ಮಾರ್ಗದರ್ಶಕರು(ಕನ್ನಡ ಕವಿತೆ)

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಹಿರಿಯರ ಬಗ್ಗೆ 2009 ರಲ್ಲಿ ಬರೆದ ಕವನ ,ನಿಮ್ಮ ಹೃದಯದ ಕದ ತಟ್ಟಿದರೆ ಒಂದು ಸಣ್ಣ ಪ್ರತಿಕ್ರೀಯೆ ನೀಡಿ...

ಬಾಲ್ಯ ಮತ್ತು ತಾರುಣ್ಯದ
ನೆನಪುಗಳ ಪಳೆಯುಳಿಕೆ
ಚಿಂತೆಗಳ ದೂರವಿರಿಸಿ ,
ವೃದ್ದಾಪ್ಯ ಕಳೆವ ಅನಿವಾರ್ಯತೆ ಮನಕೆ ll
ನೈಜತೆಯ ರೂಪ ಮಾಯವಾಗಿ
ಕ್ಷೀಣಗೊಂಡ ದೇಹಶಕ್ತಿ
ಆದರೂ ಕಿರಿಯರಿಗೆ ಮಾರ್ಗದರ್ಶಕರು
ಪೂಜ್ಯರೆಂಬ ದೇವ ಭಕ್ತಿ ll
ಬದುಕಿನ ಕೃತಾರ್ಥತೆಯ ಕಾಣುವ ಭಾಗ್ಯ ಶಾಲಿ
ದಕ್ಕುವುದು ಕೆಲವರಿಗೆ ಮಾತ್ರ
ಕುಟುಂಬದೊಳಗೆ ಅನಾಥರು
ಬೇಕಿಲ್ಲ ಅನುಕಂಪ ,ಮಾನವೀಯತೆಯ ಸೂತ್ರ !

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಚಿತ್ರ ಕೃಪೆ ಸಿಂಚನಾ ಶ್ಯಾಮ್

ರೊಚ್ಚುಗೆದ್ದ ಗಾಳಿಯಂತೆ ಯುವ ಮನಸು
ಸ್ವಾರ್ಥ ಬೀಡು ಬಿಟ್ಟು ಮರೆಯಾಗಿದೆ ಮೌಲ್ಯ
ಶೇಷಾ ಯುಷ್ಯ ವನ್ನು ಕಳೆವ ಮುದಿ ದೇಹಕೆ
ಕಾಡುವುದೊಂದೆ ಮರೆಯಲಾಗದ ಬಾಲ್ಯ ll
ಪೋಕಿ ಜೀವನದ ವ್ಯಾಮೋಹದಲಿ
ಹಿರಿಯರಿಗಿಲ್ಲ ಶಾಂತಿಯ ಆನಂದ ಧಾಮ
ಕೊನೆಗಾಲಕೆ ಸಿಕ್ಕಿತೊಂದು ಸೂರು
ಯಾರು ಬಂಧುಗಲಿಲ್ಲ ,ಅನಾಥರ ವೃದ್ದಾಶ್ರಮ ll
ಬಾಳಸಂಜೆಯಲಿ ಬಾಳುವಂತೆ
ಹಿರುಯರ ಬಗ್ಗೆ ಯೂ ಇರಲಿ ಗಮನ
ದಾರಿ ದೀಪದಂತೆ ಅವರು
ಹೊರೆಯೆಂಬ ಭಾವನೆ ಆಗಲಿ ಮನದೊಳಗಿಂದ ಶಮನ ll

Advertisements

ಮೊಟ್ಟೆಗಳ ದರೋಡೆಕೊರನನ್ನು ಒಮ್ಮೆ ನೋಡ್ತೀರಾ?

