ನಿಮ್ಮ ಮನೆಯಲ್ಲಿ ಬಜೆ ಇದೆಯಾ?

ಒಣ ಬಜೆ

ಮಗು ಹುಟ್ಟಿದ ತಕ್ಷಣ ಒಂದಲ್ಲ ಒಂದು ರೀತಿಯಲ್ಲಿ ಮದ್ದುಗಳನ್ನು ನೀಡುತ್ತಲೇ ಇರುತ್ತಾರೆ . ಈ ಮದ್ದುಗಳ ಪೈಕಿ ಬಜೆಯು ಒಂದು .ಮುಖ್ಯವಾಗಿ ಮಕ್ಕಳಲ್ಲಿ ತೊದಲುವಿಕೆ ಸಮಸ್ಯೆ ಕಂಡುಬಂದಾಗ ಅಂದರೆ ವಾಕ್ ಶಕ್ತಿಯನ್ನು ಹೆಚ್ಚಿಸಲು ಈ ಒಣ ಬಜೆಯನ್ನು ಅರೆದು ಕೊಡುತ್ತಾರೆ . ಸಂಸ್ಕೃತ ದಲ್ಲಿ ವಜಾ ಎಂಬುದಾಗಿ ಕರೆಯುತ್ತಾರೆ. ನಾನು ಓದಿದ ಮಾಹಿತಿಯಂತೆ ಬಜೆಯ ಶಾಸ್ತ್ರೀಯ ಹೆಸರು `ಅಕೊರಸ್ ಕ್ಯಲಾಮಸ್.ಬಜೆಯನ್ನು ಆಯುರ್ವೇದ ಔಷಧದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ . ಈ ಬಜೆಯನ್ನು ಸೀಮಿತವಾಗಿ ವಾಗಿ ಅರೆದು ಕೊಡುತ್ತಾರೆ . ಒಂದುವೇಳೆ ಜಾಸ್ತಿಯಾದರೆ ವಾಂತಿಯಾಗುತ್ತದೆ .

ಒಣ ಬಜೆ

                                    ಒಣ ಬಜೆ

ಭೇದಿಯ ಶಮನಕ್ಕಾಗಿ ಹಸಿ ಬಜೆಯನ್ನು ಅರೆದು ಕೊಡುತ್ತಾರೆ . ಮತ್ತೊಂದು ವಿಶೇಷ ವೆಂದರೆ ಇದನ್ನು ಸುಟ್ಟು ಇದ್ದಿಲು (ಮಸಿ) ಮಾಡಿ ಕೊಟ್ಟರೆ ಮಲಬದ್ದತೆ ನಿವಾರಣೆ ಯೂ ಆಗುತ್ತದೆ .ಮನೆಯ ಹಿರಿಯರಲ್ಲಿ ಬಜೆಯ ಬಗ್ಗೆ ಸಾಮಾನ್ಯ ವಾಗಿ ಹೆಚ್ಚಾಗಿ ಗೊತ್ತಿರುತ್ತದೆ . ನನಗೂ ಬಜೆ ತಿನ್ನಿಸಿದರಂತೆ ಆಗ ನಾನು ಸಣ್ಣ ಪಾಪು ! ಬಜೆಯನ್ನು ಈಗ ನೋಡುವ ಅವಕಾಶವಾಯ್ತು . ಹಸಿ ಬಜೆಗಾಗಿ ತುಂಬಾ ಕಡೆ ಹುಡುಕಾಡಿದೆ ಆದರೆ ಎಲ್ಲೂ ಸಿಕ್ಕಿಲ್ಲ . ನನ್ನ ನೆರೆ ಮನೆಯ ಹಿರಿಯರು ಹೇಳುವಂತೆ ಮಕ್ಕಳಿಗೆ ಅತಿಸಾರ,ಕೆಮ್ಮು ,ನೆಗಡಿಯಾದಾಗ ಬಜೆಯನ್ನು ಪುಡಿಮಾಡಿ ಜೇನುತುಪ್ಪ ದೊಂದಿಗೆ ನೀಡಿದರೆ ಗುಣ ಮುಖವಾಗುತ್ತದೆಯಂತೆ . ಮತ್ತೆ ಗರ್ಭಿಣಿ ಯಾರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಾಗಿ ವಜಾಮೋದಕ ತಯಾರಿಸಿ ನೀಡುತ್ತಾರೆ . ಮತ್ತೆ ಮಕ್ಕಳಲ್ಲಿ ಕಿವಿ ನೋವು ಸಮಸ್ಯೆ ಉಂಟಾದಾಗ ಬಜೆಯ ತುಂಡಿನ ರಸವನ್ನು ಕಿವಿಗೆ ಬಿಡಬಹುದು . ಬಜೆಯ ಬಗ್ಗೆ ನಿಮಗೂ ಹೆಚ್ಚು ಗೊತ್ತಿದ್ದರೆ ತಿಳಿಸಿ ಆಯ್ತಾ ?

Advertisements

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ….


