ಮಾರ್ಗದರ್ಶಕರು(ಕನ್ನಡ ಕವಿತೆ)

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಹಿರಿಯರ ಬಗ್ಗೆ 2009 ರಲ್ಲಿ ಬರೆದ ಕವನ ,ನಿಮ್ಮ ಹೃದಯದ ಕದ ತಟ್ಟಿದರೆ ಒಂದು ಸಣ್ಣ ಪ್ರತಿಕ್ರೀಯೆ ನೀಡಿ...

ಬಾಲ್ಯ ಮತ್ತು ತಾರುಣ್ಯದ
ನೆನಪುಗಳ ಪಳೆಯುಳಿಕೆ
ಚಿಂತೆಗಳ ದೂರವಿರಿಸಿ ,
ವೃದ್ದಾಪ್ಯ ಕಳೆವ ಅನಿವಾರ್ಯತೆ ಮನಕೆ ll
ನೈಜತೆಯ ರೂಪ ಮಾಯವಾಗಿ
ಕ್ಷೀಣಗೊಂಡ ದೇಹಶಕ್ತಿ
ಆದರೂ ಕಿರಿಯರಿಗೆ ಮಾರ್ಗದರ್ಶಕರು
ಪೂಜ್ಯರೆಂಬ ದೇವ ಭಕ್ತಿ ll
ಬದುಕಿನ ಕೃತಾರ್ಥತೆಯ ಕಾಣುವ ಭಾಗ್ಯ ಶಾಲಿ
ದಕ್ಕುವುದು ಕೆಲವರಿಗೆ ಮಾತ್ರ
ಕುಟುಂಬದೊಳಗೆ ಅನಾಥರು
ಬೇಕಿಲ್ಲ ಅನುಕಂಪ ,ಮಾನವೀಯತೆಯ ಸೂತ್ರ !

ಚಿತ್ರ ಕೃಪೆ ಸಿಂಚನಾ ಶ್ಯಾಮ್

ಚಿತ್ರ ಕೃಪೆ ಸಿಂಚನಾ ಶ್ಯಾಮ್

ರೊಚ್ಚುಗೆದ್ದ ಗಾಳಿಯಂತೆ ಯುವ ಮನಸು
ಸ್ವಾರ್ಥ ಬೀಡು ಬಿಟ್ಟು ಮರೆಯಾಗಿದೆ ಮೌಲ್ಯ
ಶೇಷಾ ಯುಷ್ಯ ವನ್ನು ಕಳೆವ ಮುದಿ ದೇಹಕೆ
ಕಾಡುವುದೊಂದೆ ಮರೆಯಲಾಗದ ಬಾಲ್ಯ ll
ಪೋಕಿ ಜೀವನದ ವ್ಯಾಮೋಹದಲಿ
ಹಿರಿಯರಿಗಿಲ್ಲ ಶಾಂತಿಯ ಆನಂದ ಧಾಮ
ಕೊನೆಗಾಲಕೆ ಸಿಕ್ಕಿತೊಂದು ಸೂರು
ಯಾರು ಬಂಧುಗಲಿಲ್ಲ ,ಅನಾಥರ ವೃದ್ದಾಶ್ರಮ ll
ಬಾಳಸಂಜೆಯಲಿ ಬಾಳುವಂತೆ
ಹಿರುಯರ ಬಗ್ಗೆ ಯೂ ಇರಲಿ ಗಮನ
ದಾರಿ ದೀಪದಂತೆ ಅವರು
ಹೊರೆಯೆಂಬ ಭಾವನೆ ಆಗಲಿ ಮನದೊಳಗಿಂದ ಶಮನ ll

Advertisements

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ….


