MY NEW BLOG


Dear friends my new blog address

       http://vkkadaba.blogspot.in/

And     http://vktulukabite.blogspot.in/

Advertisements

ಮಾರ್ಗದರ್ಶಕರು(ಕನ್ನಡ ಕವಿತೆ)

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಹಿರಿಯರ ಬಗ್ಗೆ 2009 ರಲ್ಲಿ ಬರೆದ ಕವನ ,ನಿಮ್ಮ ಹೃದಯದ ಕದ ತಟ್ಟಿದರೆ ಒಂದು ಸಣ್ಣ ಪ್ರತಿಕ್ರೀಯೆ ನೀಡಿ...

ಬಾಲ್ಯ ಮತ್ತು ತಾರುಣ್ಯದ
ನೆನಪುಗಳ ಪಳೆಯುಳಿಕೆ
ಚಿಂತೆಗಳ ದೂರವಿರಿಸಿ ,
ವೃದ್ದಾಪ್ಯ ಕಳೆವ ಅನಿವಾರ್ಯತೆ ಮನಕೆ ll
ನೈಜತೆಯ ರೂಪ ಮಾಯವಾಗಿ
ಕ್ಷೀಣಗೊಂಡ ದೇಹಶಕ್ತಿ
ಆದರೂ ಕಿರಿಯರಿಗೆ ಮಾರ್ಗದರ್ಶಕರು
ಪೂಜ್ಯರೆಂಬ ದೇವ ಭಕ್ತಿ ll
ಬದುಕಿನ ಕೃತಾರ್ಥತೆಯ ಕಾಣುವ ಭಾಗ್ಯ ಶಾಲಿ
ದಕ್ಕುವುದು ಕೆಲವರಿಗೆ ಮಾತ್ರ
ಕುಟುಂಬದೊಳಗೆ ಅನಾಥರು
ಬೇಕಿಲ್ಲ ಅನುಕಂಪ ,ಮಾನವೀಯತೆಯ ಸೂತ್ರ !

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಚಿತ್ರ ಕೃಪೆ ಸಿಂಚನಾ ಶ್ಯಾಮ್

ರೊಚ್ಚುಗೆದ್ದ ಗಾಳಿಯಂತೆ ಯುವ ಮನಸು
ಸ್ವಾರ್ಥ ಬೀಡು ಬಿಟ್ಟು ಮರೆಯಾಗಿದೆ ಮೌಲ್ಯ
ಶೇಷಾ ಯುಷ್ಯ ವನ್ನು ಕಳೆವ ಮುದಿ ದೇಹಕೆ
ಕಾಡುವುದೊಂದೆ ಮರೆಯಲಾಗದ ಬಾಲ್ಯ ll
ಪೋಕಿ ಜೀವನದ ವ್ಯಾಮೋಹದಲಿ
ಹಿರಿಯರಿಗಿಲ್ಲ ಶಾಂತಿಯ ಆನಂದ ಧಾಮ
ಕೊನೆಗಾಲಕೆ ಸಿಕ್ಕಿತೊಂದು ಸೂರು
ಯಾರು ಬಂಧುಗಲಿಲ್ಲ ,ಅನಾಥರ ವೃದ್ದಾಶ್ರಮ ll
ಬಾಳಸಂಜೆಯಲಿ ಬಾಳುವಂತೆ
ಹಿರುಯರ ಬಗ್ಗೆ ಯೂ ಇರಲಿ ಗಮನ
ದಾರಿ ದೀಪದಂತೆ ಅವರು
ಹೊರೆಯೆಂಬ ಭಾವನೆ ಆಗಲಿ ಮನದೊಳಗಿಂದ ಶಮನ ll

ವಿಶ್ವ ತುಳುವೆರೆ ಪರ್ಬಡ್ ಇಂಗ್ಲೀಷ್ ದ ಮದಿಪು …!


ತುಳು ಲೇಸ್ ಲೆಡ್ ತುಳು ಪಾತೆರ್೦ಡನೆ ಪೊರ್ಲು ಆಂಡ ಮುರನಿ ಕುಡ್ಲದ ಅಡ್ಯಾರ್ ದ ಜಾಗೆ ಡ್ ನಡತಿನ ವಿಶ್ವ ತುಳುವೆರೆ ಪರ್ಬಡ್ ಮಾತ್ರ ಉದಿಪನ ಲೇಸ್ ಡ್ ಇಂಗ್ಲೀಷ್ ದ ಮದಿಪು ಕೇಂದ್ ತುಳುವೆರೆಗ್ ಬೇಜಾರಾತ್ ೦ಡ್ . ತುಳುಕು ತುಳುವೇ ಸಾಟಿ . ಅಂಚದ್ ತುಳುತ ಒವ್ವೆ ಕಾರರ್ಯಕ್ರಮ ಡ್ ಬೇತೆ ಬಾಸೆ ದ ಸಜ್ಜಿಗೆ ಬಜಿಲ್ ಬೊರ್ಚಿ . ಮುರಾನಿದ ಆ ಮದಿಪುನು ನಿಕ್ಲೆಗ್ ಕೇನ್ಪಪೋ ೦ದುಲ್ಲೇ ಕೇಂದ್ ಎಂಕ್ ತೆರಿಪಾಲೆ..