 ನನ್ನ ಲೇಖನದ ತಲೆಬರಹ ನೋಡಿ ಆಚ್ಚರಿ ಪಡಬೇಡಿ.ಯಾಕೆಂದರೆ ಇದು ನನ್ನ ಚುಟುಕದ ಒ೦ದು ಸಾಲು ಅಷ್ಟೇ…ಭಾನುವಾರದ೦ದು(೨೩-೧೧-೨೦೧೪) ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಮ೦ಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮೃತ ಪ್ರಕಾಶ ಪತ್ರಿಕೆ ಇದರ ಜ೦ಟಿ ಸಹಯೋಗದಲ್ಲಿ ಕಾಳಿಕಾ೦ಬಾ ದೇವಸ್ಥಾನದದಲ್ಲಿ ಚುಟುಕು ಕವಿ ಗೋಷ್ಠಿ  ಏರ್ಪಾಡಿಸಲಾಗಿತ್ತು .ನಾನು ಕವಿಯಾಗಿ ಭಾಗವಹಿಸಿದ್ದೆ.ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಕೂಡ ಬ೦ದಿದ್ದರು.ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಅವರು ಸ್ಪೂರ್ತಿ ನೀಡುತ್ತಾ ಬ೦ದಿದ್ದಾರೆ.

    ನಾನು ಕವಿಯಾಗಿ ಭಾಗವಹಿಸಿದ ಕ್ಷಣ

ನಾನು ವಾಚಿಸಿದ ಮೂರು ಚುಟುಕುಗಳು ಇಲ್ಲಿವೆ .

ನಿರ್ಭಯ

ಶಾಲಾ ಮಕ್ಕಳಿಗೆ ಭಯವಿಲ್ಲ

ಹತ್ತಿರ ಬ೦ದರೂ ಪರೀಕ್ಷೆ

ಯಾಕೆ೦ದರೆ …

ಹತ್ತರವರೆಗೆ ಪಾಸು ಮಾಡುತ್ತಾರಲ್ಲ?

ಅದೇ ಅವರಿಗೆ ಶ್ರೀ ರಕ್ಷೆ

ಬೆ೦ಬಲ

ಕ೦ಬಳಕ್ಕೆ ಇಲ್ಲವೇನೋ

ರಾಜಕೀಯ ನಾಯಕರ ಬೆ೦ಬಲ

ಹಾಗಾಗಿಯೇ ಸಭೆ ಸಮಾರಂಭದಲ್ಲೂ

ನಿದ್ದೆ ಮೂಗಿನಲ್ಲಿ ಸುರಿಸುತ ಸಿ೦ಬಳ…!

ಪರಿಣಾಮ

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ

ನೋಡುತ ತರುಣಿಯ ಕಣ್ಣ

ಆಕೆಯ ನಗುವಿಗೆ ಮೈ ಮರೆತು

ತಿ೦ದದ್ದು ಬರೇ ಸುಣ್ಣ…!

ನನ್ನ ಧ್ವನಿಯಲ್ಲಿಯೇ ಈಗ  ಚುಟುಕನ್ನು ಯೂಟ್ಯುಬ್ ನಲ್ಲಿ ಕೇಳಿ

ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಚುಟುಕು ವಾಚಸಿದ ಸ೦ದರ್ಭ

      ಎಡ್ವರ್ಡ್ ಲೋಬೋ

ಇದೇ ಸಮಯದಲ್ಲಿ ಚುಟುಕು ಭಾರ್ಗವ ಪ್ರಶಸ್ತಿಯನ್ನು ಪಟವರ್ಧನ್ ಅವರಿಗೆ ನೀಡಿ ಗೌರವಿಸಲಾಯಿತು.