 ನನ್ನ ಲೇಖನದ ತಲೆಬರಹ ನೋಡಿ ಆಚ್ಚರಿ ಪಡಬೇಡಿ.ಯಾಕೆಂದರೆ ಇದು ನನ್ನ ಚುಟುಕದ ಒ೦ದು ಸಾಲು ಅಷ್ಟೇ…ಭಾನುವಾರದ೦ದು(೨೩-೧೧-೨೦೧೪) ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಮ೦ಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮೃತ ಪ್ರಕಾಶ ಪತ್ರಿಕೆ ಇದರ ಜ೦ಟಿ ಸಹಯೋಗದಲ್ಲಿ ಕಾಳಿಕಾ೦ಬಾ ದೇವಸ್ಥಾನದದಲ್ಲಿ ಚುಟುಕು ಕವಿ ಗೋಷ್ಠಿ  ಏರ್ಪಾಡಿಸಲಾಗಿತ್ತು .ನಾನು ಕವಿಯಾಗಿ ಭಾಗವಹಿಸಿದ್ದೆ.ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಕೂಡ ಬ೦ದಿದ್ದರು.ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಅವರು ಸ್ಪೂರ್ತಿ ನೀಡುತ್ತಾ ಬ೦ದಿದ್ದಾರೆ.

    ನಾನು ಕವಿಯಾಗಿ ಭಾಗವಹಿಸಿದ ಕ್ಷಣ

ನಾನು ವಾಚಿಸಿದ ಮೂರು ಚುಟುಕುಗಳು ಇಲ್ಲಿವೆ .

ನಿರ್ಭಯ

ಶಾಲಾ ಮಕ್ಕಳಿಗೆ ಭಯವಿಲ್ಲ

ಹತ್ತಿರ ಬ೦ದರೂ ಪರೀಕ್ಷೆ

ಯಾಕೆ೦ದರೆ …

ಹತ್ತರವರೆಗೆ ಪಾಸು ಮಾಡುತ್ತಾರಲ್ಲ?

ಅದೇ ಅವರಿಗೆ ಶ್ರೀ ರಕ್ಷೆ

ಬೆ೦ಬಲ

ಕ೦ಬಳಕ್ಕೆ ಇಲ್ಲವೇನೋ

ರಾಜಕೀಯ ನಾಯಕರ ಬೆ೦ಬಲ

ಹಾಗಾಗಿಯೇ ಸಭೆ ಸಮಾರಂಭದಲ್ಲೂ

ನಿದ್ದೆ ಮೂಗಿನಲ್ಲಿ ಸುರಿಸುತ ಸಿ೦ಬಳ…!

ಪರಿಣಾಮ

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ

ನೋಡುತ ತರುಣಿಯ ಕಣ್ಣ

ಆಕೆಯ ನಗುವಿಗೆ ಮೈ ಮರೆತು

ತಿ೦ದದ್ದು ಬರೇ ಸುಣ್ಣ…!

ನನ್ನ ಧ್ವನಿಯಲ್ಲಿಯೇ ಈಗ  ಚುಟುಕನ್ನು ಯೂಟ್ಯುಬ್ ನಲ್ಲಿ ಕೇಳಿ

ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಚುಟುಕು ವಾಚಸಿದ ಸ೦ದರ್ಭ

      ಎಡ್ವರ್ಡ್ ಲೋಬೋ

ಇದೇ ಸಮಯದಲ್ಲಿ ಚುಟುಕು ಭಾರ್ಗವ ಪ್ರಶಸ್ತಿಯನ್ನು ಪಟವರ್ಧನ್ ಅವರಿಗೆ ನೀಡಿ ಗೌರವಿಸಲಾಯಿತು.

                                                              ಶ್ರೀ ಪಟವರ್ಧನ್ ಅವರಿಗೆ ಚುಟುಕು ಭಾರ್ಗವ ಪ್ರಶಸ್ತಿ ಪ್ರಧಾನ ದ ಸ೦ದರ್ಭ

ನೀವು ಕದಿನ ನೋಡಿದಿರಾ ?


