ತುಳುನಾಡಿನ ರಂಗ ಮಲ್ಲಿಗೆ ಡಾ .ಸಂಜೀವ ದಂಡಕೇರಿ


ಪರಶುರಾಮನ ಕುಡರಿಡ್ ಪುಟ್ಟಿನ ತುಳುನಾಡ್ ….ಹಾಗೆಯೇ . ದಾನೆ ಪೊಣ್ಣೆ ನಿನ್ನ ಮನಸೆಂಕ್ ತೆರಿಯಂದೆ ಪೋ ವಾ ? ಇಂತಹ ಸುಮಧುರ ಹಾಡುಗಳನ್ನು ಕೇಳದ ತುಳುವರಿಲ್ಲ .ಇದರ ಮೆಚ್ಚುಗೆಗೆ ಪಾತ್ರರಾಗಿರುವವರು “ರಂಗ ಮಲ್ಲಿಗೆ“ರಂಗಸೌರಭ” ಎರಡು ಬಿರುದು ಪಡೆದ ನಮ್ಮ ತುಳುನಾಡಿನ ಹೆಮ್ಮೆಯ ನಿರ್ದೇಶಕ ಹಾಗೂ ಕಲಾವಿದರಾದ ಶ್ರೀ ಸಂಜೀವ ದಂಡಕೇರಿ .ಬಯ್ಯ ಮಲ್ಲಿಗೆ ನಾಟಕದ ಮೂಲಕ ಬೆಳಕಿಗೆ ಬಂದ ಸಂಜೀವ ದಂಡಕೇರಿಯವರು ಓರ್ವ ಯಶಸ್ವಿ ನಿರ್ದೇಶಕರು ಹೌದು .ಬಯ್ಯ ಮಲ್ಲಿಗೆ ನಾಟಕ ಕಳೆದ ೪೦ ವರ್ಷಗಳಿಂದ ದೇಶ ವಿದೇಶಗಳಲ್ಲಿ ಸುಮಾರು ೨೬ ಸಾವಿರ ಪ್ರದರ್ಶನವಾಗಿ ಬಹುದೊಡ್ಡ ದಾಖಲೆಯನ್ನೇ ಬರೆಯಿತು . ಇದರ ಜೊತೆಗೆ ಈ ನಾಟಕ ಕನ್ನಡ ,ಮರಾಠಿ ,ಇಂಗ್ಲೀಷ್ ಜ಼ೊತೆಗೆ ಕೊಂಕಣಿಯಲ್ಲಿ ಸಂಜೆ ಚೊಕಳೊ ರಂಗ ಭೂಮಿಯಲ್ಲಿ ಭಾಷಾಂತರ ವಾಯಿತು . ೧೯೭೭ರಲ್ಲಿ ಶ್ರೀ ಜಯರಾಮ್ ಫಿಲ್ಮ್ ಬ್ಯಾನರ್ ನ ಅಡಿಯಲ್ಲಿ ಬೊಳ್ಳಿ ದೋಟ ಸಿನೆಮ ತೆರೆಗೆ ಬಂತು .ನಗರದ ಜ್ಯೋತಿ ಮತ್ತು ರಾಮಕಾಂತಿ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು . ಬಯ್ಯಮಲ್ಲಿಗೆ ನಾಟಕದ ಮೂಲಕ ದಂಡಕೇರಿಯವರು ಹೆಸರು ಗಳಿಸಿದರೂ ಕೂಡ ೧೯೬೨ ರಲ್ಲಿ ಮೊದಲು ನಾಟಕ ಕಲ್ಪಂದಿ ತಿಮ್ಮೆ .