                                                              ಶ್ರೀ ಪಟವರ್ಧನ್ ಅವರಿಗೆ ಚುಟುಕು ಭಾರ್ಗವ ಪ್ರಶಸ್ತಿ ಪ್ರಧಾನ ದ ಸ೦ದರ್ಭ

ಮೂಲೆಗು೦ಪು ಸೇರಿದ ಮೋಹನ್ ಬೋಳಾರ್ ರವರ ತುಳು ಲಿಪಿ


೦ಚ ದ್ರಾವಿಡ ಭಾಷೆಗಳಲ್ಲಿ  ಒ೦ದೆನಿಸಿರುವ  ತುಳು ಭಾಷೆಗೆ ಸತತ ಪರಿಶ್ರಮ ಮತ್ತು ಸ್ವ ಪ್ರಯತ್ನ ದಿ೦ದ ಹೊಸ ತುಳು ಲಿಪಿಯನ್ನು ಆವಿರಷ್ಕಾರಸಿದವರು ಮೋಹನ್ ಬೋಳಾರ್.ತನ್ನದೇ ಒ೦ದು ಮಟ್ಟದಲ್ಲಿ ಅಕ್ಷರವನ್ನು ಜೋಡಿಸಿ ಅದನ್ನು ಓದುವ ಹವ್ಯಾಸವನ್ನು ಬೆಳೆಸಿಕೊ೦ಡರು.ಸುಮಾರು ಹನ್ನೆರಡು ವರ್ಷಗಳ  ಹಿ೦ದೆಯೇ ತಾನು ಸಿದ್ದ ಪಡಿಸಿದ ಲಿಪಿಯನ್ನು ಕ೦ಪ್ಯೂಟರ್,ಬೆರಳಚ್ಚು,ಮತ್ತು ಅಚ್ಚಕ್ಷರಗಳಿಗೆ ಸುಲಭವಾಗಿ ಅಳವಡಿಸುವ೦ತೆ ಮಾರ್ಪಾಡು ಗೊಳಿಸಿದ್ದಾರೆ.ಈ ಹಿ೦ದೆ ತುಳುವಿಗೆ ತಿಕಳಾರಿ ಎ೦ಬ ಲಿಪಿಯಿ೦ದ ಬರವಣಿಗೆ ಸಾಧ್ಯವಿದೆ ಎ೦ಬ ಅಭಿಪ್ರಾಯ ವೇದ್ಯವಾಗಿದ್ದರೂ  ತಿಕಳಾರಿ ಎ೦ಬುದು ತುಳು ಲಿಪಿ ಅಲ್ಲವೆ೦ದು ಕರ್ನಾಟಕದ ಉದ್ದಗಲಕ್ಕೆ ಹರಡಿಕೊ೦ಡಿರುವ ಹಲವಾರು ವಿದ್ವಾ೦ಸರನ್ನು ಸ೦ಪರ್ಕಿಸಿದಾಗ ಇವರಿಗೆ ತಿಳಿಯಿತು.ಈ ಮಧ್ಯೆ 12 ವರ್ಷದ ಮೊದಲಿನ ಲಿಪಿಯ ಆವಿರಷ್ಕಾರವನ್ನು ಸ೦ಸ್ಕೃತ ಪ೦ಡಿತರಾದ  ಬಿ. ಎಲ್ ನಾಗರಾಜ್ ರವರು ಮೋಹನ್ ರವರ ಲಿಪಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರೂ ಯಾರು ಕೂಡ ಗಮನ ಹರಿಸಿಲ್ಲ.,ಹಾಗಾಗಿ ಲಿಪಿ ಹೊರಬರುವಾಗಲೇ 25 ವರ್ಷ ಮೂಲೆಗು೦ಪಾಗಿತ್ತು.ಈಗ ಮತ್ತೆ ಅದೇ ವಾತಾವರಣ ನಿರ್ಮಾಣವಾಗಿದೆ.

ಇವರ ತುಳು ಲಿಪಿಯಲ್ಲಿ 33 ವರ್ಣಮಾಲೆಗಳು ಮಾತ್ರ ಇವೆ.ತಳು ಸಾಹಿತ್ಯ ಅಕಾಡೆಮಿ ಯಾವುದೇ ಪ್ರೋತ್ಸಾಹ ನೀಡದೇ ಇದ್ದುದ್ದರಿ೦ದ ಮೋಹನ್ ರವರ ತುಳು ಲಿಪಿ ಮೂಲೆಗು೦ಪು ಸೇರಿತು.ಮೋಹನ್ ಬೋಳಾರ್  ರವರ ತುಳು ಲಿಪಿಯ ಬಗೆಗಿನ ಆಸಕ್ತಿ ಮತ್ತು ಪರಿಶ್ರಮವನ್ನುಶ್ಲಾಘಿಸಿ,ಹಿರಿಯ ಜಾನಪದ ತಜ್ಞ ಪ್ರೊ ಅಮ್ರುತಸೋಮೇಶ್ವರ, ಅ೦ದಿನ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಲಕೃಷ್ಣ  ಶೆಟ್ಟಿ ಪೊಳಲಿ ಮತ್ತು ಹಿರಿಯ ಗಡಿನಾಡ ಕವಿ  ಕಯ್ಯಾರ ಕಿಞ್ಞಣ್ಣ ರೈ ಶಿಫಾರಸು ಪತ್ರವನ್ನು ನೀಡಿದ್ದರು.

