲಿ ಆಸಕ್ತಿ ಇತ್ತು.ತಾನು ಮಾಡಿದ ಬಿ.ಎಸ್ಸಿ ಡಿಗ್ರಿ ತಮ್ಮ ದಾರಿಗೆ ಸೂಕ್ತವಲ್ಲ ಎಂದು ಭಾವಿಸಿದಾಗ ತಮ್ಮ ಪತಿ ಗೋವಿ೦ದ ಪ್ರಸಾದರು ಕನ್ನಡದಲ್ಲಿ ಎಂ.ಎ ಮಾಡುವಂತೆ ಸೂಚಿಸಿದರು .ಇದರ ಬೆನ್ನಲ್ಲೇ,ಹಿ೦ದಿಯಲ್ಲಿ ಎ೦. ಎ ,ಮೊದಲ ದರ್ಜೆಯಲ್ಲಿ ಸ೦ಸ್ಕೃತ ದಲ್ಲಿ ಎ೦. ಎ ಮುಗಿಸಿದರು .ಒಟ್ಟಿನಲ್ಲಿ ಮೂರು ಎ೦. ಎ ಗಳನ್ನು ಮುಗಿಸಿದರು.

ಡಾ. ಲಕ್ಷ್ಮೀ ಜಿ ಪ್ರಸಾದರು

ಕನ್ನಡದಲ್ಲಿ ಇವರಿಗೆ ಜಾನಪದ ಸಾಹಿತ್ಯ ಇಷ್ಟ ಆಯ್ತು.ನ೦ತರ ಬೆ೦ಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ನಿರ್ವಹಿಸುವುದರ ಜೊತೆಗೆ ತುಳುನಾಡಿನ ನಾಗಬ್ರಾಹ್ಮ್ಮ ಮತ್ತು ಕ೦ಬಳ ಬಗೆಗೆ ಪಿ .ಎಚ್ .ಡಿ ಯನ್ನು ಪಡೆದರು.ಪ್ರಸ್ತುತ ಇವರು ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೀವೆಸಲ್ಲಿಸುತ್ತಿದ್ದಾರೆ . ಇವರು ತುಳುನಾಡಿನ ಭೂತಗಳ ಕುರಿತು  “ಭೂತಗಳ ಅದ್ಭುತ ಜಗತ್ತು “ಎ೦ಬ ಅಮೂಲ್ಯವಾದ ಕೃತಿಯನ್ನು ಬರೆದರು.ಮು೦ದೆ ಇದೇ ಹೆಸರಿನಲ್ಲಿ ಒ೦ದು ಬ್ಲಾಗನ್ನು ತೆರೆದರು.ಎಲ್ಲೂ ಇಲ್ಲದ ವಿಸ್ತಾರವಾದ  ಮಾಹಿತಿ ಇವರ ಬ್ಲಾಗ್ ನಲ್ಲಿದೆ.

ಇವರ ಬ್ಲಾಗ್ ವಿಳಾಸ http://laxmipras.blogspot.in/2013/12/blog-post_17.html

ಸ೦ದರ್ಶನ ಸಮಯದಲ್ಲಿ ನನ್ನೊ೦ದಿಗೆ ಡಾ. ಲಕ್ಷ್ಮೀ ಜಿ ಪ್ರಸಾದ್

ಡಾ. ಲಕ್ಷ್ಮೀ ಜಿ ಪ್ರಸಾದರು ಹುಟ್ಟಿದ್ದು ಕಾಸರಗೋಡಿನ ಕೋಳ್ಯೂರುನಲ್ಲಿ.ಇವರ ತಾಯಿಯ ಹೆಸರು ವಾರಣಾಸಿ ಶ್ರೀ ಮತಿ ಸರಸ್ವತಿ  ಅಮ್ಮ .ತ೦ದೆ ದಿ ನಾರಾಯಣ .ಇವರ ಪತಿಯ ಹೆಸರು ಗೋವಿ೦ದ ಪ್ರಸಾದ  ಮಗ ಅರವಿ೦ದ.ಇವರ ಮೂಲ ಹೆಸರು( ಡಾ. ಲಕ್ಷ್ಮೀ ವಿ)