ಮೊಟ್ಟೆಗಳ ದರೋಡೆಕೊರನನ್ನು ಒಮ್ಮೆ ನೋಡ್ತೀರಾ?

ಮೊಟ್ಟೆಗಳ ದರೋಡೆ ಓವಿರಾಪ್ಟ ರ್

ಅರೆ…. ! ಇದೆಂತ ಪ್ರಾಣಿ ಅಂತ ಅಚ್ಚರಿ ಪಡಬೇಡಿ . ಇದು ಮಂಗೋಲಿಯಾದ ಗೊಬಿ ಮರುಭೂಮಿಯಲ್ಲಿ ಕಂಡುಬರುವ ಒಂದು ಪ್ರಾಣಿ .ಇದರ ಹೆಸರು ಓವಿರಾಪ್ಟ ರ್. ಇದು ನೋಡಲು ಹಕ್ಕಿಯಂತಿದೆ . ಬಹಳ ಸುಲಭ ವಾಗಿ ಹೇಳುವುದಾದರೆ ನಮ್ಮೂರಿನ ನಾಟಿ ಕೋಳಿ ! ಓವಿರಾಪ್ಟ ರ್ ಬಹುಶ:ಮಾಂಸಹಾರಿ ಯಂತೆ ಕಾಣುತ್ತದೆ . ತನ್ನ ಬಲವಾದ ಕೊಕ್ಕಿನಿಂದ ಹಾಗು ದವಡೆಗಳಿಂದ ಮಾಂಸ ಮತ್ತು ಮೊಟ್ಟೆ ,ಬೀಜಗಳು ,ಕೀಟಗಳು ,ಸಸ್ಯಗಳನ್ನು ತಿನ್ನುವುದು ಇದರ ಆಹಾರ ಕ್ರಮವಾಗಿದೆ . ಉದ್ದಾವಾದ ಕಾಲುಗಳನ್ನು ಹೊಂದಿರುವ ಈ ಪ್ರಾಣಿಯ ದೇಹ ಬಹಳ ನಾಜೂಕಿನಿ೦ದ ಕೂಡಿದೆ .

ಮೊಟ್ಟೆಗಳ ದರೋಡೆ ಓವಿರಾಪ್ಟ ರ್

     ಮೊಟ್ಟೆಗಳ ದರೋಡೆ ಓವಿರಾಪ್ಟ ರ್                                                     

ಇದು ಬಹಳ ವೇಗವಾಗಿ ಚಲಿಸುವ ಪ್ರಾಣಿಯು ಹೌದು . ಓವಿರಾಪ್ಟ ರ್ ಡೈನೋಸಾರ್ ನಂತೆ ೧. ೮ ರಿಂದ ೨. ೫ ಮೀಟರ್ ಉದ್ದವಾದಿದ್ದು ೨೫ ರಿಂದ ೩೦ ಕಿಲೋದ ಷ್ಟು ತೂಕವಿದೆ . ಈ ಪ್ರಾಣಿ ಮಾತ್ರ ಈಗ ಬದುಕಿ ಉಳಿದಿಲ್ಲ . ನೀವು ನೋಡುವುದಾದರೆ ಪಿಲಿಕುಳ ದ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಡಿ . ಅಲ್ಲಿ ಅದರ ಪ್ರತಿರೂಪವಿದೆ . ಚಿತ್ರ ಕೃಪೆ :ಸಿಂಚಾನ ಶ್ಯಾಮ್

ನಿಮ್ಮ ಮನೆಯಲ್ಲಿ ಬಜೆ ಇದೆಯಾ?