ಶ್ರೀ ಯುತ ಮೋಹನ್ ಬೋಳಾರ್

ಮೋಹನ್ ಬೋಳಾರ್ ಆವಿರಷ್ಕಾರಮಾಡಿರುವ ಲಿಪಿಯ ಬಗೆಗೆ ವಿದ್ವಾ೦ಸರ ಅಭಿಪ್ರಾಯಗಳು

@ ಕಯ್ಯಾರ ಕಿಞ್ಞಣ್ಣ ರೈ ರವರ ಮನದಾಳದ ಮಾತು:-

“ಇಷ್ಟೊ೦ದು ಆಳವು ವಿಶಾಲವೂ ಆದ ತುಳು ಲಿಪಿಗೆ ಇ೦ದಿನ ವೈಜ್ಞಾನಿಕ ಪ್ರಗತಿ ಯುಗದ ಧರ್ಮದ೦ತೆ ಸಾರ್ವತ್ರಿಕವಾಗಿ ಉಪಯೋಗಕ್ಕೆ ಅನುಕೂಲವಾಗುವ೦ತೆ ಮುದ್ರಣಕ್ಕೆ,ಬೆರಳಚ್ಚಿಗೆ,ಕ೦ಪ್ಯೂಟರ್ ಗೆ ಸಹಕಾರಿಯಾಗುವ೦ತೆ ಹೊ೦ದಿ ಬರಲುಶ್ರೀ  ಮೋಹನ್ ಬೋಳಾರ್ ರವರು ಸಾಹಸ ಕೆಲಸ ಮಾಡಿದ್ದಾರೆ.ಇದೊ೦ದು ಹೊಸ ಆವಿಸ್ಕಾರ.ಈ ಲಿಪಿ ಎಲ್ಲಾ ಭಾಷೆಗಳ ಉಪಯೋಗಕ್ಕೆ ಅನುಕೂಲವಾಗಿರುವುದರಿ೦ದ ಸ್ವಾಗತಾರ್ಹವಾಗಿದೆ.ಬೋಳಾರರ ಹೊಸ ತುಳು ಅಕ್ಷರ ಮಾಲೆ ನಾಡಿನಾದ್ಯ೦ತ  ಜನಪ್ರಿಯವಾಗಲಿ

ಮೋಹನ್ ಬೋಳಾರ್ ಆವಿರಷ್ಕಾರ ಮಾಡಿರುವ ಲಿಪಿ

@ ಹಿರಿಯ ಜಾನಪದ ತಜ್ಞ ಪ್ರೊ ಅಮೃತ ಸೋಮೇಶ್ವರ:

“ಲಿಪಿಯೂ ಒ೦ದು ಅಭಿಮಾನದ ಸ೦ಕೆತವಾಗಿದೆ.ತುಳುವಿನ ಬರವಣಿಗೆಗೆ ಬೇರೆ ಲಿಪಿ ಬೇಕೆ೦ಬ ಬಯಕೆಯೂ ಪ್ರಯತ್ನವೂ ಆಗಾಗ ಪ್ರಕಟವಾಗಿದೆ.ಹೊಸ ಆವಿರಷ್ಕಾರದ ಕನಸೀನು ತಪ್ಪಲ್ಲ.ಆದರೆ ಭಾಷೆ ಲಿಪಿ ಇತ್ಯಾದಿಗಳೆಲ್ಲ ಜನ ಸಮಸ್ಟಿಯ ಸೊತ್ತುಗಳು. ಮೋಹನ್ ಬೋಳಾರ್ ರವರ ನಿರ-ತಾರಾ ಸಾಧನೆ ತುಳುವಪ್ಪೆಯ ವಿಚಾರದಲ್ಲಿ ಅವರ ವೀರಭಕ್ತಿ ನಿಜವಾಗಿಯೂ ಶ್ಲಾಘ್ಯ.ಇವರ ಕಲಾವಿದ ಪ್ರಜ್ಞೆ ಚೆನ್ನಾಗಿ ಕೆಲಸ ಮಾಡಿದೆ.ಈ ಲಿಪಿಯನ್ನು ತುಳುವಿಗೆ ಮಾತ್ರವಲ್ಲದೆ ಇತರ ಭಾಷೆಗಳನ್ನೂ ಬರೆಯಲು ಬಳಸಬಹುದು.ಯೋಗ್ಯ ಪ್ರೋತ್ಸಾಹ ದೊರೆಯಲೆ೦ದು ಹಾರೈಸುತ್ತೇನೆ”

ತುಳು ಲಿಪಿಯಲ್ಲಿ ರಾಷ್ಟ್ರಗೀತೆ

@ ಬಾಲಕೃಷ್ಣ ಶೆಟ್ಟಿ ಪೊಳಲಿ:-

“ತುಳು ಬಾಸೆಗ್ ಅಯಿತ್ತನೆ ಒ೦ಜಿ ಲಿಪಿ ಉ೦ಡು ಪ೦ಡ್ ದ್ ಪ೦ಡಿತ ವೆ೦ಕಟರಾಜ ಪುಣಿ೦ಚತ್ತಾಯೆ ರ್ ತೋಜಾದ್ ಕೊರ್ತೆರ್.ಆ ಸಾದಿಟೆ  ಮೋಹನ್ ಲಾ ಚಿ೦ತನೆ ಮಲ್ತೆರ್ ಇ೦ಚಿತ್ತಿ ಕೆಲಸೊಗು ಬೆರಿ ಬೊಟ್ಟುನ ಅಗತ್ಯ.ಅರೆನ ಉಮೇದ್ ನಾನಲ ಬುಲೆವಡ್”

@ ಕೆ.ಕೆ ಗಟ್ಟಿ:-

“ಮೋಹನ್ ಬೋಳಾರ್ ರವರಈ ಅಕ್ಷರ ಆವಿರಷ್ಕಾರವನ್ನು ಎಲ್ಲರೂ ಮುತುವರ್ಜಿಯಿ೦ದ ಬಳಸಿ ಅಭ್ಯಾಸಿಸಿದರೆ ೨೬ ಅಕ್ಷರಗಳ ಇ೦ಗ್ಲಿಷ್ ನ೦ತೆ  ಎಲ್ಲಾ ಭಾಷೆಗಳಿಗೂ ಮೂಲಾಕ್ಷರವಾಗಿ ಬಳಕೆಗೆ ತರಬಹುದು.ಇಲ್ಲಿ ಭಾಷೆ ತಿಳಿದಿದ್ದರೆ ಸಾಕು.ಇದರಲ್ಲಿ ಮುಖ್ಯಪಾಲು ಇದರ ಬಗ್ಗೆ ನಾಡಿನ ಪ್ರತಿಷ್ಟಿತರ  ಮತ್ತು ವಿದ್ವಾ೦ಸರ ಸಹಕಾರ ಅಗತ್ಯ”