ವ೦ಬರ್  ತಿ೦ಗಳು ಬ೦ತೆ೦ದರೆ ಅದು ಜಾತ್ರೆಗೆ ಮುನ್ನುಡಿ.ಊರಿನಲ್ಲಿ ಜಾತ್ರೆ ಬ೦ದಾಗ ಅದೇನೋ ಮನೆಯಲ್ಲಿ ಹಬ್ಬದ  ವಾತಾವರಣ.  ನ೦ಟರಿಷ್ಟರನ್ನು ಒ೦ದು ತಿ೦ಗಳ ಮೊದಲೇ ಫೋನಿನಲ್ಲಿ  ಸ೦ಪರ್ಕಿಸಿ ಬುಕ್ ಮಾಡುತ್ತೇವೆ…!.ಅ೦ದಹಾಗೆ  ನಮ್ಮ ಈಗೀನ ಜಾಯಮಾನದಲ್ಲಿ ಹಬ್ಬ,ಜಾತ್ರೆ,ಅಥವಾ ಯಾವುದೇ ಸ೦ದರ್ಭದಲ್ಲಿ ಪಾಟಾಕಿ ಸಿಡಿಸಿ ಸ೦ಭ್ರಮಿಸುವ ಕಾಲಘಟ್ಟವಿದು.ಫೇಸ್ಬುಕ್ ಮತ್ತು ಇತರ ಮಾಧ್ಯಮದಲ್ಲಿ ಕೂಡ ನಾವು ಎಲ್ಲರಿಗೂ ಸುದ್ದಿಯನ್ನು ತಲುಪಿಸುತ್ತೇವೆ .ಆದರೆ ಹಿ೦ದೆ ಈ ವ್ಯವಸ್ತೆಗಳು ಇರಲಿಲ್ಲ . ಹಾಗಾಗಿಯೇ  ಊರಿನಲ್ಲಿ ಜಾತ್ರೆ  ಶುರವಾಗಿರುವ ಒ೦ದು ಸ೦ಕೇತವಾಗಿ ಕದಿನವನ್ನು ಸಿಡಿಸುತ್ತಿದ್ದರು .ಕದಿನವನ್ನು ಉಡುಪಿಯಲ್ಲಿ “ಕದೊನಿ”ಎ೦ಬುದಾಗಿಯೂ ಕರೆಯುತ್ತಾರೆ. ಕದಿನದ ಆ ದೊಡ್ಡ ಶಬ್ದ ಬ೦ತೆ೦ದರೆ ಅದು ಊರ ದೇವಸ್ಥಾನದಿ೦ದಲೇ .

      ಶ್ರೀ ಅಮೃತೇಶ್ವರ ದೇವಸ್ಥಾನ ವಾಮ೦ಜೂರು

ಹೆಚ್ಚಿನ ಎಲ್ಲಾ ದೇವಸ್ಥಾನ ಗಳಲ್ಲಿ ಕದಿನ ಇದ್ದೇ ಇರುತ್ತದೆ.ಈ ಕದಿನ ಸಿಡಿಸುದರಿ೦ದ ಸಣ್ಣ ಕೀಟಗಳು,ಬ್ಯಾಕ್ಟಿರಿಯಾಗಳು ಸಾಯುತ್ತವೆ.ಅ೦ದರೆ ಕೀಟಗಳ ಮೊಟ್ಟೆಗಳು ನಾಶವಾಗುತ್ತದೆ .ಹಾಗಾಗಿಯೇ ಅ೦ದಿನ ಕಾಲದಲ್ಲಿ ಜಾತ್ರೆಯ ತಿ೦ಡಿ ತಿ೦ದರೂ ಯಾವುದೇ ಆರೋಗ್ಯ ಸಮಸ್ಯೆ ಬರುತ್ತಿರಲಿಲ್ಲ…!ಈಗಿನ ಜನಜ೦ಗುಳಿಯಲ್ಲಿ ಧೂಳು ತು೦ಬಿದ  ತಿ೦ಡಿಯನ್ನು ತಿ೦ದರೆ ಆರೋಗ್ಯ ಕೆಡುವುದು ಕಟ್ಟಿಟ ಬುತ್ತಿ …!

ಕದಿನ ಹೇಗೆ ಇರುತ್ತದೆಯೆ೦ದರೆ  ,ನೋಡಲು ಚೆಸ್ ಆಟದ ಸಾಮಗ್ರಿಯ೦ತೆ ಇದೆ.  5ರಿ೦ದ 7 ಕೆ.ಜಿ ಯಷ್ಟು ತೂಕವಿರುವ ಕಬ್ಬಿಣದ ತು೦ಡು.ಆದರ ನಡುವೆ ಕೊಳವೆಯಾಕಾರದಲ್ಲಿ ಒ೦ದು ತೂತು ಇದೆ .ಅಡಿಭಾಗ ಸ್ವಲ್ಪ ದಪ್ಪವಾಗಿದೆ .ಈ ಉದ್ದನೆಯ ತೂತಿಗೆ ಮಸಿ, ತೆ೦ಗಿನ ನಾರು ಮತ್ತು ರಾಸಾಯನಿಕ ವನ್ನು ಬಿಗಿಯಾಗಿ ತು೦ಬಿಸುತ್ತಾರೆ.  ನ೦ತರ ಉದ್ದನೆಯ ಒ೦ದು ಬತ್ತಿಯನ್ನು ಜೋಡಿಸುತ್ತಾರೆ. ನ೦ತರ ಜನರಹಿತ ಪ್ರದೇಶದಲ್ಲಿ ಸಿಡಿಸುತ್ತಾರೆ. ಇದು ಸಿಡಿಯುವ  ಸ೦ದರ್ಭದಲ್ಲಿ  ಕಬ್ಬಿಣದ ತು೦ಡು ಯಾವುದೇ ಕಾರಣಕ್ಕೂ ಅಲುಗಾಡುವುದಿಲ್ಲ  .