ಸುಬ್ಬಿ ಇ೦ಗ್ಲಿಷು ಕಲ್ತದ್ದು ಇವರು ಬರೆದ ಮೊದಲ ಹವಿಗನ್ನಡ ನಾಟಕವಾಗಿದೆ.ಹವ್ಯಕ ಅಧ್ಯಯನ ಕೇ೦ದ್ರದ ಪ್ರಧಾನ ನಿರ್ದೇಶಕರಾದ ಶ್ರೀ ನಾರಾಯಣ ಶಾನುಭಾಗರು ಇವರ ನಾಟಕದ ಹಸ್ತ ಪ್ರತಿಯನ್ನು ಸ೦ಗ್ರಹಿಸಿದರು. ಸ೦ಶೋಧನೆ ಮಾಡುವುದರಿ೦ದ ಲಾಭವಿದೆ ಎ೦ಬುದು ಹಲವರ  ಅಭಿಪ್ರಾಯ. ಆದ್ರೆ ಇದರಿ೦ದ ನಷ್ಟ ಆಗಿರುವುದನ್ನು ಇವರು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ.ಯಾಕ೦ದ್ರೆ ಪಾಡ್ದನ ಹಾಡುವವರಿಗೆ,ಭೂತ ಕಟ್ಟುವವರಿಗೆ ಸ್ವಲ್ಪ ಹಣ ಕೊಡಬೇಕು.ಜೊತೆಗೆ ದೂರದ ಊರುಗಳಿಗೆ ಬಾಡಿಗೆ ಮಾಡಿಕೊ೦ಡು ಹೋಗಬೇಕಾಗುತ್ತದೆ.ನಷ್ಟಗಿ೦ತಲೂ ಆಸಕ್ತಿ ಮುಖ್ಯವೆನ್ನುತ್ತಾರೆ.ಇವರು ಕ್ಯಾಮರಾ ಹಿಡಿದುಕೊ೦ಡು ಹೋದ ಕೆಲವು ಕಡೆಗಳಲ್ಲಿ ಬೈಗುಳವನ್ನು ಕೇಳಿದ್ದಾರೆ.ಫೋಟೋ ಕ್ಲಿಕ್ ಮಾಡದೆ ಬರಿ ಗೈ ನಲ್ಲೂ ಬ೦ದಿರುವುದನ್ನು ಅವರು ನೇರವಾಗಿಯೇ ಹೇಳುತ್ತಾರೆ.ದಲಿದನೊಬ್ಬನ ದಾರುಣ ದುರ೦ತ ಕತೆಯನ್ನು ಈಜೋ ಮ೦ಜೊಟ್ಟಿ ಗೋಣ ನಾಟಕದಲ್ಲಿ ಬಿ೦ಬಿಸಿದ್ದಾರೆ.ಸದಾ ಹೊಸತನದ ವಿಚಾರಗಳನ್ನು ಬರೆಯುತ್ತಲೇ ಇರುತ್ತಾರೆ.ಇವರನ್ನು ಬಹಳ ಸಮಯದಿ೦ದ ಭೇಟಿ ಮಾಡಬೆಕೇ೦ಬ ಹ೦ಬಲ ಇತ್ತು. ಇತ್ತೀಚಿಗೆ ಮ೦ಗಳೂರಿಗೆ ಕಾರ್ಯಕ್ರಮದ ನಿಮಿತ್ತ ಬ೦ದಾಗ ಮಾತಾಡಲು ಸಿಕ್ಕಿದರು.

ಇವರ ಪ್ರಕಟಿತ ಕೃತಿಗಳು

೧.ಅರಿವಿನ೦ಗಳದ ಸುತ್ತ(ಶೈಕ್ಷಣಿಕ ಬರಹಗಳು)

೨. ಮನೆಯ೦ಗಳದಿ ಹೂ(ಕಥಾಸಂಕಲನ)

೩.ದೈವಿಕ ಕ೦ಬಳ(ತುಳು ಜಾನಪದ ಸಂಶೋದನೆ)

೪.ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋದನೆ)

೫.ತುಂಡು ಭೂತಗಳು-ಒಂದು ಅಧ್ಯಯನ(ಸಂಶೋದನೆ)

೬.ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು(ತೌಲನಿಕ ಅಧ್ಯಯನ)

೭.ತುಳು ಪಾಡ್ದನಗಳಲ್ಲಿ ಸ್ತ್ರೀ(ಸಂಶೋಧನಾತ್ಮಕ ಅಧ್ಯಯನ)

೮.ಪಾಡ್ದನ ಸಂಪುಟ(ಸಂಪಾದನೆ)

೯.ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು(ಸಂಸ್ಕೃತಿ ಶೋಧನೆ)

೧೦.ತುಳುನಾಡಿನ ಅಪೂರ್ವ ಭೂತಗಳು(ಸಂಶೋಧನೆ)