ಒಣ ಬಜೆ

ಮಗು ಹುಟ್ಟಿದ ತಕ್ಷಣ ಒಂದಲ್ಲ ಒಂದು ರೀತಿಯಲ್ಲಿ ಮದ್ದುಗಳನ್ನು ನೀಡುತ್ತಲೇ ಇರುತ್ತಾರೆ . ಈ ಮದ್ದುಗಳ ಪೈಕಿ ಬಜೆಯು ಒಂದು .ಮುಖ್ಯವಾಗಿ ಮಕ್ಕಳಲ್ಲಿ ತೊದಲುವಿಕೆ ಸಮಸ್ಯೆ ಕಂಡುಬಂದಾಗ ಅಂದರೆ ವಾಕ್ ಶಕ್ತಿಯನ್ನು ಹೆಚ್ಚಿಸಲು ಈ ಒಣ ಬಜೆಯನ್ನು ಅರೆದು ಕೊಡುತ್ತಾರೆ . ಸಂಸ್ಕೃತ ದಲ್ಲಿ ವಜಾ ಎಂಬುದಾಗಿ ಕರೆಯುತ್ತಾರೆ. ನಾನು ಓದಿದ ಮಾಹಿತಿಯಂತೆ ಬಜೆಯ ಶಾಸ್ತ್ರೀಯ ಹೆಸರು `ಅಕೊರಸ್ ಕ್ಯಲಾಮಸ್.ಬಜೆಯನ್ನು ಆಯುರ್ವೇದ ಔಷಧದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ . ಈ ಬಜೆಯನ್ನು ಸೀಮಿತವಾಗಿ ವಾಗಿ ಅರೆದು ಕೊಡುತ್ತಾರೆ . ಒಂದುವೇಳೆ ಜಾಸ್ತಿಯಾದರೆ ವಾಂತಿಯಾಗುತ್ತದೆ .

ಒಣ ಬಜೆ

                                    ಒಣ ಬಜೆ

ಭೇದಿಯ ಶಮನಕ್ಕಾಗಿ ಹಸಿ ಬಜೆಯನ್ನು ಅರೆದು ಕೊಡುತ್ತಾರೆ . ಮತ್ತೊಂದು ವಿಶೇಷ ವೆಂದರೆ ಇದನ್ನು ಸುಟ್ಟು ಇದ್ದಿಲು (ಮಸಿ) ಮಾಡಿ ಕೊಟ್ಟರೆ ಮಲಬದ್ದತೆ ನಿವಾರಣೆ ಯೂ ಆಗುತ್ತದೆ .ಮನೆಯ ಹಿರಿಯರಲ್ಲಿ ಬಜೆಯ ಬಗ್ಗೆ ಸಾಮಾನ್ಯ ವಾಗಿ ಹೆಚ್ಚಾಗಿ ಗೊತ್ತಿರುತ್ತದೆ . ನನಗೂ ಬಜೆ ತಿನ್ನಿಸಿದರಂತೆ ಆಗ ನಾನು ಸಣ್ಣ ಪಾಪು ! ಬಜೆಯನ್ನು ಈಗ ನೋಡುವ ಅವಕಾಶವಾಯ್ತು . ಹಸಿ ಬಜೆಗಾಗಿ ತುಂಬಾ ಕಡೆ ಹುಡುಕಾಡಿದೆ ಆದರೆ ಎಲ್ಲೂ ಸಿಕ್ಕಿಲ್ಲ . ನನ್ನ ನೆರೆ ಮನೆಯ ಹಿರಿಯರು ಹೇಳುವಂತೆ ಮಕ್ಕಳಿಗೆ ಅತಿಸಾರ,ಕೆಮ್ಮು ,ನೆಗಡಿಯಾದಾಗ ಬಜೆಯನ್ನು ಪುಡಿಮಾಡಿ ಜೇನುತುಪ್ಪ ದೊಂದಿಗೆ ನೀಡಿದರೆ ಗುಣ ಮುಖವಾಗುತ್ತದೆಯಂತೆ . ಮತ್ತೆ ಗರ್ಭಿಣಿ ಯಾರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಾಗಿ ವಜಾಮೋದಕ ತಯಾರಿಸಿ ನೀಡುತ್ತಾರೆ . ಮತ್ತೆ ಮಕ್ಕಳಲ್ಲಿ ಕಿವಿ ನೋವು ಸಮಸ್ಯೆ ಉಂಟಾದಾಗ ಬಜೆಯ ತುಂಡಿನ ರಸವನ್ನು ಕಿವಿಗೆ ಬಿಡಬಹುದು . ಬಜೆಯ ಬಗ್ಗೆ ನಿಮಗೂ ಹೆಚ್ಚು ಗೊತ್ತಿದ್ದರೆ ತಿಳಿಸಿ ಆಯ್ತಾ ?