ಮೊಟ್ಟೆಗಳ ದರೋಡೆ ಓವಿರಾಪ್ಟ ರ್

ಅರೆ…. ! ಇದೆಂತ ಪ್ರಾಣಿ ಅಂತ ಅಚ್ಚರಿ ಪಡಬೇಡಿ . ಇದು ಮಂಗೋಲಿಯಾದ ಗೊಬಿ ಮರುಭೂಮಿಯಲ್ಲಿ ಕಂಡುಬರುವ ಒಂದು ಪ್ರಾಣಿ .ಇದರ ಹೆಸರು ಓವಿರಾಪ್ಟ ರ್. ಇದು ನೋಡಲು ಹಕ್ಕಿಯಂತಿದೆ . ಬಹಳ ಸುಲಭ ವಾಗಿ ಹೇಳುವುದಾದರೆ ನಮ್ಮೂರಿನ ನಾಟಿ ಕೋಳಿ ! ಓವಿರಾಪ್ಟ ರ್ ಬಹುಶ:ಮಾಂಸಹಾರಿ ಯಂತೆ ಕಾಣುತ್ತದೆ . ತನ್ನ ಬಲವಾದ ಕೊಕ್ಕಿನಿಂದ ಹಾಗು ದವಡೆಗಳಿಂದ ಮಾಂಸ ಮತ್ತು ಮೊಟ್ಟೆ ,ಬೀಜಗಳು ,ಕೀಟಗಳು ,ಸಸ್ಯಗಳನ್ನು ತಿನ್ನುವುದು ಇದರ ಆಹಾರ ಕ್ರಮವಾಗಿದೆ . ಉದ್ದಾವಾದ ಕಾಲುಗಳನ್ನು ಹೊಂದಿರುವ ಈ ಪ್ರಾಣಿಯ ದೇಹ ಬಹಳ ನಾಜೂಕಿನಿ೦ದ ಕೂಡಿದೆ .

ಮೊಟ್ಟೆಗಳ ದರೋಡೆ ಓವಿರಾಪ್ಟ ರ್

     ಮೊಟ್ಟೆಗಳ ದರೋಡೆ ಓವಿರಾಪ್ಟ ರ್                                                     

ಇದು ಬಹಳ ವೇಗವಾಗಿ ಚಲಿಸುವ ಪ್ರಾಣಿಯು ಹೌದು . ಓವಿರಾಪ್ಟ ರ್ ಡೈನೋಸಾರ್ ನಂತೆ ೧. ೮ ರಿಂದ ೨. ೫ ಮೀಟರ್ ಉದ್ದವಾದಿದ್ದು ೨೫ ರಿಂದ ೩೦ ಕಿಲೋದ ಷ್ಟು ತೂಕವಿದೆ . ಈ ಪ್ರಾಣಿ ಮಾತ್ರ ಈಗ ಬದುಕಿ ಉಳಿದಿಲ್ಲ . ನೀವು ನೋಡುವುದಾದರೆ ಪಿಲಿಕುಳ ದ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಡಿ . ಅಲ್ಲಿ ಅದರ ಪ್ರತಿರೂಪವಿದೆ . ಚಿತ್ರ ಕೃಪೆ :ಸಿಂಚಾನ ಶ್ಯಾಮ್

ನಿಮ್ಮ ಮನೆಯಲ್ಲಿ ಬಜೆ ಇದೆಯಾ?

ಒಣ ಬಜೆ

ಮಗು ಹುಟ್ಟಿದ ತಕ್ಷಣ ಒಂದಲ್ಲ ಒಂದು ರೀತಿಯಲ್ಲಿ ಮದ್ದುಗಳನ್ನು ನೀಡುತ್ತಲೇ ಇರುತ್ತಾರೆ . ಈ ಮದ್ದುಗಳ ಪೈಕಿ ಬಜೆಯು ಒಂದು .ಮುಖ್ಯವಾಗಿ ಮಕ್ಕಳಲ್ಲಿ ತೊದಲುವಿಕೆ ಸಮಸ್ಯೆ ಕಂಡುಬಂದಾಗ ಅಂದರೆ ವಾಕ್ ಶಕ್ತಿಯನ್ನು ಹೆಚ್ಚಿಸಲು ಈ ಒಣ ಬಜೆಯನ್ನು ಅರೆದು ಕೊಡುತ್ತಾರೆ . ಸಂಸ್ಕೃತ ದಲ್ಲಿ ವಜಾ ಎಂಬುದಾಗಿ ಕರೆಯುತ್ತಾರೆ. ನಾನು ಓದಿದ ಮಾಹಿತಿಯಂತೆ ಬಜೆಯ ಶಾಸ್ತ್ರೀಯ ಹೆಸರು `ಅಕೊರಸ್ ಕ್ಯಲಾಮಸ್.ಬಜೆಯನ್ನು ಆಯುರ್ವೇದ ಔಷಧದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ . ಈ ಬಜೆಯನ್ನು ಸೀಮಿತವಾಗಿ ವಾಗಿ ಅರೆದು ಕೊಡುತ್ತಾರೆ . ಒಂದುವೇಳೆ ಜಾಸ್ತಿಯಾದರೆ ವಾಂತಿಯಾಗುತ್ತದೆ .