ತುಳು ಲಿಪಿಯಲ್ಲಿ ಬರೆದ ಕೆಲವು ಬರಹಗಳು

ಇಷ್ಟೆಲ್ಲಾ ಕೆಲಸ ಮಾಡಿರುವ ಮೋಹನ್ ಬೋಳಾರ್ ರವರ ಲಿಪಿ ಬಗ್ಗೆ ಈಗ ಯಾರು ಕೂಡ ಮಾತಾಡುತ್ತಿಲ್ಲ.ಕೆಲವರು ಇದು ಲಿಪಿಯೇ ಅಲ್ಲ ಎ೦ಬ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

“ತೌಳವ ಬಾಳ್ಗೆ  ತೌಳವ೦ಗೆಲ್ಗೆ”  ಎನ್ನುವ ಮಾತು  ಅರ್ಥಪೂರ್ಣವಾದಿತೆ?
ನನ್ನ ಈ ಲೇಖನ ಓದಿ ಅನೇಕ ಫೇಸ್ಬುಕ್ ಸ್ನೇಹಿತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

@Lakshmi G Prasad ಒಂದು ಲಿಪಿಯ ಆವಿಷ್ಕಾರ ಸಣ್ಣ ಸಾಧನೆಯಲ್ಲ ,ಲಿಪಿಗೆ ಭಾಷೆಯ ಹಂಗಿಲ್ಲ ,ಇದನ್ನು ಯಾವುದೇ ಭಾಷೆಗೂ ಬಳಸಬಹುದು ,ಲಿಪಿ ಇಲ್ಲದ ಭಾಷೆಯ ಬಳಕೆಗೆ ಇದು ಹೆಚ್ಚು ಸೂಕ್ತವಾದುದು ,ತುಳು ಭಾಷೆ ಸಂಸ್ಕ್ರತಿ ಮೇಲಿನ ಅಭಿಮಾನದಿಂದ ಇದನ್ನು ಸಿದ್ಧ ಪಡಿಸಿರುವ ಅವರ ಪ್ರಯತ್ನ ಶ್ಲಾಘ್ಯ .ಅದನ್ನು ಗುರುತಿಸುವಬೇಕು ಕೂಡ .ಆದರೆ ತುಳು ಭಾಷೆಗೆ ಅದರದ್ದೇ ಆದ ಲಿಪಿ ಇದ್ದ ಬಗ್ಗೆ ,ತುಳು ಭಾಷೆಯಲ್ಲಿ ರಚಿತವಾದ ಕೃತಿಗಳನ್ನು ಸಂಗ್ರಹಿಸಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು ತಿಳಿಸಿ ಅದನ್ನು ನಿರೂಪಿಸಿದ್ದಾರೆ ,ಅದು ಶಾಸನದಲ್ಲಿಯೂ ಬಳಕೆ ಆಗಿದೆ ,ಇದನ್ನು ಲಿಪಿ ತಜ್ಞರು ತಿಗಳಾರಿ/ಗ್ರಂಥ ಲಿಪಿ ,ತುಳು ಲಿಪಿಯಲ್ಲ ಎಂದು ಕೂಡ ಅಭಿಪ್ರಾಯ ಪಟ್ಟಿದ್ದಾರೆ ,ಏನೇ ಇದ್ದರೂ ಇದನ್ನು ಕೂಡ ನಿತ್ಯದ ಬಳಕೆಗೆ ತರುವುದು ಕಷ್ಟ ಸಾಧ್ಯವಾಗಿದೆ ,ಪ್ರಸ್ತುತ ತುಳು ಭಾಷೆಗೆ ಇಲ್ಲಿನ ಜನ ತಿಳಿದಿರುವ ಕನ್ನಡ ಲಿಪಿಯೇ ಸೂಕ್ತವಾಗಿದೆ ,ತುಳು /ತಿಗಳಾರಿ ಯಲ್ಲಿರುವ ಕೃತಿಗಳ ಲಿಪ್ಯಂತರ ,ಹಾಗೂ ಲಿಪಿಯ ಉಳಿಕೆ ಹಾಗೂ ಬಳಕೆಗಾಗಿ ಇದನ್ನೂ ಕಲಿಯಬೇಕು ಕಲಿಸಬೇಕು ,ಆಸಕ್ತರು ಮೋಹನ್ ಬೋಳಾರ್ ಆವಿಷ್ಕರಿಸಿದ ಲಿಪಿಯನ್ನೂ ಕಲಿಯಬಹುದು.
@Gvs Ullal aklaklena swanthag malthina lipin tulu lipi panpunu thappu. bolar olaandala tulu lipi shaasana hasthaprathi iththnda aarna lipitha aadhaarad odhere aapundaandh thuvad. bokka academyn dhoorad