ತುಳುನಾಡಿನ ರಂಗ ಮಲ್ಲಿಗೆ ಡಾ .ಸಂಜೀವ ದಂಡಕೇರಿ


ಪರಶುರಾಮನ ಕುಡರಿಡ್ ಪುಟ್ಟಿನ ತುಳುನಾಡ್ ….ಹಾಗೆಯೇ . ದಾನೆ ಪೊಣ್ಣೆ ನಿನ್ನ ಮನಸೆಂಕ್ ತೆರಿಯಂದೆ ಪೋ ವಾ ? ಇಂತಹ ಸುಮಧುರ ಹಾಡುಗಳನ್ನು ಕೇಳದ ತುಳುವರಿಲ್ಲ .ಇದರ ಮೆಚ್ಚುಗೆಗೆ ಪಾತ್ರರಾಗಿರುವವರು “ರಂಗ ಮಲ್ಲಿಗೆ“ರಂಗಸೌರಭ” ಎರಡು ಬಿರುದು ಪಡೆದ ನಮ್ಮ ತುಳುನಾಡಿನ ಹೆಮ್ಮೆಯ ನಿರ್ದೇಶಕ ಹಾಗೂ ಕಲಾವಿದರಾದ ಶ್ರೀ ಸಂಜೀವ ದಂಡಕೇರಿ .ಬಯ್ಯ ಮಲ್ಲಿಗೆ ನಾಟಕದ ಮೂಲಕ ಬೆಳಕಿಗೆ ಬಂದ ಸಂಜೀವ ದಂಡಕೇರಿಯವರು ಓರ್ವ ಯಶಸ್ವಿ ನಿರ್ದೇಶಕರು ಹೌದು .ಬಯ್ಯ ಮಲ್ಲಿಗೆ ನಾಟಕ ಕಳೆದ ೪೦ ವರ್ಷಗಳಿಂದ ದೇಶ ವಿದೇಶಗಳಲ್ಲಿ ಸುಮಾರು ೨೬ ಸಾವಿರ ಪ್ರದರ್ಶನವಾಗಿ ಬಹುದೊಡ್ಡ ದಾಖಲೆಯನ್ನೇ ಬರೆಯಿತು . ಇದರ ಜೊತೆಗೆ ಈ ನಾಟಕ ಕನ್ನಡ ,ಮರಾಠಿ ,ಇಂಗ್ಲೀಷ್ ಜ಼ೊತೆಗೆ ಕೊಂಕಣಿಯಲ್ಲಿ ಸಂಜೆ ಚೊಕಳೊ ರಂಗ ಭೂಮಿಯಲ್ಲಿ ಭಾಷಾಂತರ ವಾಯಿತು . ೧೯೭೭ರಲ್ಲಿ ಶ್ರೀ ಜಯರಾಮ್ ಫಿಲ್ಮ್ ಬ್ಯಾನರ್ ನ ಅಡಿಯಲ್ಲಿ ಬೊಳ್ಳಿ ದೋಟ ಸಿನೆಮ ತೆರೆಗೆ ಬಂತು .ನಗರದ ಜ್ಯೋತಿ ಮತ್ತು ರಾಮಕಾಂತಿ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು . ಬಯ್ಯಮಲ್ಲಿಗೆ ನಾಟಕದ ಮೂಲಕ ದಂಡಕೇರಿಯವರು ಹೆಸರು ಗಳಿಸಿದರೂ ಕೂಡ ೧೯೬೨ ರಲ್ಲಿ ಮೊದಲು ನಾಟಕ ಕಲ್ಪಂದಿ ತಿಮ್ಮೆ .

                                                          ಡಾ .ಸಂಜೀವ ದಂಡಕೇರಿಯವರೊಂದಿಗೆ

ಇವರು ರಚಿಸಿದ ಕನ್ನಡ ತುಳು ನಾಟಕಗಳು
➧ಚಂದ್ರಿಕಾ ➧ ಮಸಣದ ಮನೆ ➧ವಿಧಿಲೀಲೆ ➧ಒಂಜೇ ಕರ್ಲ್ ➧ದುಡ್ದುದ ಮಾರ್ಲ್ ➧ಅಕ್ಕಾ ➧ಮಲ್ಲಾಯಮಗೆ ➧ಪೊಣ್ಣ ಜನ್ಮ ➧ಮೆಗ್ಡಿ ಪಾಲಿ➧ದಲಾಲಿ ದಾಸು ➧ಪುನರ್ಜನ್ಮ ➧ಬಯ್ಯಮಲ್ಲಿಗೆ ➧ಕಾವೇರಿ ➧ಕೋರ್ಟು ತೀರ್ಪು ➧ಅಮ್ಮಾ ➧ಬೊಳ್ಳಿ ಮೂಡುಂಡು➧ ಪುಣ್ಣಮೆ ➧ಪಾದಕಾಣಿಕೆ ➧ಪೂ ಪನ್ನೀರ್➧ ಪೂ ಮುಳ್ಳು ➧ಸರಸ್ವತಿ ➧ಪಾಪ ಪುಣ್ಯ ➧ಗಂಗಾ-ರಾಮ್ ➧ರಾಧ -ಕೃಷ್ಣ