                                                          ಡಾ .ಸಂಜೀವ ದಂಡಕೇರಿಯವರೊಂದಿಗೆ

ಇವರು ರಚಿಸಿದ ಕನ್ನಡ ತುಳು ನಾಟಕಗಳು
➧ಚಂದ್ರಿಕಾ ➧ ಮಸಣದ ಮನೆ ➧ವಿಧಿಲೀಲೆ ➧ಒಂಜೇ ಕರ್ಲ್ ➧ದುಡ್ದುದ ಮಾರ್ಲ್ ➧ಅಕ್ಕಾ ➧ಮಲ್ಲಾಯಮಗೆ ➧ಪೊಣ್ಣ ಜನ್ಮ ➧ಮೆಗ್ಡಿ ಪಾಲಿ➧ದಲಾಲಿ ದಾಸು ➧ಪುನರ್ಜನ್ಮ ➧ಬಯ್ಯಮಲ್ಲಿಗೆ ➧ಕಾವೇರಿ ➧ಕೋರ್ಟು ತೀರ್ಪು ➧ಅಮ್ಮಾ ➧ಬೊಳ್ಳಿ ಮೂಡುಂಡು➧ ಪುಣ್ಣಮೆ ➧ಪಾದಕಾಣಿಕೆ ➧ಪೂ ಪನ್ನೀರ್➧ ಪೂ ಮುಳ್ಳು ➧ಸರಸ್ವತಿ ➧ಪಾಪ ಪುಣ್ಯ ➧ಗಂಗಾ-ರಾಮ್ ➧ರಾಧ -ಕೃಷ್ಣ

ಶ್ರೀ ಸಂಜೀವ ದಂಡಕೇರಿ ಓದಿದ್ದು ಕದ್ರಿಯ ಪದುವ ಕಾಲೇಜಿನಲ್ಲಿ ,ನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದವಿಯನ್ನು ಪಡೆದರು.
ಇವರ ಸಂದರ್ಶನವನ್ನು ಇಲ್ಲಿ ಕೇಳಿ


ಮತ್ತೊಂದು ಸಂಗತಿಯೇನೆ೦ದರೆ ಇವರ ಹೆಸರಿನೊಂದಿಗೆ “ದಂಡಕೇರಿ” ಎನ್ನುವ ಪದ ಉಳಿದುಕೊಂಡಿದೆ ಇದೇನೂ ಮನೆತನದ ಹೆಸರಲ್ಲ ,ಹಿಂದೆ ಕುಲಶೇಖರ ಪ್ರದೇಶದಲ್ಲಿ ಶೇಖರ ಎನ್ನುವ ದೊಡ್ಡ ರಾಜ ತನ್ನ ಅಧಿಪತ್ಯವನ್ನು ಹೊಂದಿದ್ದನು ಈ ಸಮಯದಲ್ಲಿ ಇವನನ್ನು ಸೋಲಿಸಲು ಬೇರೆ ರಾಜರು ಯೆಯ್ಯಾಡಿ ಸಮೀಪ ದಂಡು ಬಂದು ಅನೇಕ ದಿನಗಳ ವರೆಗೆ ನೆಲೆ ಊರಿತ್ತು .ಈ ಕಾರಣಕ್ಕಾಗಿಯೇ ಅಲ್ಲಿಗೆ ದಂಡಕೇರಿ ಎನ್ನುವ ಹೆಸರು ಬಂತು.
ಸದ್ಯಕ್ಕೆ ದಂಡ ಕೇರಿ ಯವರು ಯಾವುದೇ ಸಿನೆಮಾ ಮಾಡಲು ಮನಸು ಮಾಡುತ್ತಿಲ್ಲ. ಹೊಸ ಕಲಾವಿದರ ಸಿನೆಮಗಳನ್ನೇ ನೋಡಿ ಆನ೦ದಿಸುತ್ತಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಆದರೆ ಬೊಳ್ಳಿ ದೋಟ ಒಂದೇ ಸಿನೆಮಾ ಮಾತ್ರ ಅವರ ಬಳಿ ಉಳಿದು ಕೊಂಡಿದೆ. ಬಯ್ಯಮಲ್ಲಿಗೆ ಸಿನೆಮಾದ ಯಾವುದೇ ತುಣುಕನ್ನು ಕಾಪಾಡಲು ಸಾಧ್ಯವಾಗಿಲ್ಲ ಹಾಗಾಗಿ ಬೊಳ್ಳಿ ದೋಟ ಸಿನೆಮಾವನ್ನು ಮರು ಚಿತ್ರೀಕರಣ ಮಾಡಿ ಒಂದು ದಾಖಲೆಗಾಗಿ ಇಟ್ಟುಕೊಳ್ಳುವತ್ತ ಚಿತ್ತ ಹರಿಸಿದ್ದಾರೆ .
ಇವರ ಸಂದರ್ಶನವನ್ನು ಇಲ್ಲಿ ಕೇಳಿ