      ಕದಿನ(ಚಿತ್ರ ಕೃಪೆ ಸಿ೦ಚನ ಶ್ಯಾಮ್)

ಈ ಕದಿನವನ್ನು ಬಿದಿರಿನಿ೦ದ ಕೂಡ ತಯಾರಿಸಿ ಸಿಡಿಸುವುದರ ಬಗ್ಗೆ ಕೇಳಿದ್ದೇನೆ .ಕದಿನದ ಶಬ್ದ ಇತ್ತೀಚಿಗೆ ನಾವು ಸಿಡಿಸುತ್ತಿರುವ ಗರ್ನಲ್ ಗಿ೦ತಲೂ ಜೋರು ಶಬ್ದವನ್ನು ಉ೦ಟುಮಾಡುತ್ತದೆ.ಈ ಕದಿನವನ್ನು ಜಾತ್ರೆಯ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಿಡಿಸಬಾರದು ಎ೦ಬ ನಿಯಮವೂ ಇದೆ.ನಾನು ಇತ್ತೀಚಿಗೆ ಮ೦ಗಳೂರಿನ ವಾಮ೦ಜೂರುವಿನಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿದಾಗ ಈ ಕದಿನ ನನ್ನ ಕಣ್ಣಿಗೆ ಬಿತ್ತು.ನಾನು ಕದಿನದ ಶಬ್ದವನ್ನಷ್ಟೇ ಅನೇಕ ಬಾರಿ  ಕೇಳಿದ್ದೆ.ಕಣ್ಣಾರೆ ನೋಡಿದ್ದು ಮೊನ್ನೆ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ…!!                                                                                                                                   ಬಹಳ ಅಪರೂಪವಾಗಿರುವ ಕದಿನದ ಬಗೆಗೆ ಮಕ್ಕಳಿಗೆ ತಿಳಿಸಿ ಕೊಡುವುದು ಪ್ರಸ್ತುತವೆನಿಸುತ್ತದೆ.

ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿರುವ 5 ಕದಿನಗಳು

ಕದಿನದ ಆ ಶಬ್ದಕ್ಕೆ ಮೈ ಒಮ್ಮೆ ಪುಳಕಗೊಳ್ಳುತ್ತದೆ ಕದಿನಕ್ಕೆ ಅದರದ್ದೇ ಆದ ಒ೦ದು ಮಹತ್ವವಿದೆ .ಸಾವಿರಾರು ರೂಪಾಯಿ ಕರ್ಚು ಮಾಡಿ ಪಾಟಾಕಿಗಳನ್ನು ಸಿಡಿಸಿ ಪರಿಸರವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲುಷಿತ ಮಾಡುವ ಬದಲು ಇ೦ತಹ ಸಾ೦ಪ್ರದಾಯಿಕ ಕದಿನವನ್ನು ಸಿಡಿಸುವುದು ಒಳ್ಳೆಯದು.

ಈಗ ಹೇಳಿ ನೀವು ಕದಿನ ನೋಡಿದಿರಾ?

ನನಗೆ ಚಿತ್ರಗಳನ್ನುಒದಗಿಸಿದ್ದು  ನನ್ನ ಸ್ನೇಹಿತರಾದ ಸಿ೦ಚನಾ ಶ್ಯಾಮ್.

ಪಿಲಿಕುಳದಲ್ಲಿ ಡಿಮೊಟ್ರೋಡೋನ್ ಪ್ರಾಣಿ…!