ಶ್ರೀ ಸಂಜೀವ ದಂಡಕೇರಿ ಓದಿದ್ದು ಕದ್ರಿಯ ಪದುವ ಕಾಲೇಜಿನಲ್ಲಿ ,ನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದವಿಯನ್ನು ಪಡೆದರು.
ಇವರ ಸಂದರ್ಶನವನ್ನು ಇಲ್ಲಿ ಕೇಳಿ


ಮತ್ತೊಂದು ಸಂಗತಿಯೇನೆ೦ದರೆ ಇವರ ಹೆಸರಿನೊಂದಿಗೆ “ದಂಡಕೇರಿ” ಎನ್ನುವ ಪದ ಉಳಿದುಕೊಂಡಿದೆ ಇದೇನೂ ಮನೆತನದ ಹೆಸರಲ್ಲ ,ಹಿಂದೆ ಕುಲಶೇಖರ ಪ್ರದೇಶದಲ್ಲಿ ಶೇಖರ ಎನ್ನುವ ದೊಡ್ಡ ರಾಜ ತನ್ನ ಅಧಿಪತ್ಯವನ್ನು ಹೊಂದಿದ್ದನು ಈ ಸಮಯದಲ್ಲಿ ಇವನನ್ನು ಸೋಲಿಸಲು ಬೇರೆ ರಾಜರು ಯೆಯ್ಯಾಡಿ ಸಮೀಪ ದಂಡು ಬಂದು ಅನೇಕ ದಿನಗಳ ವರೆಗೆ ನೆಲೆ ಊರಿತ್ತು .ಈ ಕಾರಣಕ್ಕಾಗಿಯೇ ಅಲ್ಲಿಗೆ ದಂಡಕೇರಿ ಎನ್ನುವ ಹೆಸರು ಬಂತು.
ಸದ್ಯಕ್ಕೆ ದಂಡ ಕೇರಿ ಯವರು ಯಾವುದೇ ಸಿನೆಮಾ ಮಾಡಲು ಮನಸು ಮಾಡುತ್ತಿಲ್ಲ. ಹೊಸ ಕಲಾವಿದರ ಸಿನೆಮಗಳನ್ನೇ ನೋಡಿ ಆನ೦ದಿಸುತ್ತಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಆದರೆ ಬೊಳ್ಳಿ ದೋಟ ಒಂದೇ ಸಿನೆಮಾ ಮಾತ್ರ ಅವರ ಬಳಿ ಉಳಿದು ಕೊಂಡಿದೆ. ಬಯ್ಯಮಲ್ಲಿಗೆ ಸಿನೆಮಾದ ಯಾವುದೇ ತುಣುಕನ್ನು ಕಾಪಾಡಲು ಸಾಧ್ಯವಾಗಿಲ್ಲ ಹಾಗಾಗಿ ಬೊಳ್ಳಿ ದೋಟ ಸಿನೆಮಾವನ್ನು ಮರು ಚಿತ್ರೀಕರಣ ಮಾಡಿ ಒಂದು ದಾಖಲೆಗಾಗಿ ಇಟ್ಟುಕೊಳ್ಳುವತ್ತ ಚಿತ್ತ ಹರಿಸಿದ್ದಾರೆ .
ಇವರ ಸಂದರ್ಶನವನ್ನು ಇಲ್ಲಿ ಕೇಳಿ