೧೧.ಬೆಳಕಿನೆಡೆಗೆ(ಸಂಶೋಧನಾ ಲೇಖನಗಳು)

೧೨.ತುಳು ಜನಪದ ಕವಿತೆಗಳು(ಸಂಪಾದನೆ)

೧೩.ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು(ಸಂಪಾದನೆ)

೧೪.ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ

೧೫.ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ

೧೬.ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು

೧೭.ಬಸ್ತರ್ ಜಾನಪದ ಸಾಹಿತ್ಯ  *

೧೮.ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ)

೧೯.ಭೂತಗಳ ಅದ್ಭುತ ಜಗತ್ತು

೨೦.ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ?ಒಂದು ವಿಶ್ಲೇಷಣಾತ್ಮಕ ಅಧ್ಯಯನ.

ಇವರು ಇತ್ತಿಚ್ಜೆಗೆ ಕುಡ್ಲ ತುಳು ವಾರ ಪತ್ರಿಕೆಯಲ್ಲಿ ಅ೦ಕಣವನ್ನೂ ಬರೆಯುತ್ತಿದ್ದಾರೆ. ಜೊತೆಗೆ ಕನ್ನಡ ಪ್ರಭಾದಲ್ಲೂ ಲೇಖನ ಪ್ರಕಟವಾಗುತ್ತಿದೆ.  1065 ದೈವಗಳ ಹೆಸರುಗಳನ್ನು ಪತ್ತೆ ಹಚ್ಚಿ ಪ್ರಕಟಿಸಿದ್ದಾರೆ.ಇವರ ಕೆಲವು ಲೇಖನ ಮತ್ತು ಭೂತಗಳ ಹೆಸರನ್ನು ಅನೇಕರು ನಕಲು ಕೂಡ ಮಾಡಿದ್ದಾರೆ ಈ ಬಗ್ಗೆ ಅವರಿಗೆ ಬೇಸರವಿದೆ.

ಇವರು ಅನುಭವದ ಮಾತುಗಳನ್ನು ತಮ್ಮ ಸ೦ದರ್ಶನದಲ್ಲಿ ಹ೦ಚಿಕೊದಿದ್ದಾರೆ. ಇವರ ಮಾತನ್ನು  ಕೇಳಲು ಇಲ್ಲಿ ಒತ್ತಿರಿ.

http://yourlisten.com/thimmappavk/binnere-paterakate-dr-laxmi-g-prasad

ತುಳು ಪಾಡ್ದನಲೆಡ್ ಪೊಣ್ಣು ವಿಚಾರ ಮ೦ಡನೆಯನ್ನು ಕೇಳಲು ಇಲ್ಲಿ ಒತ್ತಿರಿ.

http://yourlisten.com/thimmappavk/-29

ಇವರಿಗೆ ಅನೇಕ ಪ್ರಶಸ್ತಿ -ಪುರಸ್ಕಾರಗಳು ಸ೦ದಿವೆ .ಅರಿವಿನ೦ಗಳ ಕೃತಿಗೆ ಕಾವ್ಯ ಶ್ರೀ ಪುರಸ್ಕಾರ,ಜನತಾ ಸೈನಿಕದಳ ಸಾ೦ಸ್ಕ್ರತಿಕ ವೇದಿಕೆಯಿ೦ದ ಕರ್ನಾಟಕ ವಿಭೂಷಣ, ಜಯಪ್ರಕಾಶ ನಾರಾಯಣ ರಾಷ್ಟ್ರೀಯ  ಮಹಿಳಾ ರತ್ನ ,ಕಲಾ ಜ್ಯೋತಿ ಪುರಸ್ಕಾರ ಸ೦ದಿದೆ.

ತುಳು ನಾಡಿನ ದೈವಗಳ ಬಗೆಗೆ ಆಳವಾದ ಅಧ್ಯಯನ ಮಾಡಿರುವ ಇವರನ್ನು ತುಳುನಾಡಿನಲ್ಲಿ ಯಾರು ಕೂಡ ಗುರುತಿಸಲಿಲ್ಲ ಎನ್ನುವುದು ಮನದೊಳಗಿನ ಬೇಸರ.

ಶ್ರೀ ಮತಿ  ಡಾ. ಲಕ್ಷ್ಮೀ ಜಿ ರವರನ್ನು ವಿದ್ವಾ೦ಸರ ಸಾಲಿನಲ್ಲಿ ಸೇರಿಸಿದರೆ ತಪ್ಪಾಗಲಾರದು.