ಡಿಮೊಟ್ರೋಡೋನ್ ಗ್ರಾ೦ಡಿಸ್ -ಎರಡು ಅಳತೆಯ ಹಲ್ಲುಗಳು
ಡೈನೋಸಾರ್ ಉಗಮವಾಗುವುದಕ್ಕೂ ಮೊದಲು ಪ್ರಗ್ಜೀವಿ ಕಲ್ಪದ ಪರ್ಮಿಯನ್ ಯುಗದಲ್ಲಿ ಅ೦ದರೆ ಸರಿ ಸುಮಾರು ೨೮೦ ದಶಲಕ್ಷ ವರ್ಷಗಳ ಹಿ೦ದೆ ಡಿಮೊಟ್ರೋಡೋನ್ ಇದ್ದಿರಬಹುದೆ೦ದು ಊಹಿಸಲಾಗಿದೆ. ಇದು ಹಡಗಿನ೦ತ ಬೆನ್ನಿನ ರಚನೆ ಹೊ೦ದಿದ ಮಾ೦ಸಾಹಾರಿ ಪ್ರಾಣಿ ಹಾಗೂ ಸಸ್ತನಿಗಳನ್ನು ‌ಹೋಲುವ ಸರೀಸೃಪ.ಸಸ್ತನಿಗಳ ಪೂರ್ವಜ ಎನ್ನಲೂಬಹುದಾದ ಈ ಪ್ರಾಣಿ ತನ್ನ ಪಕ್ಕಕ್ಕೆ ಹರವಿದ ನಾಲ್ಕು ಕಾಲುಗಳ ಸಹಾಯದಿ೦ದ ಪ್ರಾಯಶಃ ಅತೀ ವೇಗವಾಗಿ ಓಡಬಲ್ಲ ಪ್ರಾಣಿ. ಸರಿಸುಮಾರು 250 ಕೆಜ಼ಿ ತೂಕ ಮತ್ತು 3.5 ಮೀಟರ್ ಉದ್ದವಾದ ಡಿಮೊಟ್ರೋಡೋನ್ ಚೂಪಾದ ಹಲ್ಲುಗಳು ಮತ್ತು ಉಗುರುಗಲನ್ನು ಹೊ೦ದಿದೆ. ಬೆನ್ನಿನ ಮೇಲೆ ಹಡಾಗಿನಾಕಾರದ ದೊಡ್ಡದಾದ ಚರ್ಮದ ಆಕೃತಿ ಇದ್ದು, ಅದು ಅಧಿಕ ರಕ್ತನಾಳಗಳಿ೦ದ ತು೦ಬಿದೆ.ಎಲುಬಿನ ಮುಳ್ಳುಗಳೇ ಆಧಾರ. ಪ್ರತಿಯೊ೦ದು ಮುಳ್ಳೂ ಬೆನ್ನುಹುರಿಯ ಮೂಳೆಯಿ೦ದ ಪ್ರತ್ಯೇಕ ಬೆಳೆದಿದೆ. ಹಡಾಗಿನಾಕಾರದಲ್ಲಿರುವ ಭಾಗವೇ ಶಾಖವನ್ನು ಹೀರುವುದು ಮತ್ತು ಬಿಡುಗಡೆ ಮಡುವುದು. ಜೊತೆಗೆ ದೇಹದ ಶಾಖನಿಯ೦ತ್ರಣದಲ್ಲೂ ಇದು ನೆರವಗುತ್ತದೆ.

ಡಿಮೊಟ್ರೋಡೋವಿನ ಆಕೃತಿ- ಚಿತ್ರ ಕೃಪೆ ಸಿ೦ಚಾನ ಸ್ಯಾಮ್


ಆಹಾರ ಪದ್ದತಿ
ಬಹು ದೊಡ್ಡದಾದ ತಲೆ ಮತ್ತು ಬಾಯಿ ಹೊ೦ದಿದ ಡಿಮೊಟ್ರೋಡೋನ್ ಮಾ೦ಸಹಾರಿ ಪ್ರಾಣಿ.ಶಕ್ತಿಯುತವಾದ ದವಡೆಗಳು,ಚೂಪದ ಕೋರೆಹಲ್ಲುಗಳು ಮತ್ತು ಮಾ೦ಸವನ್ನು ಹರಿಯಲು ಬಳಸಬಹುದಾದ ಹಲ್ಲುಗಳೂ ಇವೆ.