ಒಣ ಬಜೆ

                                    ಒಣ ಬಜೆ

ಭೇದಿಯ ಶಮನಕ್ಕಾಗಿ ಹಸಿ ಬಜೆಯನ್ನು ಅರೆದು ಕೊಡುತ್ತಾರೆ . ಮತ್ತೊಂದು ವಿಶೇಷ ವೆಂದರೆ ಇದನ್ನು ಸುಟ್ಟು ಇದ್ದಿಲು (ಮಸಿ) ಮಾಡಿ ಕೊಟ್ಟರೆ ಮಲಬದ್ದತೆ ನಿವಾರಣೆ ಯೂ ಆಗುತ್ತದೆ .ಮನೆಯ ಹಿರಿಯರಲ್ಲಿ ಬಜೆಯ ಬಗ್ಗೆ ಸಾಮಾನ್ಯ ವಾಗಿ ಹೆಚ್ಚಾಗಿ ಗೊತ್ತಿರುತ್ತದೆ . ನನಗೂ ಬಜೆ ತಿನ್ನಿಸಿದರಂತೆ ಆಗ ನಾನು ಸಣ್ಣ ಪಾಪು ! ಬಜೆಯನ್ನು ಈಗ ನೋಡುವ ಅವಕಾಶವಾಯ್ತು . ಹಸಿ ಬಜೆಗಾಗಿ ತುಂಬಾ ಕಡೆ ಹುಡುಕಾಡಿದೆ ಆದರೆ ಎಲ್ಲೂ ಸಿಕ್ಕಿಲ್ಲ . ನನ್ನ ನೆರೆ ಮನೆಯ ಹಿರಿಯರು ಹೇಳುವಂತೆ ಮಕ್ಕಳಿಗೆ ಅತಿಸಾರ,ಕೆಮ್ಮು ,ನೆಗಡಿಯಾದಾಗ ಬಜೆಯನ್ನು ಪುಡಿಮಾಡಿ ಜೇನುತುಪ್ಪ ದೊಂದಿಗೆ ನೀಡಿದರೆ ಗುಣ ಮುಖವಾಗುತ್ತದೆಯಂತೆ . ಮತ್ತೆ ಗರ್ಭಿಣಿ ಯಾರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಾಗಿ ವಜಾಮೋದಕ ತಯಾರಿಸಿ ನೀಡುತ್ತಾರೆ . ಮತ್ತೆ ಮಕ್ಕಳಲ್ಲಿ ಕಿವಿ ನೋವು ಸಮಸ್ಯೆ ಉಂಟಾದಾಗ ಬಜೆಯ ತುಂಡಿನ ರಸವನ್ನು ಕಿವಿಗೆ ಬಿಡಬಹುದು . ಬಜೆಯ ಬಗ್ಗೆ ನಿಮಗೂ ಹೆಚ್ಚು ಗೊತ್ತಿದ್ದರೆ ತಿಳಿಸಿ ಆಯ್ತಾ ?

ಮ೦ಗಳೂರಿನಲ್ಲೊ೦ದು ಹಸಿರು ಸುಜಾತ ವನ


ನಮ್ಮ ಮ೦ಗಳೂರಿನಲ್ಲಿ ಪಾರ್ಕ್ ಗಳಿಗೇನೂ ಕಡಿಮೆ ಇಲ್ಲ .ಕದ್ರಿ ಪಾರ್ಕ್,ಸೇರಿದ೦ತೆ ಅನೇಕ ಪಾರ್ಕ್ ಗಳನ್ನು ನೋಡಿದ್ದಿರಿ.ಆದ್ರೆ ನಾನು ಹೇಳುತ್ತಿರುವುದು ಸಸ್ಯ ಕಾಶಿಯ ಬಗ್ಗೆ ಅಲ್ಲ ಈ ಸುಜಾತ ವನ  ಇರುವುದು ಮ೦ಗಳೂರಿನ ಸ್ಟೇಟ್ ಬ್ಯಾ೦ಕ್ ನಲ್ಲಿ…!ವಿಚಿತ್ರ ಅನಿಸುತ್ತೆ ಅಲ್ವ ? ವಾಹನಗಳ ದಟ್ಟಣೆ,ಕಿಕ್ಕಿರಿದ ದಾರಿಗಳ ನಡುವೆ ಬಹು ಮಹಡಿಯ ಕಟ್ಟಡಗಳು.ಎಲ್ಲಿ ಅ೦ತ ಹುಡುಕಬೇಡಿ.” ಭಾರತೀಯ ಸ್ಟೇಟ್ ಬ್ಯಾ೦ಕ್(STATE BANK OF INDIA)ಕಚೇರಿಯ ಹೊರಗಿನ ಜಾಗವೇ ಸುಜಾತವನ.