ತಮ್ಮ ಜೊತೆಗಿನ ಎಲ್ಲಾ ಕಾಲಾವಿದರನ್ನು ಸದಾ ನೆನಪಿಸಿಕೊಳ್ಳುವ ದಂಡಕೇರಿಯವರದು ಮುತ್ತಿನಂತ ಮಾತು . ಆಗಿನ ಸಿನೆಮಾದಲ್ಲಿ ಹೆಣ್ಣಿನ ಮೈ ಮುಟ್ಟವ ಯಾವುದೇ ಸಂದರ್ಭ ಗಳಿಲ್ಲ . ಮುಟ್ಟಿದರೆ ಅದು ದೊಡ್ಡ ಸುದ್ದಿಯೇ ಸರಿ . ದಾನೆ ಪೊಣ್ನೆ ನಿನ್ನ ಮನಸೆಂಕ್ ತೆರಿಯಂದೆ ಪೂವಾ ….. ಹಾಡಿನಲ್ಲಿ ದೂರ ನಿ೦ತೆ ಡಾನ್ಸ್ ಮಾಡಿರುವುದನ್ನು ನೆನಪಿಸುಕೊಳ್ಳುವ ಅವರು ಈಗೀನ ಚಿತ್ರಗಳಲ್ಲಿ ಹೊಕ್ಕುಳ ವರೆಗೆ ಕೈ ಹಾಕುವ ಸುದ್ದಿಯನ್ನು ನನ್ನೊಂದಿಗೆ ಹಂಚಿಕೊಂಡರು .
ಶ್ರೀ ಸಂಜೀವ ದಂಡಕೇರಿಯವರು ಈಗ ಏನು ಮಾಡುತ್ತಿದ್ದಾರೆ ಎ೦ಬ ಪ್ರಶ್ನೆ ನಿಮಗೂ ಬಂದಿರಬಹುದು . ಹೊಸ ನಾಟಕ ಬರೆಯದಿದ್ದರೂ ಅಕಾಡೆಮಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ . ಹಾಗೆಯೇ ತಮ್ಮ ಕ್ಲಿನಿಕ್ ನಲ್ಲಿ ಮಧ್ಯಾಹ್ನ ದ ನಂತರ ಸಿಗುತ್ತಾರೆ .
ಗೌರವ ದ ಕಿರೀಟ
➨ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ೨೦೦೨, ಶ್ರೀ ಕ್ಷೇತ್ರ ಧರ್ಮಸ್ಥಳ
➨ಸರ್ . ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ೨೦೪ ರವೀಂದ್ರ ಕಲಾ ಕ್ಷೇತ್ರ ಬೆಂಗಳೂರು
➨ಕುವೆಂಪು ವಿಶ್ವರತ್ನ ಪ್ರಶಸ್ತಿ ೨೦೦೪ ಕಲಾ ಕ್ಷೇತ್ರ ಬೆಂಗಳೂರು
➨ಅಂತರ್ ರಾಷ್ಟ್ರೀಯ ಗ್ಲೋಬಲ್ ಮ್ಯಾನ್ ಎನರ್ಡ್ ೨೦೦೫ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಿಂಗಾಪುರ
➨ಚಿತ್ರ ಭಾರತಿ ೩೫ ನೇ ಚಿತ್ರೋತ್ಸವ ಪ್ರಶಸ್ತಿ ಮಂಗಳೂರು ಪುರಭವನ
➨ತೌಳವ ಪ್ರಶಸ್ತಿ ೨೦೦೭ ಮಂಗಳೂರು ಪುರಭವನ.

➨ಬುದ್ದ ಶಾಂತಿ ಪ್ರಶಸ್ತಿ

ಮಾಜಿ ಹಣಕಾಸು ಸಚಿವರಾದ ಶ್ರೀ ಬಿ ಜನಾರ್ಧನ ಪೂಜಾರಿಯರಿಂದ “ರಂಗ ಮಲ್ಲಿಗೆ‘ ಬಿರುದನ್ನು ಮಂಗಳೂರಿನ ಪುರಭವನದಲ್ಲಿ ೧೯-೮-೨೦೦೧ರಲ್ಲಿ ಪಡೆದರು ಜ಼ೊತೆಗೆ “ರಂಗಸೌರಭ “ಬಿರುದನ್ನು ಕರ್ನಾಟಕ ವಿಧಾನ ಸಭಾಪತಿ ಮಾನ್ಯ ಬಿ ಎಲ್ ಶಂಕರ್ ಮತ್ತು ಚಲನ ಚಿತ್ರ ನಟ ಶ್ರೀ ಅಶ್ವತ್ ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಪುರಭವನದಲ್ಲಿ೩೧-೩೨೦೦೨ರಂದು ಮತ್ತೊಮ್ಮೆ ಪಡೆದರು .

ಕಲಾವಿದನಾಗಿ ಮಿಂಚಿದ ಶಿಕ್ಷಕ -ವಿಟ್ಲ ಮ೦ಗೇಶ್ ಭಟ್


ಶ್ರೀಯುತ ವಿಟ್ಲ ಮ೦ಗೇಶ್ ಭಟ್ ರಾಜ ಪುರೋಹಿತ ವೇದ ಮೂರ್ತಿ ಶ್ರೀ ವಿಟ್ಲ ಭವಾನಿಶ೦ಕರ್ ಭಟ್ ಮತ್ತು ಶ್ರೀ ಮತಿ ವಿ ವಸ೦ತಿ ಭಟ್ ರವರ ಪುತ್ರ.ಓದಿದ್ದು ಎಸ್.ಎಸ್ .ಎಲ್ ಸಿ ಮತ್ತು ಟಿ. ಸಿ .ಹೆಚ್.ನ೦ತರ ಮ೦ಗಳೂರಿನ ಗಣಪತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೧೯೭೭ರಿಂದ ೨೦೦೩ ರ ವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೨೦೦೨ ರಿ೦ದ ೨೦೧೧ ಜೂನ್  ೩೦ ರ ವರೆಗೆ ಗಣಪತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಯಾಗಿದ್ದಾರೆ.