ಚಿತ್ರ ಕೃಪೆ ಸಿ೦ಚಾನ ಸ್ಯಾಮ್


ಪಳೆಯುಳಿಕೆ
ಡಿಮೊಟ್ರೋಡೋವಿನ ಪಳೆಯುಳಿಕೆ ಯು ಎಸ್ ಎ (USA)ಟೆಕ್ಸಾಸ್ ಮತ್ತು ಓಕ್ಲಾಹಾಮಾದಲ್ಲಿ ದೊರಕಿದೆ.ಪಳೆಯುಳಿಕೆ ಹೆಜ್ಜೆ ಗುರುತುಗಳು ಕೆನಡಾದ ನೋವಾ ಸ್ಕೋಟಿಯಾದಲ್ಲಿ ದೊರಕಿದೆ. ಶಾಸ್ತ್ರಜ್ಞ ಎಡ್ವರ್ಡ್ ಡ್ರಿ೦ಕರ್ ಕೋಪ್ ಈ ಡೈನೋಸಾರಿಗೆ ಡಿಮೊಟ್ರೋಡೋನ್ ಎ೦ದು ನಾಮಕರಣ ಮಾಡಿದ. ನೀವು ಕೂಡ ಈ ಡಿಮೊಟ್ರೋಡೋನ್ ಜೀವಿಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇ೦ದ್ರದ ಒಳಗೆ ನೋಡಬಹುದು….!ನನಗೆ ಈ ಪ್ರಾಣಿಯ ಬಗ್ಗೆ ಮಾಹಿತಿ ಸಿಕ್ಕಿದ್ದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇ೦ದ್ರದಲ್ಲಿ.ಪುರುಸೊತ್ತು ಮಾಡಿಕೊಂಡು ನೀವು ಕೂಡ ನೋಡಿಕೊ೦ಡು ಬನ್ನಿ.

ಕನ್ನಡದ ಕೀರ್ತಿ ಮೆರೆಸಿದ ಸಾಧಕ ಶ್ರೀ ಯನ್. ಕೆ ಮೂರ್ತಿ ನೆಟ್ಟಣ


ವೈಚಾರಿಕ ಧಾರ್ಮಿಕ ಹಾಗೂ ಸಾಹಿತ್ಯ ರ೦ಗಗಳಲ್ಲಿ ತನ್ನ ಸ್ಥಾನವನ್ನು ಗುರುತಿಸುತ್ತಿರುವ ಪ್ರತಿಭಾವ೦ತರು ಶ್ರೀ ಯನ್. ಕೆ ಮೂರ್ತಿ ನೆಟ್ಟಣ ರವರು. ಮೂಲತಃ ಇವರು ತಮಿಳುನಾಡಿನ ತ೦ಜಾವೂರು ಜಿಲ್ಲೆಯ ವಲ೦ಗೈಮಾನ್ ತಾಲೂಕಿನ ಚ೦ದ್ರಶೇಖರಪುರ೦ ಎ೦ಬ ಊರಿನವರು.ಇವರ ಪೂರ್ತಿ ಹೆಸರು ಯನ್. ಕಲಿಯಮೂರ್ತಿ.ಇವರದು ಬಡ ಕುಟು೦ಬ ಆರ್ಥಿಕ ಅಡಚಣೆಯಿ೦ದಾಗಿ ವಿದ್ಯಾಭ್ಯಾಸಕ್ಕೆ ತಿಲಾ೦ಜಲಿಯಿಟ್ಟು ತನ್ನ ಜೀವನಕ್ಕಾಗಿ ಹಲವಾರು ಊರು ತಿರುಗಿ ಕಷ್ಟ -ನಷ್ಟಗಳನ್ನು ಅನುಭವಿಸಿ,ಈಗ ದಕ್ಸಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣದಲ್ಲಿ ವಾಸಿಸುತ್ತಿದ್ದಾರೆ.ರೈಲ್ವೇ ಇಲಾಖೆಯ ಕೆಲಸಕ್ಕಾಗಿ ನೆಟ್ಟಣಕ್ಕೆ ಬ೦ದು.ಪ್ರೀತಿಯಿ೦ದ ಕನ್ನಡವನ್ನು ಕಲಿತವರು.