Sinchana Shyam ಮಲೆಯಾಳಿ ಅಕ್ಷರ ಗಳಿರುವ ಲಿಪಿಯನ್ನು ತುಳು ಲಿಪಿಯೆಂದು ಗುರುತಿಸಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದೇ ಹೇಳ ಬೇಕು…ಯಾಕೆಂದರೆ ಮೋಹನ್ ಬೋಳಾರ್ ರವರ ತುಳು ಲಿಪಿಯಲ್ಲಿ ಒಂದೇ ಒಂದು ಮಲೆಯಾಳಿ ಅಕ್ಷರಗಳಿಲ್ಲ…ಇದನ್ನು ನಮ್ಮ ಹಿರಿಯ ಸಾಹಿತಿಗಳು , ವಿದ್ವಾಂಸರು , ವಿಮರ್ಶಕರು ಈಗಾಗಲೇ ಒಪ್ಪಿಕೊಂಡಿದ್ದಾರೆ…ಅದಕ್ಕೆ ನನ್ನಲ್ಲಿ ಆಧಾರವೂ ಇದೆ…ಇನ್ನಾದರೂ ಮೋಹನ್ ಬೋಳಾರ್ ರವರ ಶುದ್ಧ ತುಳು ಲಿಪಿಯನ್ನು ನಮ್ಮ ನಿಮ್ಮೆಲ್ಲರ ಸಹಕಾರ , ಆಶೀರ್ವಾದದೊಂದಿಗೆ ಗುರುತಿಸೋಣ..ಮೂಲೆ ಗುಂಪು ಸೇರುವಂತೆ ಮಾಡದೆ ಮೋಹನ್ ಬೋಳಾರ್ ರವರೂ ಒಬ್ಬ ನಮ್ಮ ತುಳು ನಾಡಿನ ಶುದ್ಧ ತುಳುಲಿಪಿ ಅಕ್ಷರ ಸಂಶೋಧಕ ಎಂಬುವುದನ್ನು ನೆನೆಪಿಸೋಣ….( ಹಲವಾರು ಶಾಲೆಯ ಮಕ್ಕಳು ಈಗಾಗಲೇ ಮೋಹನ್ ಬೋಳಾರ್ ರವರ ತುಳು ಲಿಪಿಯನ್ನು ಕಲಿತು ಅಭ್ಯಾಸ ಮಾಡಿದ್ದಾರೆ) …ವಿ . ಕೆ . ಕಡಬರವರ ಈ ಲೇಖನಕ್ಕೆ ಅಭಿನಂದನೆಗಳು…….
@Vidya Shree S Rai Nijavaagluvidhu tulu lipiye aagidhre kevala ee lipiyanne kalithavaru tulu lipiya thaadeyole athava granthadha kevala ondhu puta athava ondheradu saalu odhi helidhare naavu idhu tulu lipiyendhu oppikolluththeve. Alladhe malayala rahitha tulu ennuva badhalu tulu rahitha malayala lipi maadidhare olleyadhu. Eegaagale sikkiruva elle aadhaaragalu lipiyannu janaredhuru theredhitta punchiththaayaraadhiyaagi needidha ella lipigalu dharmasthala udupi matagalalliruva tulu lipigalu academy angeekarisidha lipiyantheye iruvudhu gamanisa bekaadha amsha.
@Shanthappa Babu ತುಳು ಲಿಪಿ ಶಾಲಾ ಕಾಲೇಜುಗಳಲ್ಲಿ ಕಲಿಸುತ್ತಿರುವವರು ಶ್ರೀ ಮತಿ ಜಿವಿಎಸ್ ಉಳ್ಳಾಲ್ ರವರು. ನನ್ನ ಗಮನಕ್ಕೆ ಬಂದ ಹಾಗೆ ಪ್ರಸ್ತುತ ಮಂಗಳೂರಿನ ರಾಮಕೃಷ್ಣ ಕಾಲೇಜಲ್ಲಿ ತರಗತಿ ನಡೆಸುತ್ತಿದ್ದಾರೆ. ಪೂರ್ತಿ ತರಗತಿ ಉಚಿತವಾಗಿ ಕಲಿಸುತ್ತಿದ್ದಾರೆ. ಅದರಲ್ಲಿ ಗೊತ್ತಾಗುತ್ತದೆ ಇವರಿಗೆ ತುಳು ಲಿಪಿ ಬಗ್ಗೆ ಇರುವ ಆಸಕ್ತಿ, ಬದ್ದತೆ.
ತುಳು ಲಿಪಿ ಬಗ್ಗೆ ಪುಸ್ತಕ ಪ್ರಕಟಿಸಿ ಸುಮ್ಮನೇ ಕುಳಿತು ಕೊಂಡರೆ ಯಾರಿಗೆ ಗೊತ್ತಾಗುತ್ತದೆ. ತುಳು ಲಿಪಿ ಪುಸ್ತಕದ ಪ್ರಕಟಿಸಲು ಜಿವಿಎಸ್ ರವರು ಪಟ್ಟ ಕಷ್ಟವನ್ನು ಕಣ್ಣಾರೆ ಕಂಡವನು ನಾನು. ನಾನು ನೋಡಿದ ಹಾಗೆ ಅವರು ಪುಸ್ತಕವನ್ನು ಮಾರದೆ ಉಚಿತವಾಗಿ ಕೊಟ್ಟಿದ್ದಾರೆ. ಈಗ ಹೇಳಿ ಬರಿ ಪ್ರಕಟಿಸಿ ಸುಮ್ಮನೇ ಕುಳಿತರೆ ಲಿಪಿ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿತ್ತಾ ?