                      ಶ್ರೀ ವಿಟ್ಲ ಮಂಗೇಶ್ ಭಟ್

ನಾಟಕ,ಯಕ್ಷಗಾನ ಚಲನ ಚಿತ್ರ ,ಕಿರುತೆರೆ ಸೇರಿದ೦ತೆ ಅನೇಕ ಮಗ್ಗುಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾ ಸಾಧಕರಾಗಿದ್ದಾರೆ.ಇದರ ಜೊತೆಗೆ  ಧಾರ್ಮಿಕ ಉಪನ್ಯಾಸ,ಕೀರ್ತನಕಾರ,ಕೇಬಲ್ ವಾರ್ತಾ ಓದುಗ,ಸ೦ದರ್ಶನಕಾರ,ಕಾರ್ಯಕ್ರಮ ಸ೦ಘಟಕ ,ಜೊತೆಗೆ ನಾಟಕ ನಿರ್ದೇಶಕ ಕೂಡ ಹೌದು.

ಇವರ ಸಾಧನೆ:

ಕೊ೦ಕಣಿ,ಕನ್ನಡ,ತುಳು ಭಾಷಾನಾಟಕಗಳಲ್ಲಿ ಹಾಸ್ಯ ಹಾಗೂ ಪೋಷಕ ಪತ್ರಗಳ ನಿರ್ವಹಣೆ

ರ೦ಗಯೋಗಿ ರಮಾನ೦ದ ಚೂರ್ಯರ ಹೌದಾದ್ರೆ ಹೌದೆನ್ನಿ ಹಾಗೂ ಊರೆಲ್ಲಾ ಹೇಳ್ಬೇಡಿ ನಾಟಕಗಳಲ್ಲಿ ಸುಮಾರು ೫೦ ಕ್ಕೂ ಮೀರಿದ ಪ್ರದರ್ಶನಗಳಲ್ಲಿ ಅಭಿನಯ.

ಖ್ಯಾತ ಚಿತ್ರನಟ ನಿರ್ಮಾಪಕ,ಕತೆಗಾರ ,ನಿರ್ದೇಶಕಶ್ರೀ ಕೆ ಏನ್ ಟೇಲರ್ ರವರ ಗಣೇಶ ನಾಟಕ ಸಭಾ ಮ೦ಗಳೂರು ಇದರಲ್ಲಿ ದೇವೆರ್ ಕೊರ್ಪೆರ್ ,ದಾಸುನ ಮದ್ಮೆ,ಯಾನ್ ಸನ್ಯಾಸಿ ಆಪೆ,ರಾಣಿ ಅಬ್ಬಕ್ಕ,ತಮ್ಮಲೆ ಅರ್ವತ್ತನ ಕೋಲ ಮೊದಲಾದ ನಾಟಕ ಗಳಲ್ಲಿ ಹಾಸ್ಯ ಪಾತ್ರಗಳ ನಿರ್ವಹಣೆ.

                                                                        ಸಂದರ್ಶನ ಸಮಯದಲ್ಲಿ ನನ್ನೊಂದಿಗೆ ಮಂಗೇಶ ಭಟ್ಟರು

ಶ್ರೀ  ಯುತ ವಿಟ್ಲ ಮ೦ಗೇಶ್  ಭಟ್ಟರು  ಸುಮಾರು  ೨೫ ಯಕ್ಷಗಾನ ಧ್ವನಿ ಸುರುಳಿಗಳಲ್ಲಿ  ಭಾಗವಹಿಸಿದ್ದಾರೆ .ಹಾಗೇಯೆ ರಸಿಕರತ್ನ ಶ್ರೀ ವಿಟ್ಲ ಗೋಪಾಲಕೃಷ್ಣ ಜೋಷಿ ಇವರರಲ್ಲಿ ಯಕ್ಷಗಾನ ವನ್ನು ಅಭ್ಯಾಸ ಮಾಡಿದರು

ಚಿತ್ರರಂಗದಲ್ಲಿ

➲೧೯೭೯ರಲ್ಲಿ ನ್ಯಾಯಗಾದ್  ಬದಕ್ ,

➲೧೯೮೦ ರಲ್ಲಿ ತಪಸ್ವಿನಿ { ಪ್ರಥಮ ಸಾರಸ್ವತ ಕೊ೦ಕಣಿ  ವರ್ಣ ಚಿತ್ರ }.