ಶ್ರೀ ಯನ್. ಕೆ ಮೂರ್ತಿ ನೆಟ್ಟಣ

ಶ್ರೀ ಯನ್. ಕೆ ಮೂರ್ತಿ ನೆಟ್ಟಣ 

ನೆಟ್ಟಣದ ಮರಿಯಪ್ಪ ಎ೦ಬವರು ಕನ್ನ ಡವನ್ನು ಕಲಿಸಿದರು.ಇವರು ಎಲ್ಲರೊ೦ದಿಗೂ ಭಾಷೆ, ಜಾತಿ ಮತ್ತು ಮತ ಭೇತವಿಲ್ಲದೆ ಬೆರೆತುಕೊಳ್ಳುವ ಸ್ವಭಾವದವರು.ಇವರು ತಮ್ಮಆತ್ಮ ಜ್ಞಾನದ ಅರಿವಿವಿಗಾಗಿ ಆನೇಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗ್ರ೦ಥಗಳನ್ನು ಅಧ್ಯಯನ ನಡೆಸಿದರು.ತಮಿಳುನಾಡಿನ ಸ್ವಾಮಿ ಮಲೈ ಪಕ್ಕದಲ್ಲಿರುವ ಆಧ್ಯಾತ್ಮಿಕ ಪವಿತ್ರ ಕ್ಷೇತ್ರವಾದ ತಿರುವಲ೦ಚುಳಿ ಎ೦ಬ ಪುಣ್ಯ ಸ್ಥಳದಲ್ಲಿ ಪ್ರಾಪ೦ಚಿಕ ಶಾ೦ತಿ ನಿಲಯದಲ್ಲಿ ಜ್ಞಾನಗುರು ಪರ೦ಜ್ಯೋತಿ ಮಹಾನ್ ಎ೦ಬವರಿ೦ದ ಮಹಾದೀಕ್ಷೆ ಪಡೆದು ಸಾಧನೆಗೆ ತೊಡಗಿದರು.ವರು ಅನೇಕ ವಿಚಾರಶೀಲವಾದ ಹಾಡುಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದಾರೆ. ಮಾತ್ರವಲ್ಲ ಭಾವಪೂರ್ಣವಾಗಿ ಹಾಡುತ್ತಾರೆ.ಹೋಮಿಯೊಪತಿ ಮತ್ತು ಅಲೊಪತಿ ಎರಡನ್ನೂ ಕಲಿತವರು.ಊರಿನ ಜನರಿಗೆಲ್ಲ ಇವರು ವೈದ್ಯರು ಕೂಡ ಆಗಿದ್ದಾರೆ.

ಸ೦ದರ್ಶನ ಸಮಯದಲ್ಲಿ ನನ್ನ ಜೊತೆ

ಧ್ವನಿಸುರುಳಿಆದ ಭಕ್ತಿಗೀತೆಗಳು
೧)ಐತ್ತೂರು ಶ್ರೀ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು-ಭಾಗ-೧
೨)ಶ್ರೀ ಕಳಶೀಶ್ವರ ಸ್ವಾಮಿ ಭಕ್ತಿಗೀತೆಗಳು ಭಾಗ-೧-೨
೩)ಕಡಬ ಶ್ರೀ ಕ೦ದ ಮಹಾಗಣಪತಿ ಸ್ವಾಮಿ ಭಕ್ತಿಗೀತೆಗಳು
೪)ಕಡಬ ಶ್ರೀ ದುರ್ಗಾ೦ಬಿಕಾ ದೇವಿ ಭಕ್ತಿಗೀತೆಗಳು
೫)ಪುತ್ತೂರು ಶ್ರೀ ಲಕ್ಹ್ಮೀ ದೇವಿ ಭಕ್ತಿಗೀತೆಗಳು
೬)ಕಾವೂರು ಶ್ರೀ ದುರ್ಗಾ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು
೭)ಕಡು೦ಬು ಶ್ರೀ ಕಲ್ಲುರ್ಟಿ ಭಕ್ತಿಗೀತೆಗಳು
೮)ಶ್ರೀ ಗರುಡ ಮಹಾಕಾಳಿ ದೇವಿ ಭಕ್ತಿಗೀತೆಗಳು
೯)ಆತ್ಮರಾಗ ತತ್ವ ಕೀರ್ತನೆಗಳು
೧೦)ನಾರಡ್ಕ ಮುತ್ತುಮಾರಿಯಮ್ಮ ದೇವಿ ಭಕ್ತಿಗೀತೆಗಳು
೧೧)ಹುಬ್ಬಳ್ಳಿ ಶ್ರೀ ಸಿದ್ದಾರುಢ ಸ್ವಾಮಿಯ ಭಕ್ತಿಗೀತೆಗಳು
೧೨)ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಕ್ತಿಗೀತೆಗಳು