ಉಪಸಂಪಾದಕನ ಶಬ್ದ ಸಂಪಾದನೆ- ಸ್ಟೀವನ್ ರೇಗೊ


ಇತ್ತೀಚೆಗೆ ಸಿರಿ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡ ಸ್ಟೀವನ್ ರೇಗೊ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಮತ್ತು ವರದಿಗಾರರಾಗಿ ಎಲ್ಲರಿಗೂ ಚಿರಪರಿಚಿತರು. ಮೂಲತ: ಪುತ್ತೂರು ತಾಲೂಕಿನ ದಾರ೦ದಕುಕ್ಕು ನಿವಾಸಿ ತಾಯಿ ಹಿಲ್ಡಾ ರೇಗೊ ತಂದೆ ಇಗ್ನೇಶಿಯಸ್ ರೇಗೋ.
ಬಾಲ್ಯದಲ್ಲಿಯೇ ಪುತ್ತೂರಿನ ಸುದ್ದಿ ಪತ್ರಿಕೆಗೆ ಸಣ್ಣ ಕವನ, ಲೇಖನಗಳನ್ನು ಬರೆಯುವ ಮೂಲಕ ಶುರುವಾದ ಬರವಣಿಗೆ ಇಂದು ಉಪಸಂಪಾದಕ ಹುದ್ದೆಯ ವರೆಗೆ ತಲುಪಿಸಿದೆ. ರೇಗೊರವರಿಗೆ ತಾನು ಮಾಧ್ಯಮ ವರದಿಗಾರನಾಗಬೇಕೆಂದು ಎಳೆ ವಯಸ್ಸಿನಲ್ಲೆ ಕನಸು ಕಂಡವರಲ್ಲ .ಏನಾದರೊಂದು ಹೊಸ ಲೇಖನ ಬರೆಯಬೇಕು ಎಂದು ಆಲೋಚಿಸಿದಾಗ ಇವರಿಗೆ ನೆನಪಿಗೆ ಬಂದದ್ದು ಪುತ್ತೂರಿನ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆಯಾಗಿದ್ದು ಅಂದು ಪ್ರಜವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ದರ್ಶನ ಅಂಕಣದಲ್ಲಿ ಮುಖಪುಟದಲ್ಲಿ ಲೇಖನ ಪ್ರಕಟವಾಗಿದ್ದೆ ಹೊಸ ತಿರುವನ್ನು ಪಡೆದು ಕೊಂಡಿತು. ಸ್ಟೀವನ್ ರೇಗೊ ಎಂಬ ಹೆಸರು ಎಲ್ಲೆಡೆ ಹರಡಿತು.
ಇನ್ನೊಂದು ವಿಶೇಷವೆಂದರೆ ಕನ್ನಡ ಸಿನಿಮಾ ಚಿತ್ರರಂಗಕ್ಕೆ ಈಗಾಗಲೇ sandalwood ಎಂಬ ಹೆಸರು ಜಗದೆಲ್ಲೆಡೆ ಹೋಗಿತ್ತು. ಆಗ ತುಳು ಚಿತ್ರರಂಗಕ್ಕೂ ಒಂದು ಹೆಸರು ಇದ್ದರೆ ಚಂದ ಎನ್ನುವುದು ಇವರ ಆಲೋಚನೆಯಾಗಿತ್ತು. ಆ ಸಮಯದಲ್ಲಿ 40 ಸಿನಿಮಾ ದಾಟಿದರೂ ಕರಾವಳಿ ತೀರದ ಸಿನಿಮಕ್ಕೊಂದು ನಾಮಕರಣ ಬೇಕೆ ಬೇಕು ಎನ್ನುವಾಗ ಇವರಿಗೆ ಹೊಳೆದದ್ದೆ “ಕೊಸ್ಟಲ್ ವುಡ್”
ಈಗ ಈ coastalwood ಪದ ದೇಶದೆಲ್ಲೆಡೆ ಹರಡಿದ್ದು ಎಲ್ಲ ಮಾಧ್ಯಮಗಳು ಈಗ ಕೊಸ್ಟಲ್‍ವುಡ್ ಎಂದೇ ಇಡೀ ತುಳು ಚಿತ್ರರಂಗವನ್ನು ಕರೆಯುತ್ತಿದೆ . steevan press
ಮತ್ತೊಂದು ಸುದ್ದಿಯೆಂದರೆ ಕನ್ನಡ ಪತ್ರಿಕೆಯಲ್ಲಿ ಅದುಕೂಡ ರಾಜ್ಯವ್ಯಾಪ್ತಿಯ ಅವೃತ್ತಿಯಲ್ಲಿ ಮಂಗಳೂರಿನ ಸಿನಿಮಾ ಸುದ್ದಿಗಳ ಬಗ್ಗೆ ವಿಶೇಷವಾಗಿ ‘ಕುಡ್ಲ’ ಎನ್ನುವ ತುಳು ಶಬ್ದವನ್ನು ಪ್ರಯೋಗ ಮಾಡಿದವರಲ್ಲಿ ಇವರು ಮೊದಲಿಗರು.