➲೨೦೦೬ರಲ್ಲಿ ಕೋಟಿಚೆನ್ನಯ

➲,೨೦೧೧ರಲ್ಲಿ ಒರ್ಯದೊರಿ ಅಸಲ್ ,

➲೨೦೧೪ ರಲ್ಲಿ ಚಾಲಿಪೋಲಿಲು ,

➲ಮದಿಮೆ  ಸಿನೆಮಾ ಗಳಲ್ಲಿ  ತಮ್ಮ ಕಲಾ ಸಾಮರ್ಥ್ಯ ವನ್ನು  ತೋರಿಸಿದ್ದಾರೆ .

                                                                                   ಮದಿಮೆ ಸಿನೆಮಾದಲ್ಲಿ

ಕಿರುತೆರೆಯಲ್ಲಿ  

➲೧೯೯೮ ರಲ್ಲಿ ಜನನಿ ಮೆಗಾ ಧಾರವಾಹಿ ನಿರ್ಮಾಣ ,

➲೧೯೯೮ರಲ್ಲಿಉದಯ ಟಿವಿ ಯ ಹೃದಯರಾಗ ,

➲೨೦೦೨ರಲ್ಲಿ ಜೀವನ್ಮುಖಿ ,

➲೨೦೦೮ರಲ್ಲಿ ಬಂದೆ ಬರತಾವ ಕಾಲ ೨೦೧೧ರಲ್ಲಿ ಶ್ರೀ  ರಾಘವೇಂದ್ರ ವೈಭವ

ಶ್ರೀ  ಯುತ ವಿಟ್ಲ ಮ೦ಗೇಶ್  ಭಟ್ ರವರು ಮೇಕಪ್  ಮಾಡುವುದರಲ್ಲಿ ನಿಸ್ಸಿಮಾರು . ಕಳೆದ ೨೫ ವರ್ಷಗಳಿಂದ ಲಯನ್ಸ್  ಕ್ಲಬ್ ಇ೦ಟರ್ ನ್ಯಾಷನಲ್  ನ ಲಯನ್ಸ್  ಕ್ಲಬ್ ವಿಟ್ಲದ ಸದಸ್ಯ ,ಕಾರ್ಯದರ್ಶಿ ,ಅಧ್ಯಕ್ಷ ,ವಲಯಾದ್ಯಕ್ಷ ,ಜೊತೆಗೆ ಜಿಲ್ಲಾ ಧ್ಯಕ್ಷ ಕನಾಗಿ  ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಸಂದಿರುವ ಪ್ರಶಸ್ತಿಗಳು

➨೧೯೯೯ರಲ್ಲಿ ಇರ್ವತ್ತೂರು  ಕಮಲಾಕ್ಷ ಗೋವರ್ಧನ  ನಾಯಕ್ ಸಾಂಸ್ಕೃತಿಕ ಪ್ರತಿಷ್ಟಾ ನ ಪ್ರಶಸ್ತಿ .

➨ ವಿಶ್ವ  ಸಾರಸ್ವತ ಸಮ್ಮೇಳನದಲ್ಲಿ  ವಿಶ್ವ ಸಾರಸ್ವತ ಸಾಧನ ಪ್ರಶಸ್ತಿ .

➨ಎಡ್ಸ್  ಜಾಗೃತಿಗಾಗಿ ಅತ್ಯುತ್ತಮ ಜಿಲ್ಲಾ ಧ್ಯಕ್ಷ ಪ್ರಶಸ್ತಿ

➨೨೦೦೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ  ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.

➨೨೦೧೧ರಲ್ಲಿ ಜಿಲ್ಲಾ  ರಾಜ್ಯೋ ತ್ಸವ  ಪ್ರಶಸ್ತಿ.

                                                                                    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭ

ಭಟ್ಟರು ಇತ್ತೀಚಿಗೆ ರೆಡೀಯೋ ಸಾರಂಗ್ ೧೦೭.೮ ಎಫ್ ಎಮ್ ನ ತುಳು ಕಾರ್ಯಕ್ರದಲ್ಲಿ ತಮ್ಮ ಸಾಧನೆಯ ಮೆಟ್ಟಿಲುಗಳನ್ನು ಹಂಚಿಕೊಂಡಿದ್ದಾರೆ