ಭಾರತೀಯ ಸ್ಟೇಟ್ ಬ್ಯಾ೦ಕ್ ನಲ್ಲಿರುವ ಸುಜಾತ ವನ

ಈ ಸುಜಾತವನದಲ್ಲಿ ಪ್ರಾಣಿ, ಪಕ್ಷಿಗಳೇನೂ ಇಲ್ಲ .ಇಲ್ಲಿ ವೈವಿದ್ಯಮಯ ತಾಜಾ ತರಕಾರಿಗಳು ನೋಡುಗರನ್ನು ಸೆಳೆಯುತ್ತದೆ.ಕಳೆದ ಬಾರಿ ಬೆ೦ಡೆಕಾಯಿ ಬೆಳೆಸಿದ್ದರೆ ಈ ಬರಿ ಮಾತ್ರ ಅಲಸ೦ಡೆ ಬೆಳೆಯಲಾಗಿದೆ.ಬ್ಯಾ೦ಕ್ ನ ಸಿಬ್ಬ೦ದಿಗಳ ಒಗ್ಗೂಡುವಿಕೆಯಿ೦ದ ಇದು ಯಶಸ್ವಿಯಾಗಿದೆ.” ಭಾರತೀಯ ಸ್ಟೇಟ್ ಬ್ಯಾ೦ಕ್(STATE BANK OF INDIA )ದಿನದ ಹಣಕಾಸಿನ ವೈವಾಟಿನೊ೦ದಿಗೆ ತರಕಾರಿ ಕೃಷಿಯತ್ತ ಕೂಡ ಗಮನ ನೀಡಿರುವುದು ಒಳ್ಳೆಯ ಸ೦ಗತಿ.

ಹಸಿರಿನಿ೦ದ ಕೂಡಿದ ಅಲಸ೦ಡೆ ಬಳ್ಳಿ

ಸುಜಾತ ವನದಲ್ಲಿ ಅಲಸ೦ಡೆಯ ಸಾಮ್ರಾಜ್ಯ

ಇದೊ೦ದು ಮಾದರಿ ಬ್ಯಾ೦ಕ್ ಎ೦ದರೆ ತಪ್ಪಗಾಲಾರದು.ಬ್ಯಾ೦ಕ್ ಕಚೇರಿಯ ಎದುರು ಭಾಗದಲ್ಲಿರುವ ಎರಡು ಕಡೆಯಲ್ಲೂ ತರಕಾರಿಯನ್ನು ಬೆಳೆಯಲಾಗಿದೆ.ಗದ್ದೆ,ತೋಟ ಇದ್ದವರೇ ತರಕಾರಿ ಅಥವಾ ಯಾವುದೇ ರೀತಿಯ ಬೆಳೆ ಬೆಳೆಯದ ಈ ಸನ್ನಿವೇಶದಲ್ಲಿ ಈ ಒ೦ದು ಮ೦ಗಳೂ೦ರು ನಗರದಲ್ಲಿ ತರಕಾರಿ ಮಾಡಿರುವುದು ಹೆಮ್ಮೆಯ ವಿಷಯ..ಹ್ಯಾಮಿ೦ಗ್ ಟನ್ ವೃತ್ತದ ಮು೦ಭಾಗ ,ಸ್ವಾಗತ್ ಹೋಟೆಲ್ ನ ಎದುರು ಭಾಗದಲ್ಲಿ ನೀವು ಕೂಡ ಈ ಸುಜಾತವನವನ್ನು ನೋಡಬಹುದು.

ಕಳೆದ ಬಾರಿ ಬೆಳೆದ ಬೆ೦ಡೆ ಅಲಸ೦ಡೆ ಜೊತೆಗೆ

ಇತರ ಖಾಸಗಿ ಬ್ಯಾ೦ಕ್ ಅಥವಾ ಯಾವುದೇ ಅ೦ಗಡಿ ಮಾಲೀಕರು ಖಾಲಿ ಜಾಗವವನ್ನು ಈ ರೀತಿ ಉಪಯೋಗಿಸಿಕೊ೦ಡರೆ ಉತ್ತಮ ಅಲ್ವೇ?

ಇನ್ನಷ್ಟು ಕೆಲವು ಚಿತ್ರಗಳು:-

ಭಾರತೀಯ ಸ್ಟೇಟ್ ಬ್ಯಾ೦ಕ್ ಮ೦ಗಳೂರು ಶಾಖೆ