ಗ್ರಾಮೀಣ ಭಾಗದಿಂದಲೇ ಬೆಳೆದು ಬಂದ ಸ್ಟೀವನ್ ರೇಗೊರವರು ಗ್ರಾಮೀಣ ಜನ ಜೀವನ ಅಲ್ಲಿಯ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡವರು. ಹಾಗಾಗಿಯೇ ಗ್ರಾಮೀಣ ವರದಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ.
ಇದರ ಫಲವಾಗಿಯೇ ‘ಕಡಂದಲೆ’ ಪ್ರಶಸ್ತಿಗೆ ಇವರು ಆಯ್ಕೆಯಾದರು .ಜಗತ್ತಿನೆಲ್ಲೆಡೆ ಮಲ್ಲಿಗೆಯ ಕಂಪು ಬೀರಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬಗ್ಗೆ ನೀವೆಲ್ಲ ತಿಳಿದಿರಬೇಕಲ್ಲವೆ? ಹೆಸರಾಂತ ಮಲ್ಲಿಗೆಯ ಬೆನ್ನು ಹತ್ತಿದಾಗ ಆ ಮಲ್ಲಿಗೆಗೆ ಬಳಸುತ್ತಿದದ್ದು ಮಾತ್ರ ವಿಷಕಾರಿ ಕೀಟನಾಶಕ! ಹೌದು ಈ ಮಲ್ಲಿಗೆಯ ವರದಿಯನ್ನು ತಯಾರಿಸಿ ಕೃಷಿಗೆ ಮತ್ತು ಕೃಷಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಇವರ ಲೇಖನ ಒಂದು ಆಂದೋಲನವನ್ನೇ ಮಾಡಿತು. ಅದಕ್ಕಾಗಿ ಕಿನ್ನಿಗೋಳಿಯ ಯುಗ ಪುರುಷ ಮತ್ತು ವಿಜಯ ಕಲಾವಿದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ|| ಕೆ.ಜೆ. ಶೆಟ್ಟಿ ಕಡಂದಲೆ ಇವರ ಸ್ಮರಣಾರ್ಥ “ಕಡಂದಲೆ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ನಮ್ಮ ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಇಲ್ಲೇ ಸಾಯುವ ನಂದಿನಿ ನದಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನಕ್ಕೆ ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಪಾ.ಗೊ (ಪದ್ಯಾಣ ಗೋಪಾಲಕೃಷ್ಣ) ಪ್ರಶಿಸ್ತಿಗೂ ಇವರು ಅರ್ಹರಾದರು. ಇನ್ನು ಮೆಗಾ ಮಿಡಿಯದ 10ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಲೇಖನ ಸ್ವರ್ಧೆಗೆ ಊIಗಿ ಭಾದಿತ ಎಳೆಯ ಮಕ್ಕಳ ಬಗೆಗಿನ ಲೇಖನ ಕೂಡ ಗುಣಮಟ್ಟದ ವರದಿಗಾರಿಕೆಗೆ ಸಾಕ್ಷಿಯಾಗಿದೆ .steevan-1
ಇನ್ನು ಮಸಾಲೆ ಅರೆಯುವುದರಲ್ಲಿ ಎತ್ತಿದ ಕೈ.ಅಂದರೆ ಅಡುಗೆ ಕೋಣೆಯಲ್ಲಿ ಅಲ್ಲ… ಕರಾವಳಿ ಸಿನಿಮಾ ಸುದ್ದಿಗಳಿಗೆ! ಎಲ್ಲ ವಯೋ ಮಾನವವರು ಓದಲೇ ಬೇಕೆನಿಸುತ್ತದೆ. ಇಂತಹ ಕರಾವಳಿ ಸಿನಿಮಾ ಸುದ್ದಿಗಳನ್ನು 4 ವರ್ಷಗಳಿಂದ ಬರೆಯುತ್ತಿದ್ದ ಇವರ ಲೇಖನದ ಗುಣಮಟ್ಟ ಮತ್ತು ಅತೀ ಹೆಚ್ಚು ಸಿನಿಮಾ ಲೇಖನ ಬರೆದ ಫಲವಾಗಿ 2014ರ ಸಿರಿ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಇದಿಗಾ ಇವರ ಎಲ್ಲಾ ಲೇಖನಗಳಿಗೆ ತಮ್ಮ ಪತ್ನಿ ಸಾಥ್ ನೀಡುತ್ತಿದ್ದಾರೆ.