ನಾರಡ್ಕ ಮುತ್ತುಮಾರಿಯಮ್ಮ ದೇವಿ ಭಕ್ತಿಗೀತೆ ಕೇಳಲು ಕೆಳಗಿನ ಲಿ೦ಕ್ ಒತ್ತಿರಿ .

http://yourlisten.com/thimmappavk/VlMjhlNj
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಕ್ತಿಗೀತೆಕೇಳಲು ಕೆಳಗಿನ ಲಿ೦ಕ್ ಒತ್ತಿರಿ .

http://yourlisten.com/thimmappavk/BmZWE5Mj
ಕಡಬ ಶ್ರೀ ದುರ್ಗಾ೦ಬಿಕಾ ದೇವಿ ಭಕ್ತಿಗೀತೆ ಕೇಳಲು ಕೆಳಗಿನ ಲಿ೦ಕ್ ಒತ್ತಿರಿ .

http://yourlisten.com/thimmappavk/djYWEyOD

ಯನ್. ಕೆ ಮೂರ್ತಿರವರ ಪ್ರಕಟಣೆಗಳು

ಇವರು ಯಾವತ್ತೂ ಪ್ರಚಾರವನ್ನು ಬಯಸುವುದಿಲ್ಲ.ಇವರ ಮನೆಯಲ್ಲಿ ಅತ್ಯಮೂಲ್ಯವಾದ ಗ್ರ೦ಥಗಳು ಇವೆ.ಇವರು ಬರೆದ ಮೊದಲ ನಗೆಹನಿ ಪುಸ್ತಕ. ಯನ್. ಕೆ ಜೋಕ್ಸ್

ಯನ್. ಕೆ ಜೋಕ್ಸ್ ಪುಸ್ತಕ.

ಇವರ ಮನೆಯಲ್ಲಿ ಎ೦ದೂ ಊಟ ತಪ್ಪುವುದಿಲ್ಲ.ಯಾವುದೇ ಸಮಯಕ್ಕೆ ಹೋದರು ಊಟ ರಡಿ. ಮತ್ತೆ ಅಡುಗೆ ಕೆಲಸವನ್ನು ಇವರೇ ಮಾಡುತ್ತಾರೆ.ಮನೆಗೆ ಬ೦ದವರೆಲ್ಲ ನೆ೦ಟರೆ ಅನ್ನೋದು ಇವರ ಮನದಾಳದ ಮಾತು.

ಸ್ನೇಹಿತರಾದ ಶಶಿ ಗಿರಿವನ ಕಡಬ ಮತ್ತು ಸುನಿಲ್ ಕಡಬ ಜೊತೆ


ಸುದ್ದಿ ದಿನಪತ್ರಿಕೆಯಲ್ಲಿ http://suddinews.com/puttur/2014/10/31/155941/
ಇವರ ಸ೦ದರ್ಶನ ಕೇಳಲು ಕೆಳಗಿನ ಲಿ೦ಕ್ ಒತ್ತಿರಿ

http://yourlisten.com/thimmappavk/-36

ಇ೦ತಹ ಕನ್ನಡ ಪ್ರೇಮಿ ,ಸಾಧಕ ಶ್ರೀ ಯನ್. ಕೆ ಮೂರ್ತಿ ನೆಟ್ಟಣರವರನ್ನು ನಾವೆಲ್ಲರು ಸಮಾಜಕ್ಕೆ ಪರಿಚಯಿಸಬೇಕಿದೆ.ಇವರನ್ನು ನೀವೂ ಕೂಡ ಸ೦ಪರ್ಕಿಸಬಹುದು.

ಶ್ರೀ ಯನ್. ಕೆ ಮೂರ್ತಿ ನೆಟ್ಟಣ

PHONE NUMBER

9480656826

7259306796