ತಮ್ಮ ಜೊತೆಗಿನ ಎಲ್ಲಾ ಕಾಲಾವಿದರನ್ನು ಸದಾ ನೆನಪಿಸಿಕೊಳ್ಳುವ ದಂಡಕೇರಿಯವರದು ಮುತ್ತಿನಂತ ಮಾತು . ಆಗಿನ ಸಿನೆಮಾದಲ್ಲಿ ಹೆಣ್ಣಿನ ಮೈ ಮುಟ್ಟವ ಯಾವುದೇ ಸಂದರ್ಭ ಗಳಿಲ್ಲ . ಮುಟ್ಟಿದರೆ ಅದು ದೊಡ್ಡ ಸುದ್ದಿಯೇ ಸರಿ . ದಾನೆ ಪೊಣ್ನೆ ನಿನ್ನ ಮನಸೆಂಕ್ ತೆರಿಯಂದೆ ಪೂವಾ ….. ಹಾಡಿನಲ್ಲಿ ದೂರ ನಿ೦ತೆ ಡಾನ್ಸ್ ಮಾಡಿರುವುದನ್ನು ನೆನಪಿಸುಕೊಳ್ಳುವ ಅವರು ಈಗೀನ ಚಿತ್ರಗಳಲ್ಲಿ ಹೊಕ್ಕುಳ ವರೆಗೆ ಕೈ ಹಾಕುವ ಸುದ್ದಿಯನ್ನು ನನ್ನೊಂದಿಗೆ ಹಂಚಿಕೊಂಡರು .
ಶ್ರೀ ಸಂಜೀವ ದಂಡಕೇರಿಯವರು ಈಗ ಏನು ಮಾಡುತ್ತಿದ್ದಾರೆ ಎ೦ಬ ಪ್ರಶ್ನೆ ನಿಮಗೂ ಬಂದಿರಬಹುದು . ಹೊಸ ನಾಟಕ ಬರೆಯದಿದ್ದರೂ ಅಕಾಡೆಮಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ . ಹಾಗೆಯೇ ತಮ್ಮ ಕ್ಲಿನಿಕ್ ನಲ್ಲಿ ಮಧ್ಯಾಹ್ನ ದ ನಂತರ ಸಿಗುತ್ತಾರೆ .
ಗೌರವ ದ ಕಿರೀಟ
➨ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ೨೦೦೨, ಶ್ರೀ ಕ್ಷೇತ್ರ ಧರ್ಮಸ್ಥಳ
➨ಸರ್ . ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ೨೦೪ ರವೀಂದ್ರ ಕಲಾ ಕ್ಷೇತ್ರ ಬೆಂಗಳೂರು
➨ಕುವೆಂಪು ವಿಶ್ವರತ್ನ ಪ್ರಶಸ್ತಿ ೨೦೦೪ ಕಲಾ ಕ್ಷೇತ್ರ ಬೆಂಗಳೂರು
➨ಅಂತರ್ ರಾಷ್ಟ್ರೀಯ ಗ್ಲೋಬಲ್ ಮ್ಯಾನ್ ಎನರ್ಡ್ ೨೦೦೫ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಿಂಗಾಪುರ
➨ಚಿತ್ರ ಭಾರತಿ ೩೫ ನೇ ಚಿತ್ರೋತ್ಸವ ಪ್ರಶಸ್ತಿ ಮಂಗಳೂರು ಪುರಭವನ
➨ತೌಳವ ಪ್ರಶಸ್ತಿ ೨೦೦೭ ಮಂಗಳೂರು ಪುರಭವನ.

➨ಬುದ್ದ ಶಾಂತಿ ಪ್ರಶಸ್ತಿ

ಮಾಜಿ ಹಣಕಾಸು ಸಚಿವರಾದ ಶ್ರೀ ಬಿ ಜನಾರ್ಧನ ಪೂಜಾರಿಯರಿಂದ “ರಂಗ ಮಲ್ಲಿಗೆ‘ ಬಿರುದನ್ನು ಮಂಗಳೂರಿನ ಪುರಭವನದಲ್ಲಿ ೧೯-೮-೨೦೦೧ರಲ್ಲಿ ಪಡೆದರು ಜ಼ೊತೆಗೆ “ರಂಗಸೌರಭ “ಬಿರುದನ್ನು ಕರ್ನಾಟಕ ವಿಧಾನ ಸಭಾಪತಿ ಮಾನ್ಯ ಬಿ ಎಲ್ ಶಂಕರ್ ಮತ್ತು ಚಲನ ಚಿತ್ರ ನಟ ಶ್ರೀ ಅಶ್ವತ್ ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಪುರಭವನದಲ್ಲಿ೩೧-೩೨೦೦೨ರಂದು ಮತ್ತೊಮ್ಮೆ ಪಡೆದರು .

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s